Monday, October 6, 2025

Latest Posts

ನಿಜವಾದ ಗೆಳೆಯನಲ್ಲಿ ಇಂಥ ಗುಣಗಳಿರುತ್ತದೆ ನೋಡಿ… ನಿಮ್ಮ ಗೆಳೆತನ ಹೀಗೆ ಇದೆಯಾ..?- ಭಾಗ 2

- Advertisement -

ನಾವು ಮೊದಲ ಭಾಗದಲ್ಲಿ ವಿದುರ ನೀತಿಯ ಪ್ರಕಾರ, ಓರ್ವ ಉತ್ತಮ ಗೆಳೆಯನಲ್ಲಿ ಇರುವ ಸ್ವಭಾವಗಳು ಯಾವುದು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..

ವಿದುರನ ಪ್ರಕಾರ ಮನುಷ್ಯ ವಿದ್ಯೆ, ಬುದ್ಧಿ, ಕೆಲಸ ಮತ್ತು ವಯಸ್ಸಿನಲ್ಲಿ ತನಗಿಂತ ದೊಡ್ಡವರಾದವರ ಹತ್ತಿರ ಸ್ನೇಹ ಮಾಡಬೇಕು. ಯಾಕೆ ಹೀಗೆ ಮಾಡಬೇಕಂದ್ರೆ, ಅಂಥವರಿಂದ ನಿಮಗೆ ಉತ್ತಮ ಸಲಹೆ ಸಿಗುತ್ತದೆ. ನೀವು ಯಾವುದಾದರೂ ಕೆಲಸ ಮಾಡುವ ಮುನ್ನ, ಅವರ ಬಳಿ ಈ ಬಗ್ಗೆ ಹೇಳಿ ಅವರಿಂದ ಸಲಹೆ ಪಡೆಯಬಹುದು. ಯಾಕಂದ್ರೆ ಅವರು ಜೀವನದಲ್ಲಿ ನಿಮಗಿಂತ ಹೆಚ್ಚು ಅನುಭವ ಹೊಂದಿರುತ್ತಾರೆ.

ಆದ್ರೆ ನೀವು ನಿಮಗಿಂತ ವಯಸ್ಸಿನಲ್ಲಿ, ವಿದ್ಯೆ, ಬುದ್ಧಿಯಲ್ಲಿ ದೊಡ್ಡವರಾಗಿರುವವರ ಸ್ನೇಹ ಮಾಡುವುದಕ್ಕೂ ಮುನ್ನ, ಅವರ ಗುಣ ಎಂಥದ್ದು ಎಂದು ಖಂಡಿತ ತಿಳಿಯಬೇಕು. ಯಾಕಂದ್ರೆ ಅವರು ವಿದ್ಯೆ, ಬುದ್ಧಿ, ವಯಸ್ಸಿನಲ್ಲಿ ನಿಮಗಿಂತ ಹಿರಿಯರಿದ್ರು, ಕೆಲವರು ಗುಣದಲ್ಲಿ ಮಾತ್ರ ಕೆಳಮಟ್ಟ ತೋರಿಸಬಹುದು. ಹಾಗಾಗಿ ಇಂಥವರ ಸಹವಾಸದ ಮೊದಲು ಗುಣ ಕಂಡುಕೊಳ್ಳುವುದು ಒಳಿತು.

ಇನ್ನು ಈ ಮೇಲೆ ಹೇಳಿದ ಎಲ್ಲ ಗುಣಗಳು ಬರೀ ನಿಮ್ಮ ಗೆಳೆಯನ್ನಲ್ಲಷ್ಟೇ ಹುಡುಕಬೇಡಿ. ಇಂಥ ಗುಣ ನಿಮ್ಮಲ್ಲೂ ಇರುವಂತೆ ಕಂಡುಕೊಳ್ಳಿ. ನಿಮಗಿಂತ ಚಿಕ್ಕವರಿಗೆ ಉತ್ತಮ ಗೆಳೆಯನಾಗಿ, ಜೀವನ ಪಾಠ ಹೇಳಿ. ನಿಮ್ಮ ಜೀವನದ ಅನುಭವವನ್ನು ಹಂಚಿಕೊಳ್ಳಿ. ನಿಮ್ಮ ಸ್ನೇಹಿತ ಕಷ್ಟದಲ್ಲಿರುವಾಗ ಅವನಿಗೆ ಸಹಾಯ ಮಾಡಿ. ನಿಮ್ಮ ಸ್ನೇಹಿತನಿಗೆ ಯಾವಾಗಲೂ ಒಳ್ಳೆಯದನ್ನೇ ಬಯಸಿ. ಆಗಲೇ ನೀವೂ ಒಬ್ಬ ಉತ್ತಮ ಗೆಳೆಯನಾಗಲು ಸಾಧ್ಯ ಎನ್ನುತ್ತಾರೆ ವಿದುರ.

- Advertisement -

Latest Posts

Don't Miss