Health Tips: ಜ್ವರ ಬಂದಾಗ, ನಾವು ಸರಿಯಾದ ರೀತಿಯಲ್ಲಿ ರೆಸ್ಟ್ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಆದರೆ ನಾವು ಜ್ವರ ಬಂದಾಗ, ನಿರ್ಲಕ್ಷ್ಯ ಮಾಡುವ ಕಾರಣಕ್ಕೆ, ಜ್ವರ ಇನ್ನೂ ಹೆಚ್ಚಾಗಿ, ಭವಿಷ್ಯದಲ್ಲಿ ಅದು ನಮ್ಮ ಪ್ರಾಣಕ್ಕೇ ಕುತ್ತು ತರುತ್ತದೆ. ಹಾಗಾಗಿ ಜ್ವರ ಬಂದಾಗ, ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದ್ಯಾವ ತಪ್ಪುಗಳು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಹೆಚ್ಚು ಆಹಾರವನ್ನು ಸೇವಿಸುವುದು. ಜ್ವರ ಬಂದಾಗ ನಾವು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸಬಾರದು. ಆಹಾರ ಸೇವನೆಯನ್ನು ಕಂಟ್ರೋಲ್ ಮಾಡಬೇಕು. ದ್ರವ ರೂಪದ ಪದಾರ್ಥವನ್ನೇಷ್ಟೇ ಸೇವಿಸಿದರೆ ಸಾಕು. ಗಂಜಿ, ಸೂಪ್ ಈ ರೀತಿಯ ಬಿಸಿಯಾದ ದ್ರವ ಪದಾರ್ಥ ಸೇವಿಸಬೇಕು. ಹಾಗಾಗಿಯೇ ಹಿಂದಿನ ಕಾಲದಲ್ಲಿ ಜ್ವರ ಬಂದಾಗ, ಗಂಜಿ ಊಟ ಕೊಡುತ್ತಿದ್ದರು. ಇದರ ಸೇವನೆಯಿಂದ ಜ್ವರ ಕಡಿಮೆಯಾಗುವುದಲ್ಲದೇ, ಜೀರ್ಣಕ್ರಿಯೆ ಸಮಸ್ಯೆಯೂ ಆಗುವುದಿಲ್ಲ. ಆದರೆ ನೀವು ಬೇರೆ ಪದಾರ್ಥಗಳನ್ನು ಸೇವಿಸಿದರೆ, ಅದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಎರಡನೇಯ ತಪ್ಪು ಸರಿಯಾಗಿ ರೆಸ್ಟ್ ಮಾಡದಿರುವುದು. ಜ್ವರ ಬಂದಾಗ,ಬರೀ ಕೆಲಸಕ್ಕೆ ರಜೆ ಹಾಕುವುದಲ್ಲ. ಬದಲಾಗಿ ಒಂದು ಕಡೆ ಕುಳಿತು, ಅಥವಾ ಮಲಗಿ ಸರಿಯಾಗಿ ರೆಸ್ಟ್ ತೆಗೆದುಕೊಳ್ಳಬೇಕು. ಕೆಲವರು ಜ್ವರ ಬಂದಾಗ, ಲ್ಯಾಪ್‌ಟಾಪ್, ಮೊಬೈಲ್ ಬಳಸುತ್ತಾರೆ. ಟಿವಿ ನೋಡುತ್ತಾರೆ. ಪುಸ್ತಕ ಓದುತ್ತಾರೆ. ಆದರೆ ಇದ್ಯಾವುದನ್ನೂ ನೀವು ಜ್ವರ ಬಂದಾಗ ಮಾಡಕೂಡದು. ಇಡೀ ದೇಹಕ್ಕೆ ಸಂಪೂರ್ಣ ರೆಸ್ಟ್ ಬೇಕಾಗುತ್ತದೆ. ನೀವು ಈ ಎಲ್ಲ ಕೆಲಸ ಮಾಡಿದರೆ, ನಿಮ್ಮ ಕಣ್ಣಿಗೆ ವಿಶ್ರಾಂತಿ ಸಿಗುವುದಿಲ್ಲ.
ಮೂರನೇಯ ತಪ್ಪು ಜ್ವರ ಬಂತು ಅಂತ ಗೊತ್ತಾದ ತಕ್ಷಣ ಗುಳಿಗೆ ತೆಗೆದುಕೊಳ್ಳುವುದು. ಇದು ತಪ್ಪು. ಜ್ವರ ಬಂದಾಗ, ಯಾವಾಗಲೂ ಗುಳಿಗೆ ಸೇವಿಸಬಾರದು. ಒಂದು ದಿನವಾದ್ರೂ ರೆಸ್ಟ್ ಮಾಡಿ, ಆಹಾರ ಸೇವಿಸಿ, ಜ್ವರ ಕಂಟ್ರೋಲಿಗೆ ಬರುತ್ತದೆಯಾ ಅಂತಾ ನೋಡಬೇಕು. ಜ್ವರ ಕಡಿಮೆಯಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು.