Saturday, April 12, 2025

Latest Posts

ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

Health: ಚೀಯಾಸೀಡ್ಸ್ ಅನ್ನೋದು, ನಮ್ಮ ಹಿರಿಯರು ಕೂಡ ಬಳಸಿದ ವಸ್ತು. ಆದರೆ ಅದು ಇತ್ತೀಚೆಗೆ ಮತ್ತೂ ಫೇಮಸ್ ಆಗಿದೆ. ಡಯಟ್ ಮಾಡುವವರು, ಹೊಟೆಲ್‌ಗಳಲ್ಲಿ ಜ್ಯೂಸ್, ಫಾಲೂದಾಗೆ ಚೀಯಾ ಸೀಡ್ಸ್ ಬಳಸುವುದರಿಂದ, ಇದು ಮುನ್ನಲೆಗೆ ಬಂದಿದೆ. ಹಾಗಾದ್ರೆ ಪ್ರತಿದಿನ ಒಂದು ಸ್ಪೂನ್ ಚೀಯಾ ಸೀಡ್ಸ್ ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಒಂದು ಸ್ಪೂನ್ ನೆನೆಸಿಟ್ಟ ಚೀಯಾ ಸೀಡ್ಸ್ ಹಾಕಿ ಕುಡಿದರೆ, ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ. ಅಲ್ಲದೇ, ಮುಖದಲ್ಲಿ ಗ್ಲೋ ಬರುತ್ತದೆ. ನೀವು ಮಿಲ್ಕ್ ಶೇಕ್, ಸ್ಮೂದಿ ಜೊತೆಗೂ, ಚೀಯಾ ಸೀಡ್ಸ್ ಬಳಸಬಹುದು. ಆದರೆ ನೀವು ಯಾವ ಆಹಾರಕ್‌ಕೆ ಚೀಯಾ ಸೀಡ್ಸ್ ಬಳಸುತ್ತೀರೋ, ಆ ಆಹಾರಕ್ಕೆ ಸಕ್ಕರೆ ಬಳಸುವಂತಿಲ್ಲ. ಹಾಗೆ ಸಕ್ಕರೆ ಬಳಸಿದರೆ, ಚೀಯಾ ಸೀಡ್ಸ್ ಬಳಸಿ, ಯಾವ ಆರೋಗ್ಯ ಲಾಭವೂ ಸಿಗುವುದಿಲ್ಲ.

ನಿಮ್ಮ ದೇಹದ ಬೊಜ್ಜು, ಹೊಟ್ಟೆ ಬೊಜ್ಜು ಕರಗಿಸಬೇಕು ಅಂದ್ರೆ, ಕರಿದ ಪದಾರ್ಥ, ಮಸಾಲೆಯುಕ್ತ ಪದಾರ್ಥವನ್ನು ಸೇವಿಸಬಾರದು. ಹಣ್ಣು ಹಂಪಲು, ಜ್ಯೂಸ್ ಸೇವಿಸಬೇಕು. ಹಾಗೆ ಜ್ಯೂಸ್ ಸೇವಿಸುವಾಗ ಚೀಯಾ ಸೀಡ್ಸ್ ಬಳಸಿದ್ರೆ, ಒಂದೇ ತಿಂಗಳಲ್ಲಿ ನಿಮ್ಮ ದೇಹದ ತೂಕ ಇಳಿಯುತ್ತದೆ. ಅಲ್ಲದೇ, ಇದರೊಂದಿಗೆ ವ್ಯಾಯಾಮ ಮಾಡುವುದು ಕೂಡ ಮುಖ್ಯವಾಗಿದೆ.

ಇನ್ನು ಶುಗರ್ ಇದ್ದವರು ಕೂಡ, ಚೀಯಾ ಸೀಡ್ಸ್ ಪ್ರತಿದಿನ ಬಳಸಬೇಕು. ಇದು ಶುಗರ್ ಕಂಟ್ರೋಲ್ ಮಾಡುವುದರಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ ಚೀಯಾ ಸೀಡ್ಸ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಲಬದ್ಧತೆ ತಡೆಗಟ್ಟುತ್ತದೆ. ಹೊಟ್ಟೆಯ ಸಮಸ್ಯೆಯನ್ನು ಸರಿದೂಗಿಸಿ, ತೂಕ ಇಳಿಸಲು, ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

ಬೇಲದ ಹಣ್ಣಿನ ಜ್ಯೂಸ್ ರೆಸಿಪಿ

ರೋಸ್ ಸಿರಪ್ ಕಸ್ಟರ್ಡ್ ರೆಸಿಪಿ..

- Advertisement -

Latest Posts

Don't Miss