Fraud Alert: ಟೆಕ್ನಾಲಜಿ ಮುಂದುವರಿದಷ್ಟು, ಜೀವನ ಸುಲಭವಾಗುತ್ತಿದೆ. ಹಾಗಾಗಿಯೇ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಕನಸು ಕಂಡಿದ್ದು. ಆದರೆ ಇದೇ ಟೆಕ್ನಾಲಜಿಯಿಂದ ಎಷ್ಟೋ ಜನ, ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ನಾವಿಂದು ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಸಲಹೆ ನೀಡಲಿದ್ದೇವೆ.
ಸೈಬರ್ ಸೆಕ್ಯೂರಿಟಿ ಎಕ್ಸಪರ್ಟ್ ಆಗಿರುವ ಡಾ.ಶುಭಮಂಗಳ ಅವರು ಯಾವ ರೀತಿಯಾಗಿ ಹ್ಯಾಕರ್ಸ್ ನಿಮಗೆ ಮೋಸ ಮಾಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಇವರು ಹೇಳುವ ಪ್ರಕಾರ, ಕಳೆದ ಮೂರ್ನಾಲ್ಕು ವರ್ಷಗಳಿಂದ ಸೈಬರ್ ಅಪರಾಧ ಬಹಳ ಹೆಚ್ಚಾಗಿದೆ. ಈ ವೇಳೆ ಕೋಟ್ಯಂತರ ಜನ, ಸಾವಿರಾರು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಕೆಲವರು ಫೇಕ್ ಕಾಲ್ ಮಾಡುತ್ತಾರೆ, ಮತ್ತೆ ಕೆಲವರು ಲಿಂಕ್ ಕಳಿಹಿಸುತ್ತಾರೆ, ಇನ್ನು ಕೆಲವರು ಡಿಜಿಟಲ್ ಅರೆಸ್ಟ್ ಎಂದು ನಕಲಿ ಪೊಲೀಸರು ಕಾಲ್ ಮಾಡಿ, ಹಣ ಪೀಕುವ ಕೆಲಸ ಮಾಡುತ್ತಿದ್ದಾರೆ. ಕಾಲ್ ಮಾಡಿದವರು, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ. ನಿಮ್ಮ ಕ್ರೆಡಿಟ್ ಕಾರ್ಡ್ ಮಿಸ್‌ಯ್ಯೂಸ್ ಆಗಿದೆ. ಎಫ್‌ಐಆರ್ ಕಾಪಿಯನ್ನು ನಿಮಗೆ ವಾಟ್ಸಪ್ ಮಾಡುತ್ತೇವೆ ಎಂದಾಗ, ನಾರ್ಮಲ್ ಆಗಿಯೇ ನಾವು ಹೆದರಿಕೊಳ್ಳುತ್ತೇವೆ. ಬಳಿಕ ಆ ಫೇಕ್ ಪೊಲೀಸರು ಹೇಳಿದ ರೀತಿ ಕೇಳಿ, ನಮ್ಮಲ್ಲಿರುವ ಹಣವನ್ನು ಕಳೆದುಕೊಳ್ಳುತ್ತೇವೆ.
ಇನ್ನು ಕೆಲವರು ಇನ್ನು ಅರ್ಧ ಗಂಟೆಯಲ್ಲಿ ನೀವು ಬಸ್, ಫ್ಲೈಟ್ ಏರಿ ನಾವಿರುವ ಜಾಗಕ್ಕೆ ಬಾರದಿದ್ದಲ್ಲಿ, ಲೋಕಲ್ ಪೊಲೀಸರು ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತಾರೆ ಎಂದು ಹೆದರಿಸುತ್ತಾರೆ. ಆಗ ನೀವು ಪರಿಹಾರವೆಂದು ಲಂಚ ಕೊಡಲು ಹೋಗುತ್ತೀರಿ. ಮತ್ತು ಆ ಫೇಕ್ ಪೊಲೀಸರಿಗೂ ಅದೇ ಬೇಕಾಗಿರುತ್ತದೆ. ಸಿಕ್ಕಿದ್ದೇ ಚಾನ್ಸ್ ಎಂದು ಅವರು ಲಕ್ಷ ಲಕ್ಷ ಕೇಳುತ್ತಾರೆ. ಮರ್ಯಾದೆ ಪ್ರಶ್ನೆ ಎಂದು ನೀವು ಅವರು ಕೇಳಿದಷ್ಟು ಹಣ ನೀಡುತ್ತೀರಿ.
ಹೀಗೆ ಹೆದರದೇ, ನೀವು ಅಂಥ ಫೇಕ್ ಕಾಲ್ ಎದುರಿಸಬೇಕು ಎನ್ನುತ್ತಾರೆ ಡಾ.ಶುಭಮಂಗಳ. ಇಂಥ ಪರಿಸ್ಥಿತಿ ಬಂದಾಗ, ನಾವು ಏನು ಮಾಡಬೇಕು ಎಂದು ಅವರು ವಿವರಿಸಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕು ಎಂದಲ್ಲಿ, ಈ ವೀಡಿಯೋ ನೋಡಿ.