Food Adda: ವೇಫಲ್ಸ್ ಅನ್ನೋ ಮಾಡರ್ನ್ ತಿಂಡಿ ಇತ್ತೀಚೆಗೆ ಭಾರತಕ್ಕೆ ಲಗ್ಗೆ ಇಟ್ಟಿದ್ದರೂ ಕೂಡ, ಹಲವರು ಮನಸ್ಸು ಗೆಲ್ಲುವುದರಲ್ಲಿ ಸಕ್ಸಸ್ ಆಗಿದೆ. ಹಾಗಾಗಿಯೇ ವೇಫಲ್ಸ್ ಸೇಲ್ ಕೂಡ ಚೆನ್ನಾಗಿ ಆಗುತ್ತಿದೆ. ವಿದೇಶದ ತಿಂಡಿಯಾದ ವೇಫಲ್ಸ್‌ನಲ್ಲಿ ಹಲವು ವೆರೈಟಿ ಇದೆ. ಇಂದು ನಾವು ಬೆಂಗಳೂರಿನಲ್ಲಿ ಯಾವ ಅಂಗಡಿಯಲ್ಲಿ ಟೇಸ್ಟಿ ವೇಫಲ್ಸ್ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಬೆಂಗಳೂರಿನ ಸಹಕಾರ ನಗರದಲ್ಲಿ ಬೆಲ್ಜಿಯಂ ವೇಫಲ್ಸ್ ಎಂಬ ಶಾಪ್‌ನಲ್ಲಿ ನಿಮಗೆ ವೆರೈಟಿ ವೆರೈಟಿ, ಟೇಸ್ಟಿ ವೇಫಲ್ಸ್ ಸಿಗುತ್ತದೆ. ಇಲ್ಲಿ ವೆಜ್ ವೇಫಲ್ಸ್ ಸಿಗುತ್ತಿದ್ದು, ನಾನ್‌ವೆಜ್ ಅಥವಾ ಮೊಟ್ಟೆ ಬಳಕೆಯನ್ನು ಇಲ್ಲಿನ ವೇಫಲ್ಸ್‌ನಲ್ಲಿ ಮಾಡಲಾಗುವುದಿಲ್ಲ. ಇಲ್ಲಿ ವೇಫಲ್ಸ್ ಜೊತೆಗೆ, ಐಸ್‌ಕ್ರೀಮ್ ಕೂಡ ಟೇಸ್ಟ್ ಮಾಡಬಹುದು. ಜೊತೆಗೆ ಮಿನಿ ವೇಫಲ್ಸ್ ಕೂಡ ಇಲ್ಲಿ ಸಿಗುತ್ತದೆ.
ನೀವು ಇಲ್ಲಿ ಮಿನಿ ವೇಫಲ್ಸ್ ಆರ್ಡರ್ ಮಾಡಿದರೆ, ಬೇರೆ ಬೇರೆ ವೆರೈಟಿ ವೇಫಲ್ಸ್ ಟೇಸ್ಟ್ ಮಾಡಬಹುದು. ಇನ್ನು ಈ ಶಾಪ್‌ನಲ್ಲಿ ಡೇಲಿ ಡಿಸ್ಕೌಂಟ್ ಸಿಗತ್ತೆ. ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯೊಳಗೆ ನೀವು ವೇಫಲ್ಸ್ ಆರ್ಡರ್ ಅಥವಾ ಪರ್ಚೇಸ್ ಮಾಡಿದ್ದಲ್ಲಿ, ಈ ಡಿಸ್ಕೌಂಟ್ ನಿಮಗೆ ಸಿಗತ್ತೆ. ಈ ಮೂಲಕ ನೀವು ಕಡಿಮೆ ರೇಟಿಗೆ ವೇಫಲ್ಸ್ ಟೇಸ್ಟ್ ಮಾಡಬಹುದು.
ಆಮಂಡ್ ಕೋಕಾ ಬಟರ್, ಚಾಕೋಲೇಟ್ ಫ್ಲೇವರ್, ರೆಡ್ ವೆಲ್ವೆಟ್, ಬ್ಲೂಬೇರಿ ಹೀಗೆ ವೆರೈಟಿ ವೆರೈಟಿ ವೇಫಲ್ಸ್ ಇಲ್ಲಿ ಸಿಗತ್ತೆ. ಬರೀ ಬೆಂಗಳೂರಿನ ಸಹಕಾರ ನಗರದಲ್ಲಷ್ಟೇ ಅಲ್ಲದೇ. ಬೆಂಗಳೂರಿನ ಹಲವೆಡೆ ಇವರ ಬ್ರ್ಯಾಂಚಸ್ ಇದೆ. ಹಾಗಾದ್ರೆ ಎಲ್ಲೆಲ್ಲಿ ಈ ವೇಫಲ್ಸ್ ಸಿಗತ್ತೆ. ಇಲ್ಲಿನ ವೇಫಲ್ಸ್ ಬೆಲೆ ಎಷ್ಟು, ಟೇಸ್ಟ್ ಹೇಗಿರತ್ತೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..




