Sunday, September 8, 2024

Latest Posts

ತುಂಬಾ ಈಸಿಯಾಗಿ ತಯಾರಿಸಬಹುದಾದ ಪುದೀನಾ ರೈಸ್ ರೆಸಿಪಿ

- Advertisement -

Recipe: ಇಂದು ನಾವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪುದೀನಾ ರೈಸ್ ರೆಸಿಪಿಯನ್ನು ಹೇಳಲಿದ್ದೇವೆ. ಪುದೀನಾ ರೈಸ್ ಮಾಡಲು ಏನೇನು ಸಾಮಗ್ರಿ ಬೇಕು..? ಅದನ್ನು ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಪುದೀನಾ, ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಕೊಂಚ ಶುಂಠಿ, 5ರಿಂದ 6 ಎಸಳು ಬೆಳ್ಳುಳ್ಳಿ, 4 ಸ್ಪೂನ್ ಎಣ್ಣೆ, ಜೀರಿಗೆ, ಕೊಂಚ ಗೋಡಂಬಿ, 2 ಈರುಳ್ಳಿ, ಗರಂ ಮಸಾಲೆ, ಪೆಪ್ಪರ್ ಪುಡಿ, ಧನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅವಶ್ಯಕತೆ ಇದ್ದಲ್ಲಿ ಕೊಂಚ ಸಕ್ಕರೆ, ಅನ್ನ.

ಮೊದಲು ಮಿಕ್ಸಿ ಜಾರ್‌ನಲ್ಲಿ ಪುದೀನಾ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಪ್ಯಾನ್‌ ಬಿಸಿ ಮಾಡಿ, ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ನೀರುಳ್ಳಿ ಹಾಕಿ ಹುರಿಯಿರಿ. ಬಳಿಕ ಗೋಡಂಬಿ, ಈ ಪೇಸ್ಟ್, ಗರಂ ಮಸಾಲೆ, ಚಾಟ್ ಮಸಾಲೆ, ಪೆಪ್ಪರ್ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ಅನ್ನ ಮತ್ತು ಕೊಂಚ ಸಕ್ಕರೆ ಹಾಕಿ ಮಿಕ್ಸ್ ಮಾಡಿದ್ರೆ, ಪುದೀನಾ ರೈಸ್ ರೆಡಿ.

Deepavali Special:ಅವಲಕ್ಕಿ ಚಿವಡಾ ರೆಸಿಪಿ

ಬಾಣಂತನದ ಸಮಯದಲ್ಲಿ ಕೂದಲು ಉದುರುವುದನ್ನು ಹೇಗೆ ತಡೆಯಬೇಕು..?

ಸುಟ್ಟ ಗಾಯಗಳು ಮಾಸಿ ಹೋಗುತ್ತಾ..?

- Advertisement -

Latest Posts

Don't Miss