Health Tips: ಬೆಂಗಳೂರಿನಲ್ಲಿ ಅಲ್ಲಲ್ಲಿ ತಾಳೆಹಣ್ಣನ್ನ ಮಾರಾಟ ಮಾಡಲಾಗುತ್ತದೆ. ಆದರೆ ಅದನ್ನು ಯಾಕೆ ತಿನ್ನುತ್ತಾರೆ..? ಎಷ್ಟು ತಿನ್ನಬೇಕು..? ಇದರ ಸೇವನೆಯಿಂದಾಗುವ ಲಾಭವೇನು ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು, ತಾಳೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಬೇಸಿಗೆಗಾಲ ಶುರುವಾದಾಗ, ಕಲ್ಲಂಗಡಿ, ಎಳನೀರು, ಬಾಳೆಹಣ್ಣು ಸೇರಿ ಹಲವು ತಂಪು ಆಹಾರಗಳನ್ನು ನಾವು ಸೇವಿಸುತ್ತೇವೆ. ಅದೇ ರೀತಿ ಬೇಸಿಗೆಯಲ್ಲಿ ತಾಳೆಹಣ್ಣನ್ನು ಕೂಡ ಸೇವಿಸಲಾಗುತ್ತದೆ. ತಾಳೆಹಣ್ಣನ್ನು ಕರಾವಳಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಎಳನೀರಿನಲ್ಲಿರುವ ಕಾಯಿಯಂತೆ ಇದು ಕಂಡರೂ ಇದರ ರುಚಿ ಬೇರೆ ರೀತಿ ಇರುತ್ತದೆ. ಇದು ಆರೋಗ್ಯಕ್ಕೆ ಉತ್ತಮ. ಆದರೆ ಅಗತ್ಯಕ್ಕಿಂತ ಹೆಚ್ಚು ತಾಳೆ ಹಣ್ಣಿನ ಸೇವನೆ ಮಾಡುವುದರಿಂದ, ಹೊಟ್ಟೆ ನೋವಾಗುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ.
ತಾಳೆಹಣ್ಣನ್ನು ಮಿತವಾಗಿ ತಿಂದರೆ, ಬೇಸಿಗೆಯಲ್ಲಿ ಧಗೆಯನ್ನು ಹೋಗಲಾಡಿಸಿ, ದೇಹಕ್ಕೆ ತಂಪು ನೀಡುತ್ತದೆ. ತಾಳೆಹಣ್ಣಿನ ಸೇವನೆಯಿಂದ ಆರೋಗ್ಯಕರವಾಗಿ ದಪ್ಪಗಾಗಬಹುದು. ಫೈಬರ್, ಕ್ಯಾಲ್ಶಿಯಂ, ಪ್ರೋಟೀನ್, ವಿಟಾಮಿನ್ ಸಿ, ಇ, ಎ ಮತ್ತು ಕೆ ಇದೆ. ಹಾಗಾಗಿ ಇದರ ಸೇವನೆಯಿಂದ ಹಲವು ರೋಗಗಳಿಂದ ಮುಕ್ತಿ ಹೊಂದಬಹುದು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತಾಳೆಹಣ್ಣು ಸಹಕಾರಿಯಾಗಿದೆ. ಇದರ ಸೇವನೆಯಿಂದ ಪದೇ ಪದೇ ಜ್ವರ ಬರುವುದು, ನೆಗಡಿ ಕೆಮ್ಮು ಉಂಟಾಗುವುದೆಲ್ಲ ಆಗುವುದಿಲ್ಲ. ಜೀರ್ಣಕ್ರಿಯೆ ಸಮಸ್ಯೆ ಇದ್ದವರು ಈ ಹಣ್ಣನ್ನು ಸೇವಿಸಿದರೆ, ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಅಲ್ಲದೇ ನೀವು ವಯಸ್ಸಾದವರಂತೆ ಕಾಣದೇ, ಯಂಗ್ ಆಗಿ ಕಾಣಬೇಕು ಅಂದರೂ ಕೂಡ ಪ್ರತೀ ವರ್ಷ ಬೇಸಿಗೆಯಲ್ಲಿ, ಮಿತವಾಗಿ ತಾಳೆಹಣ್ಣಿನ ಸೇವನೆ ಮಾಡಬೇಕು. ಇನ್ನು ನಿಮಗೆ ತಾಳೆಹಣ್ಣಿನ ಸೇವನೆ ಮಾಡಿದ್ದಲ್ಲಿ, ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.
ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?