Sunday, September 8, 2024

Latest Posts

ಜೀನಿ ಸರಿಹಿಟ್ಟಿನ ಸೇವನೆಯಿಂದ ಏನೆಲ್ಲಾ ಲಾಭವಾಗತ್ತೆ..? ಮಾಲೀಕರೇ ಹೇಳ್ತಾರೆ ಕೇಳಿ..

- Advertisement -

Health Tips: ಜೀನಿ ಸರಿಹಿಟ್ಟಿನ ಸೇವನೆ ಮಾಡಿ, ಎಷ್ಟೋ ಮಕ್ಕಳು ಆರೋಗ್ಯಕರವಾಗಿರುವುದನ್ನ ನೀವು ನಮ್ಮ ಕರ್ನಾಟಕ ಟಿವಿಯಲ್ಲೇ ನೋಡಿದ್ದೀರಿ. ಅಲ್ಲದೇ, ಜೀನಿ ಸರಿಹಿಟ್ಟನ್ನು ಹೇಗೆ ತಯಾರಿಸಬೇಕು ಅಂತಾ ನವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಜೀನಿ ಮಾಲೀಕರಾದಂಥ ದಿಲೀಪ್ ಅವರೇ, ಜೀನಿ ಸರಿಹಿಟ್ಟಿನ ಸೇವನೆಯಿಂದ ಮಕ್ಕಳಿಗೆ ಏನು ಲಾಭವಾಗುತ್ತದೆ..? ಇದನ್ನು ಹೇಗೆ ತಯಾರಿಸುತ್ತಾರೆ ಅನ್ನೋದನ್ನ ವಿವರಿಸಿದ್ದಾರೆ.

ಜೀನಿ ಸರಿಹಿಟ್ಟಿನ ಸೇವಿಸಿದ ಮಕ್ಕಳು ಚೆನ್ನಾಗಿ ನಿದ್ರಿಸುತ್ತಾರೆ. ಆಗ ಅವರು ದಷ್ಟಪುಷ್ಟವಾಗಿ ಆರೋಗ್ಯವಾಗಿ ಬೆಳೆಯುತ್ತಾರೆ. ಏಕೆಂದರೆ, ಜೀನಿ ಸೇವಿಸಿದಾಗ, ಆ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾದಾಗಲೇ ಮಕ್ಕಳು ಚೆನ್ನಾಗಿ ನಿದ್ರಿಸಲು ಸಾಧ್ಯವಾಗೋದು. ಮತ್ತು ಉತ್ತಮವಾಗಿ ನಿದ್ರಿಸುವ ಮಕ್ಕಳು, ಆರೋಗ್ಯಕರವಾಗಿ ದಪ್ಪವಾಗ್ತಾರೆ ಅಂತಾರೆ ಜೀನಿ ಮಾಲೀಕ ದಿಲೀಪ್.

ಮೊದಲಿನ ಕಾಲದಲ್ಲಿ, ಅಥವಾ ಅಜ್ಜಿಯಂದಿರುವ ಇರುವ ಮನೆಯಲ್ಲಿ ಈ ರೀತಿಯಾಗಿ ಮಣ್ಣಿ ಹಿಟ್ಟನ್ನ ಮಾಡಿ ಇಡುತ್ತಿದ್ದರು. ಆದರೆ ಇಂದಿನ ಕಾಲದವರು ಹಲವು ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ, ಅದೆಲ್ಲ ಮಾಡಲು ಸಮಯವೂ ಇರುವುದಿಲ್ಲ. ಅದನ್ನ ಅಚ್ಚುಕಟ್ಟಾಗಿ ತಯಾರಿಸುವ ಪದ್ಧತಿಯೂ ಗೊತ್ತಿರುವುದಿಲ್ಲ. ಅಂಥವರು ಜೀನಿ ಸರಿಹಿಟ್ಟನ್ನು ಮಕ್ಕಳಿಗೆ ಕೊಡಬಹುದು.

ಇನ್ನು ಜೀನಿ ಸರಿಹಿಟ್ಟು ಮನೆಯಲ್ಲಿ ತಯಾರಿಸುವ ಮಣ್ಣಿಗಿಂತಲೂ ಆರೋಗ್ಯಕರವಾಗಿ ಇರುತ್ತದೆ. ಏಕೆಂದರೆ, ಇದನ್ನು ಕ್ರಮ ಬದ್ಧವಾಗಿ ಒಣಗಿಸಿ, ಬಟ್ಟೆಯಲ್ಲಿ ಗಾಳಿಸಿ, ಪುಡಿ ಮಾಡಲಾಗುತ್ತದೆ. ಹಾಗಾಗಿ ಮಕ್ಕಳು ಇದನ್ನ ಸೇವಿಸಿದರೆ, ಆ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮನೆಯಲ್ಲೇ ತಯಾರಿಸಿದ ಸರಿಹಿಟ್ಟುಗಳು ಕೆಲವೊಮ್ಮೆ ಮಕ್ಕಳಿಗೆ ಇಷ್ಟವಾಗುವುದಿಲ್ಲ. ಮತ್ತು ಕೆಲವೊಮ್ಮೆ ಅಜೀರ್ಣವಾಗಲೂಬಹುದು. ಹಾಗಾಗಿ ಜೀನಿ ಸರಿಹಿಟ್ಟು 6 ತಿಂಗಳು ದಾಟಿದ ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ಅಂತ ಹೇಳಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

- Advertisement -

Latest Posts

Don't Miss