Food Adda: ಕರ್ನಾಟಕ ಟಿವಿಯ ಫುಡ್ ಅಡ್ಡಾ ಚಾನೆಲ್‌ನಲ್ಲಿ ಹಲವು ಹೊಟೇಲ್‌ಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಒಂದು ಸ್ಪೆಶಲ್ ಹೊಟೇಲ್ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಈ ಹೊಟೇಲ್ ಮಾಲೀಕ ಬಿಕಾಂ ವಿದ್ಯಾರ್ಥಿ. ಇವರು ವೆರೈಟಿ ವೆರೈಟಿ ಮೊಮೋಸ್ ಮಾರಾಟ ಮಾಡುತ್ತಾರೆ. ಹಾಗಾದ್ರೆ ಇವರ ಹೊಟೇಲ್ ಎಲ್ಲಿದೆ..? ಹೇಗಿದೆ..? ಇಷ್ಟು ಚಿಕ್ಕ ವಯಸ್ಸಿಗೆ ಯಾಕೆ ಈ ಯುವಕ ಹೊಟೇಲ್ ಆರಂಭಿಸಿದರು..? ಈ ಎಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಈ ಯುವಕ ಬೆಳಿಗ್ಗೆ ಕಾಲೇಜಿಗೆ ಹೋಗಿ, ಸಂಜೆ ಹೊತ್ತಿಗೆ ಹೊಟೇಲ್ ಓಪೆನ್ ಮಾಡುತ್ತಾರೆ. ಸಮೃದ್ಧಿ ಮೊಮೋಸ್ ನಡೆಸುತ್ತಿರುವ ಯುವಕ ಒಂದು ವರ್ಷ ಮೊದಲು ಕೆಎಫ್‌ಸಿಯಲ್ಲಿ ಕೆಲಸ ಮಾಡುತ್ತಿದ್ದರು. ದುರಾದೃಷ್ಟವಶಾತ್ ಯುವಕನ ಅಪಘಾತವಾಯಿತು. ಬಳಿಕ 3 ತಿಂಗಳು ಬೆಡ್ ರೆಸ್ಟ್‌ನಲ್ಲಿದ್ರು. ಇದಾದ ನಂತರ ನಾವೇ ಏನಾದ್ರೂ ಸ್ವಂತದ್ದು ಮಾಡಬೇಕು ಎಂಬ ಕಾರಣಕ್ಕೆ, 6 ತಿಂಗಳ ಹಿಂದೆ ಸಮೃದ್ಧಿ ಮೊಮೋಸ್ ಎಂಬ ಹೊಟೇಲ್ ಓಪೆನ್ ಮಾಡಿದರು.
ಆದರೂ ಕೂಡ ಜನ ಉತ್ತಮವಾಗಿ ರೆಸ್ಪಾನ್ಸ್ ಮಾಡುತ್ತಿದ್ದಾರೆ. ದೂರ ದೂರದಿಂದ ಬರುವ ಗ್ರಾಹಕರು ಚಾಕೋಲೇಟ್ ಮೊಮೋಸ್‌ನಾ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇವರೆಲ್ಲ ಮೊದಲು ಚಾಕೋಲೆಟ್ ಮೊಮೋಸ್‌ನಾ ಬೇಡಾ ಅಂತಾ ಹೇಳ್ತಿದ್ರಂತೆ. ಆದ್ರೆ ಒಂದು ಪೀಸ್ ಚಾಕೋಲೇಟ್ ಮೊಮೋಸ್‌ನಾ ಫ್ರೀಯಾಗಿ ಕೊಡೋಕ್ಕೆ ಶುರು ಮಾಡಿದ್ರು. ಆಗ ಜನ ಇದನ್ನ ಇಷ್ಟಪಟ್ರು ಅಂತಾರೆ ಈ ಹೊಟೇಲ್ ಓನರ್.
ಕೆಂಗೇರಿ- ಶೇಷಾದ್ರಿಪುರಂ ರಾಬಿನ್ ಥಿಯೇಟರ್ ಹತ್ತಿರವೇ ಸಮೃದ್ಧಿ ಮೊಮೋಸ್ ಹೊಟೇಲ್ ಇದೆ. ಇನ್ನು ಇಲ್ಲಿ ಬೇರೆ ಬೇರೆ ವೆರೈಟಿ ಮೊಮೋಸ್ ಸಿಗುತ್ತದೆ. 5 ರೀತಿಯ ಮೊಮೋಸ್ ಈ ಮೊಮೋಸ್ ಫ್ಯಾಕ್ಟರಿಯಲ್ಲಿ ಲಭ್ಯವಿದ್ದು, ಪನೀರ್, ಮಶ್ರೂಮ್, ಕಾರ್ನ್ ಚೀಸ್, ಚೊಕೋಲೇಟ್, ವೆಜ್, ಪಾಟ್ ಮೊಮೋಸ್ ಮಾರಾಟ ಮಾಡಲಾಗುತ್ತದೆ.
ಮನೆಯಲ್ಲಿರುವ ಅಮ್ಮ ಮತ್ತು ಆಂಟಿ ಇಬ್ಬರಿಗೂ ಈ ಯುವಕ ಟ್ರೇನಿಂಗ್ ಕೊಟ್ಟಿದ್ದು, ಇಬ್ಬರೂ ಮೊಮೋಸ್ ಮಾಡಲು ಏನೇನು ಬೇಕು ಅದನ್ನೆಲ್ಲ ರೆಡಿ ಮಾಡಿ, ಅಂಗಡಿಗೆ ತಂದಿಟ್ಟು ಹೋಗುತ್ತಾರೆ. ಕಾಲೇಜು ಮುಗಿಸಿ ಬಂದ ಯುವಕ, ಮುಂದಿನ ಕೆಲಸ ಮಾಡುತ್ತ, ಹೊಟೇಲ್ ನಡೆಸುತ್ತಾರೆ. ಈ ಹೊಟೇಲ್ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.
ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..