Health Tips: ಸಕ್ಕರೆ ಬದಲಿಗಳು ಅಂದ್ರೆ, ಕೃತಕ ಸಿಹಿಕಾರಕ. ನಾವು ಸೇವಿಸುವ ಆಹಾರ ಸಿಹಿಯಾಗಬೇಕು ಅಂತಾ ಇದನ್ನು ಉಪಯೋಗಿಸಲಾಗುತ್ತದೆ. ಆದರೆ ಇವುಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಗೊತ್ತಿರುವುದಿಲ್ಲ. ಹಾಗಾಗಿ ವೈದ್ಯೆಯಾದ ಡಾ.ಅಶ್ವಿನಿ ಚಕ್ರಸಾಲಿಯವರು ಈ ಬಗ್ಗೆ ವಿವರಿಸಿದ್ದಾರೆ ನೋಡಿ..
ಸಕ್ಕರೆ ಬದಲಿಗಳಲ್ಲಿ ಎರಡು ವಿಧವಿದೆ. ಒಂದು ನ್ಯಾಚುರಲ್ ಸ್ವೀಟ್ ಇನ್ನೊಂದು ಆರ್ಟಿಫಿಶಿಯಲ್ ಸ್ವೀಟ್. ನ್ಯಾಚುಲ್ ಸ್ವೀಟ್ ಅಂದ್ರೆ, ಜೇನುತುಪ್ಪ, ಬೆಲ್ಲ, ಜೋನಿ ಬೆಲ್ಲ ಇತ್ಯಾದಿ. ಆರ್ಟಿಫಿಶಿಯಲ್ ಸ್ವೀಟ್ ಅಂದ್ರೆ, ಅದರಲ್ಲಿ ಕೆಮಿಕಲ್‌ಗಳನ್ನನು ಬಳಸಿರುತ್ತಾರೆ. ಇದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಇದರಿಂದ ನಮ್ಮ ದೇಹಕ್ಕೆ ಯಾವುದೇ ಲಾಭ ಸಿಗುವುದಿಲ್ಲ. ಇದು ಬಾಯಿ ರುಚಿಗಷ್ಟೇ ನಾವು ಸೇವಿಸಬಹುದು. ಮತ್ತು ಇದು ಅನಾರೋಗ್ಯ ತಂದಿಡುತ್ತದೆ.
ಇನ್ನು ನ್ಯಾಚುಲ್ ಸಕ್ಕರೆ ಬದಲಿಯಲ್ಲಿ ಹಣ್ಣಿನಿಂದ ತಯಾರಿಸಿದ ಸಿಹಿಗಳು ಇರುತ್ತದೆ. ಇವುಗಳನ್ನು ನಾವು ಬಳಸಬಹುದು. ವೈದ್ಯರು ಈ ಬಗ್ಗೆ ಹೇಳುವುದು ಏನಂದ್ರೆ, ಸಕ್ಕರೆ ಬದಲಿಗಳನ್ನು ನಾವು ಖರೀದಿಸಿದಾಗ, ಅದರ ಲೇಬಲ್ ನಾವು ನೋಡಬೇಕು. ಅದರಲ್ಲಿ ಯಾವ ಯಾವ ವಸ್ತುವನ್ನು ಎಷ್ಟು ಪ್ರಮಾಣದಲ್ಲಿ ಬಳಸಿದ್ದಾರೆಂದು ತಿಳಿದು, ಬಳಿಕ ಅದು ಆರೋಗ್ಯಕರ ಹೌದೋ, ಅಲ್ಲವೋ ಎಂದು ಪರಿಗಣಿಸಿ, ಖರೀದಿಸಬೇಕು.
ಇನ್ನು ಶುಗರ್ ಇದ್ದವರು, ಬಾಣಂತಿಯರು, ಗರ್ಭಿಣಿಯರು, ಅಥವಾ ಯಾವುದಾದರೂ ಖಾಯಿಲೆ ಉಳ್ಳವರು ಇಂಥ ಸಕ್ಕರೆ ಬದಲಿಗಳನ್ನು ಬಳಸುವ ಮುನ್ನ. ವೈದ್ಯರ ಸಲಹೆ ಪಡೆದು ಬಳಿಕ ಸಕ್ಕರೆ ಬದಲಿಗಳನ್ನು ಬಳಸುವುದು ಉತ್ತಮ. ಇಲ್ಲವಾದರೆ, ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ, ಈ ವೀಡಿಯೋ ನೋಡಿ..

