Monday, September 9, 2024

Latest Posts

ಲಂಡನ್ ನಲ್ಲಿ ಮಿಸ್ಟರ್ & ಮಿಸೆಸ್ ಕೊಹ್ಲಿ ಜಾಲಿ ರೌಂಡ್ಸ್

- Advertisement -

ವಿಶ್ವಕಪ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿರುವ ಟೀಮ್ ಇಂಡಿಯಾ, ಇಂದು ಶ್ರೀಲಂಕಾ ವಿರುದ್ಧ ಅಂತಿಮ ಲೀಗ್ ಪಂದ್ಯವನ್ನಾಡುತ್ತಿದೆ. ಸದ್ಯ ಅದೇ ಖುಷಿಯಲ್ಲಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಲಂಡನ್ ನ ಬೀದಿ ಬೀದಿಗಳಲ್ಲಿ ಬಿಂದಾಸ್ ಆಗಿ ಸುತ್ತಾಡಿದ್ದಾರೆ. ಹೌದು..ಕ್ಯಾಪ್ಟನ್ ಕೊಹ್ಲಿ ಸದ್ಯ ಫುಲ್​ ಜಾಲಿ​ ಮೂಡ್​ನಲ್ಲಿದ್ದಾರೆ. ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾ, ಸ್ವಲ್ಪ ನಿರಾಳವಾಗಿದೆ. ಇದೇ ಖುಷಿಯಲ್ಲಿರುವ ವಿರಾಟ್​ ಪತ್ನಿ ಅನುಷ್ಕಾ ಜೊತೆ ಎಂಜಾಯ್​ ಮಾಡ್ತಿದ್ದಾರೆ. ಲಂಡನ್​ನಲ್ಲಿ ಪತ್ನಿ ಅನುಷ್ಕಾ ಜೊತೆ ಸುತ್ತಾಡಿತ್ತಿರುವ ಪೋಟೋವನ್ನ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಜೊತೆಗೆ ಮಿಸ್ಟರ್ ಅಂಡ್ ಮಿಸಸ್ ಅಂತ ಬರೆದು ಕೊಂಡಿದ್ದಾರೆ.

ಸದ್ಯ ಈ ಪೋಸ್ಟ್ ಗೆ ಸುಮಾರು ಎರಡುವರೆ ಲಕ್ಷ ಲೈಕ್ ಗಳು ಬಂದಿವೆ. ಅಷ್ಟೇ ಅಲ್ಲದೇ ಅನುಷ್ಕಾ ಶರ್ಮಾ ಕೂಡ, ತಮ್ಮ ಇನ್ ಸ್ಟಗ್ರಾಮ್ ನಲ್ಲಿ ಇಬ್ಬರ ಫೋಟೋ ಪೋಸ್ಟ್ ಮಾಡಿದ್ದು ಸುಮಾರು ಇಪ್ಪತ್ತು ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪರ್ಫಾರ್ಮೆನ್ಸ್ ನೀಡುತ್ತಿರುವ ಕೊಹ್ಲಿ ಪಡೆ, ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಂದು ನಡೆಯಲಿರುವ ತನ್ನ ಅಂತಿಮ ಲೀಗ್ ನಲ್ಲಿ ಲಂಕಾ ತಂಡವನ್ನು ಎದುರಿಸುತ್ತಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

https://www.youtube.com/watch?v=XoF3tAEuELQ
- Advertisement -

Latest Posts

Don't Miss