- Advertisement -
ನವದೆಹಲಿ: ಮೋದಿ ಸರ್ಕಾರದ 2ನೇ ಬಜೆಟ್ ಕೆಲವರಿಗೆ ಸಂತಸ ಮೂಡಿಸಿದ್ರೆ ಕೆಲವರಿಗೆ ನಿರಾಶೆ ತಂದಿದೆ. ಕೇಂದ್ರ ಬಜೆಟ್ ಬಗ್ಗೆ ಸಂಸದೆ ಸುಮಲತಾ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಜಟ್ ಕುರಿತು ಪ್ರತಿಕ್ರಿಯೆ ನೀಡಿದ ಮಂಡ್ಯ ಸಂಸದೆ ಸುಮಲತಾ, ಲೋಕಸಭೆಯಲ್ಲಿ 45 ವರ್ಷಗಳ ಬಳಿಕ ಮಹಿಳಾ ಹಣ ಕಾಸು ಸಚಿವೆ ಆಯ-ವ್ಯಯ ಮಂಡಿಸಿರೋ ಬಗ್ಗೆ ಸಂತಸ ವ್ಯಕ್ತಪಡಿಸಿದ್ರು. ಇನ್ನು ನೀರಿನ ಸಮಸ್ಯೆ ಬಗ್ಗೆ ಬಜೆಟ್ ನಲ್ಲಿ ಸವಿಸ್ತಾರವಾಗಿ ಮಾತನಾಡಿದ್ರೆ ಚೆನ್ನಾಗಿರ್ತಿತ್ತು. ಹೀಗಾಗಿ ನೀರಿನ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಗಲಿಲ್ಲ ಅಂತ ಹೇಳಿದ್ರು. ಅಲ್ಲದೆ ದೇಶದ ಭವಿಷ್ಯದ ದೃಷ್ಟಿಯಿಂದ ಈ ಬಜೆಟ್ ಅನುಕೂಲವಾಗಲಿದೆ ಅಂತ ಸುಮಲತಾ ಇದೇ ವೇಳೆ ಅಭಿಪ್ರಾಯಪಟ್ಟರು.
ರೈತರಿಗೆ ಬಜೆಟ್ ನಲ್ಲಿ ಸಿಕ್ಕಿದ್ದೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -