Health Tips: ಮೊದಲೆಲ್ಲ ಸಿ ಸೆಕ್ಷನ್ ಡಿಲೆವರಿ ಅನ್ನೋ ವಿಷಯವೇ ಇರಲಿಲ್ಲ. ಹಾಗಂದರೇನು ಅನ್ನೋದು ಸಾಮಾನ್ಯ ಜನರಿಗೆ ಗೊತ್ತೇ ಇರಲಿಲ್ಲ. ಏಕೆಂದರೆ, ಆಗೆಲ್ಲ ನಾರ್ಮಲ್ ಡಿಲೆವರಿ ಆಗುತ್ತಿತ್ತು. ಸೂಲಗಿತ್ತಿಯರು ಮನೆಗೆ ಬಂದು ಹೆರಿಗೆ ಮಾಡಿಸಿ ಹೋಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸಿ ಸೆಕ್ಷನ್ ಡಿಲೆವರಿಯಾಗುತ್ತಿದೆ. ಹಾಗಾಗಿ ಸಿ ಸೆಕ್ಷನ್ ಡಿಲೆವರಿ ಮಾಡುವಾಗ ಗರ್ಭಿಣಿಯವರು ಹಲವು ಚಾಲೆಂಜಸ್ ಎದುರಿಸಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗರ್ಭಿಣಿಯಲ್ಲಿ ಬೇಕಾದಷ್ಟು ಐರನ್, ಹಿಮೋಗ್ಲೋಬಿನ್ ಸತ್ವ ಇಲ್ಲದಿದ್ದಲ್ಲಿ, ನಾರ್ಮಲ್ ಡೆಲಿವರಿ ಮಾಡುವುದು ಕಷ್ಟವಾಗುತ್ತದೆ. ಬ್ಲೀಡಿಂಗ್ ಪ್ರಾಬ್ಲಮ್ ಇದ್ದಾಗ, ಸಿ ಸೆಕ್ಷನ್ ಮಾಡುವಾಗ ತೊಂದೆಯಾಗಬಹುದು. ಶುಗರ್ ಸೇರಿ ಹಲವು ತೊಂದರೆ ಇರುವವರಿಗೆ ಸಿ ಸೆಕ್ಷನ್ ಡಿಲೆವರಿ ಮಾಡುವಾಗ ತೊಂದರೆಯಾಗಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿದ್ದಾಗ ಆರೋಗ್ಯಕರ ಆಹಾರ ಸೇವಿಸಬೇಕು. ವೈದ್ಯರು ಸೂಚಿಸಿದ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.
ಇನ್ನು ಮನೆಗೆಲಸಗಳನ್ನು ಮಾಡಬೇಕು. ಆಗ ದೇಹಕ್ಕೆ ವ್ಯಾಯಾಮವಾಗುತ್ತದೆ. ಆದರೆ ಇಂದಿನ ಕಾಲದ ಹೆಣ್ಣು ಮಕ್ಕಳು ಮನೆಗೆಲಸದಲ್ಲಿ ಕಡಿಮೆ ತೊಡಗಿಕೊಳ್ಳುತ್ತಾರೆ. ಜಂಕ್ ಫುಡ್ ಹೆಚ್ಚು ತಿನ್ನುತ್ತಾರೆ. ಹಾಗಾಗಿ ಸಿ ಸೆಕ್ಷನ್ ಡಿಲೆವರಿ ಮಾಡುವಾಗ ತೊಂದರೆಯಾಗಬಹುದು. ಹಾಗಾಗಿ ಯೋಗವನ್ನಾದರೂ ಮಾಡಲೇಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..