Health Tips: ಗರ್ಭಾವಸ್ಥೆಯಲ್ಲಿದ್ದಾಗ, ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಗರ್ಭಾವಸ್ಥೆಯಲ್ಲಿದ್ದಾಗ, ಓರ್ವ ಮಹಿಳೆ ಬರೀ ತನ್ನ ಕಾಳಜಿ ಮಾಡುವುದಷ್ಟೇ ಅಲ್ಲ. ಆಕೆಯ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಕಾಳಜಿ ಮಾಡುತ್ತಿರುತ್ತಾಳೆ. ನಾವು ನೀವು ಇಷ್ಟು ಗಟ್ಟಿಮುಟ್ಟಾಗಿ, ಆರೋಗ್ಯವಾಗಿ, ನೆಮ್ಮದಿಯಾಗಿ ಇದ್ದೇವೆ ಅಂದ್ರೆ, ನಮ್ಮನ್ನು ಹೆತ್ತಿರುವ ತಾಯಂದಿರುವ, ನಾವು ಹೊಟ್ಟೆಯಲ್ಲಿರುವಾಗ, ನಮ್ಮ ಲಾಲನೆ ಪಾಲನೆಯನ್ನು ಚೆನ್ನಾಗಿ ಮಾಡಿರುವುದರಿಂದಲೇ. ಹಾಗಾಗಿಯೇ ಗರ್ಭಿಣಿಯರು ಎಷ್ಟು ಆರೋಗ್ಯ ಕಾಳಜಿ ಮಾಡಿದರೂ ಕಡಿಮೆಯೇ ಅಂತಾ ಹೇಳುವುದು.
ಇನ್ನು ಗರ್ಭಿಣಿಯರು ಕೆಲವು ಹಣ್ಣಿನ ಸೇವನೆ ಮಾಡಬಾರದು, ಕೆಲವು ಹಣ್ಣುಗಳ ಸೇವನೆ ಮಾಡಬೇಕು ಅನ್ನೋ ನಿಯಮವೂ ಇದೆ. ಅದರಲ್ಲೂ ಬಟರ್ ಫ್ರೂಟ್ ಸೇವಿಸಿದರೆ, ಮಗು ಮುದ್ದುಮುದ್ದಾಗಿ ಬೆಳೆಯುತ್ತದೆ ಅಂತಾ ಹೇಳುತ್ತಾರೆ. ಹಾಗಾದ್ರೆ ಗರ್ಭಿಣಿಯರು ಬೆಣ್ಮೆ ಹಣ್ಣು ತಿನ್ನುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಬಟರ್ ಫ್ರೂಟನ್ನು ಹಾಗೆ ಸೇವಿಸಬೇಕು ಅಂದ್ರೆ, ಅದರ ಸ್ಯಾಲೆಡ್ ಮಾಡಿ ಸೇವಿಸಬೇಕು. ಅಥವಾ ಅದಕ್ಕೆ ಸ್ವಲ್ಪ ಹಾಲು ಹಾಕಿ ಮಿಲ್ಕ್ ಶೇಕ್ ಮಾಡಿಯೂ ಸೇವಿಸಬಹುದು. ಅಥವಾ ಸ್ಮೂದಿ ಮಾಡಿ ಸೇವಿಸಬಹುದು. ದಿನಕ್ಕೆ ಅರ್ಧ ಬಟರ್ ಫ್ರೂಟ್ ಸೇವಿಸಿದರೂ ಉತ್ತಮ. ಅರ್ಧ ಹೆಚ್ಚೂ ಬಟರ್ ಫ್ರೂಟ್ ಸೇವನೆ ಬೇಡ.
ಬಟರ್ ಫ್ರೂಟ್‌ನಲ್ಲಿ ಹೆಚ್ಚು ಫ್ಯಾಟಿ ಆಸಿಡ್ಸ್ ಇರುತ್ತದೆ. ಹೀಗಾಗಿ ಇದರ ಸೇವನೆಯಿಂದ ನಿಮ್ಮ ಸ್ಕಿನ್ ಚೆನ್ನಾಗಿ ಇರುತ್ತದೆ. ನಿಮ್ಮ ಮಗುವಿನ ಸ್ಕಿನ್ ಮತ್ತು ಕೂದಲು ಕೂಡ ಆರೋಗ್ಯಕರವಾಗಿರುತ್ತದೆ.
ಅಲ್ಲದೇ, ಮೆದುಳು ಚುರುಕಾಗಲು, ಕಣ್ಣಿನ ತೀಕ್ಷ್ಣತೆ ಹೆಚ್ಚಿಸಲು ಕೂಡ ಬಟರ್ ಫ್ರೂಟ್ ಸಹಕಾರಿಯಾಗಿದೆ. ಅಲ್ಲದೇ, ಜೀರ್ಣಕ್ರಿಯೆ ವ್ಯವಸ್ಥೆಯನ್ನೂ ಉತ್ತಮಗೊಳಿಸುವಲ್ಲಿ ಬೆಣ್ಣೆ ಹಣ್ಣು ಪರಿಣಾಮಕಾರಿಯಾಗಿರುತ್ತದೆ. ಇದರ ಸೇವನೆಯಿಂದ ಮಗುವಿನ ತೂಕವು ಆರೋಗ್ಯಕರವಾಗಿ ಹೆಚ್ಚುತ್ತದೆ.