Health Tips: ಸ್ಟಾರ್ ಫ್ರೂಟ್ಸನ್ನು ಸೇವಿಸಲು ಹಲವರು ಇಷ್ಟಪಡುವುದಿಲ್ಲ. ಕಾರಣ ಇದು ರುಚಿಯಾಗಿರುವುದಿಲ್ಲ. ಹುಳಿ ಹುಳಿಯಾಗಿರುತ್ತದೆ. ಹಾಗಾಗಿ ಹಲವರು ಇದನ್ನು ತಿನ್ನಲ್ಲ. ಆದರೆ ನೀವು ವರ್ಷಕ್ಕೊಮ್ಮೆಯಾದರೂ ಸ್ಟಾರ್ ಫ್ರೂಟ್ ತಿಂದರೆ, ಅದರಿಂದ ಆರೋಗ್ಯಕ್ಕೆ ತುಂಬಾ ಲಾಭವಾಗುತ್ತದೆ. ನಿಮಗೆ ಸಾಧ್ಯವಾದಲ್ಲಿ ತಿಂಗಳಿಗೊಮ್ಮೆಯಾದರೂ ಸೇವಿಸಬಹುದು. ಇಂದು ನಾವು ಸ್ಟಾರ್ ಫ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಸ್ಟಾರ್ ಫ್ರೂಟ್‌ನಲ್ಲಿ ವಿಟಾಮಿನ್ ಸಿ ಇದೆ. ಹಾಗಾಗಿ ಇದು ರಕ್ತಹೀನತೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಅಂದ್ರೆ ಯಾರಿಗೆ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುತ್ತದೆಯೋ, ಅಂಥವರು ಸ್ಟಾರ್ ಫ್ರೂಟ್ ತಿಂದ್ರೆ, ಅವರ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ನಿಮಗೆ ಸ್ಟಾರ್ ಫ್ರೂಟನ್ನು ಹಾಗೆ ಸೇವಿಸಲು ಆಗದಿದ್ದಲ್ಲಿ, ನೀವು ಹೆಚ್ಚು ಮಸಾಲೆ ಹಾಕದೇ, ಇದರ ಉಪ್ಪಿನಕಾಯಿ ಮಾಡಿ ಸೇವಿಸಬಹುದು. ತಂಬುಳಿಯನ್ನ ಕೂಡ ಮಾಡಿ ತಿನ್ನಬಹುದು.
ಸ್ಟಾರ್ ಫ್ರೂಟ್ ಸೇವನೆಯಿಂದ ನಿಮ್ಮ ಸೌಂದರ್ಯ ಹೆಚ್ಚುತ್ತದೆ. ಉಗುರಿನ ಆರೋಗ್ಯ, ತ್ವಚೆಯ ಆರೋಗ್ಯ ಮತ್ತು ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ಟಾರ್ ಫ್ರೂಟ್ ಸಹಕಾರಿಯಾಗಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ. ಹೊಟ್ಟೆ ನೋವಾಗುತ್ತದೆ ಎಂದಲ್ಲಿ ಸ್ಟಾರ್ ಫ್ರೂಟ್ ಸೇವಿಸಿ. ಇದು ಜೀರ್ಣಕ್ರಿಯೆ ಸರಿಮಾಡಿ, ತಿಂದ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡಲು ಸ್ಟಾರ್ ಫ್ರೂಟ್ ಸಹಕಾರಿಯಾಗಿದೆ.
ಶುಗರ್ ಇದ್ದವರು ಕೂಡ ಈ ಹಣ್ಣನ್ನು ಸೇವಿಸಬಹುದು. ಇದರ ಸೇವನೆಯಿಂದ ಶುಗರ್ ಕಂಟ್ರೋಲ್‌ನಲ್ಲಿರುತ್ತದೆ. ಹೃದಯದ ಆರೋಗ್ಯ ಕಾಪಾಡುವಲ್ಲಿ ಈ ಹಣ್ಣು ಸಹಕಾರಿಯಾಗಿದೆ. ಕಣ್ಣಿನ ಉರಿ, ಪದೇ ಪದೇ ಕಣ್ಣಿಂದ ನೀರು ಬರುವ ಸಮಸ್ಯೆ ಇದ್ದವರು ಕೂಡ ಸ್ಟಾರ್ ಹಣ್ಣು ಸೇವಿಸಿದರೆ ಉತ್ತಮ. ಇನ್ನು ನಿಮಗೆ ಸ್ಟಾರ್ ಫ್ರೂಟ್ ತಿಂದಲ್ಲಿ, ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.