ನೈಟ್ ಶಿಫ್ಟ್ ಮಾಡುವವರಿಗೆ ಶಕ್ತಿ ಬೇಕು ಅಂದ್ರೆ, ಅವರು ಉತ್ತಮ ಆಹಾರವನ್ನ ಸೇವಿಸಬೇಕು. ರಾತ್ರಿ ಎಚ್ಚರಿರಲೇಬೇಕೆಂಬ ಕಾರಣಕ್ಕೆ, ಮಧ್ಯರಾತ್ರಿ ಅವರಿಗೆ ಹಸಿವಾಗೇ ಆಗುತ್ತದೆ. ಆದರೆ ಮಧ್ಯರಾತ್ರಿ ಆಹಾರ ಸೇವಿಸಿದರೆ, ಆರೋಗ್ಯ ಹಾಳಾಗುತ್ತದೆ. ಆದ್ರೆ ನೀವು ಮಧ್ಯರಾತ್ರಿಯೂ ತಿನ್ನಬಹುದಾದ, ಆರೋಗ್ಯಕರ ಆಹಾರದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ನೈಟ್ ಶಿಫ್ಟ್ ಮಾಡುವಾಗ ಹಲವರು ಚಿಪ್ಸ್, ಕುರ್‌ಕುರೆ, ಕೇಕ್, ಪಪ್ಸ್ ಇಂಥ ಕರಿದ, ಬೇಕರಿ ಪದಾರ್ಥಗಳನ್ನೇ ತಿನ್ನುತ್ತಾರೆ. ಅಥವಾ ಟೀ, ಕಾಫಿ, ಜ್ಯೂಸ್ ಕುಡಿಯುತ್ತಾರೆ. ಆದ್ರೆ ಈ ರೀತಿಯ ಆಹಾರ ಸೇವನೆಯ ಬದಲು, ಕೆಲವು ಆರೋಗ್ಯಕರ ಆಹಾರ ಸೇವನೆ ಮಾಡಬೇಕಾಗುತ್ತದೆ. ಕಿವಿಫ್ರೂಟ್, ಕಲ್ಲಂಗಡಿ, ಮಸ್ಕ್‌ಮೆಲನ್ ಇವೆಲ್ಲವೂ ಆರೋಗ್ಯಕರವೇ. ಆದರೆ, ಈ ಹಣ್ಣನ್ನ ನೀವು ಮಧ್ಯರಾತ್ರಿ ಸೇವಿಸುವಂತಿಲ್ಲ. ಯಾಕಂದ್ರೆ ಇದರಲ್ಲಿ ಹೆಚ್ಚು ನೀರಿನಂಶವಿದೆ. ಹಾಗಾಗಿ ಇದು ಮಧ್ಯರಾತ್ರಿ ಸೇವಿಸಬಲ್ಲ ಆಹಾರಗಳಲ್ಲ.
ನೀವು ಆ್ಯಪಲ್ ತಿನ್ನಬಹುದು. ಡ್ರೈಫ್ರೂಟ್ಸ್, ಹುರಿದ ಕಡಲೆ, ಇವನ್ನೆಲ್ಲ ಪದೇ ಪದೇ ಕೊಂಚ ಕೊಂಚ ತಿನ್ನಬಹುದು. ಇನ್ನೊಂದು ಮುಖ್ಯವಾದ ವಿಚಾರ ಅಂದ್ರೆ, ಮಧ್ಯರಾತ್ರಿ ಹೊಟ್ಟೆ ತುಂಬುವಂಥ ಆಹಾರವನ್ನು ಸೇವಿಸಬಾರದು. ಯಾಕಂದ್ರೆ ನೈಟ್ ಶಿಫ್ಟ್ ಮಾಡುವ ಸಂದರ್ಭದಲ್ಲಿ, ನೀವು ಎಚ್ಚರವಾಗಿರಬೇಕು. ಹಾಗಾಗಿ ಹೊಟ್ಟೆ ತುಂಬುವ ಆಹಾರ ಮತ್ತು ಹೆಚ್ಚು ನೀರಿನಂಶವಿರುವ ಆಹಾರವನ್ನು ಸೇವಿಸಬೇಡಿ.