Health Tips: ದೇಹದಲ್ಲಿರುವ ಅಂಗಾಗಳು ಹೇಗೆ ಎಲ್ಲರಿಗೂ ಕಾಮನ್ ಆಗಿರುತ್ತದೆಯೋ, ಅದೇ ರೀತಿ ಪ್ರತಿಯೊಬ್ಬ ಮನುಷ್ಯನಿಗೂ ದೇಹದಲ್ಲಿ ಮಚ್ಚೆ ಇರುತ್ತದೆ. ಆದರೆ ಕೆಲವರಿಗೆ ತೀರಾ ಚಿಕ್ಕ ಮಚ್ಚೆ ಇರುತ್ತದೆ. ಇನ್ನು ಕೆಲವರಿಗೆ ದಪ್ಪ ಗುಳ್ಳೆಗಳ ರೀತಿ ಮಚ್ಚೆಗಳಿರುತ್ತದೆ. ಈ ಮಚ್ಚೆಗಳು ಕಾಮನ್ ಆಗಿದ್ದರೂ, ಅದನ್ನು ನಾವು ಆಗಾಗ ಗಮನಿಸಬೇಕು ಅಂತಾರೆ ವೈದ್ಯರು. ಮಚ್ಚೆಯ ಬಣ್ಣ ಬದಲಾಗಿದ್ದಲ್ಲಿ, ನಾವು ಆ ಬಗ್ಗೆ ಗಮನ ಹರಿಸಬೇಕು. ಯಾಕೆ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಮಚ್ಚೆಯ ಬಣ್ಣದ ಬಗ್ಗೆ ವಿವರಿಸಿದ್ದು, ದೇಹದಲ್ಲಿ ಮಚ್ಚೆಯ ಸಂಖ್ಯೆ ಹೆಚ್ಚಾದರೆ, ಕ್ಯಾನ್ಸರ್ ಬರುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದಿದ್ದಾರೆ. ಕ್ಯಾನ್ಸರ್ ಇದ್ದರೆ, ಮಚ್ಚೆಯ ಬಣ್ಣ ಮತ್ತು ಆಕಾರ ಬದಲಾಗುತ್ತದೆ. ಕೆಲವರಿಗೆ ಹುಟ್ಟುತ್ತದೆ ಮಚ್ಚೆ ಬರುತ್ತದೆ. ಅಂಥವರಿಗೆ ರಿಸ್ಕ್ ಹೆಚ್ಚು. ಅವರು ಆ ಮಚ್ಚೆಯ ಬಣ್ಣ, ಆಕಾರಗಳನ್ನು ಗಮನಿಸುತ್ತಲೇ ಇರಬೇಕು ಅಂತಾರೆ ವೈದ್ಯರು.
ಇನ್ನು ಮಚ್ಚೆಯ ಬಣ್ಣ ಬದಲಾಗುತ್ತಿದೆ. ಅದರ ಆಕಾರ ದೊಡ್ಡದಾಗುತ್ತಿದೆ. ಗೋಲಾಕಾರವಿದ್ದ ಮಚ್ಛೆಯ ಶೇಪ್ ಬದಲಾಗುತ್ತಿದೆ. ಮಚ್ಛೆಯ ಸುತ್ತ ತುರಿಕೆ ಹೆಚ್ಚಾಗುತ್ತಿದೆ ಎಂದಲ್ಲಿ, ಅದು ಕ್ಯಾನ್ಸರ್ ಲಕ್ಷಣವಾಗಿರುತ್ತದೆ. ಹಾಗಾದಾಗ, ಒಮ್ಮೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಇನ್ನು ವೈದ್ಯರು ಮಚ್ಛೆಯ ಬಗ್ಗೆ ಇನ್ನು ಏನೇನು ಮಾಹಿತಿ ನೀಡಿದ್ದಾರೆ ಅಂತಾ ತಿಳಿಯಲು ಈ ವೀಡಿಯೋ ನೋಡಿ..