Health tips: ಇತ್ತೀಚೆಗೆ ಆರೋಗ್ಯದ ಗುಣಗಳಿಂದ ಹೆಚ್ಚು ಸದ್ದು ಮಾಡುತ್ತಿರುವ ಹಣ್ಣು ಅಂದ್ರೆ ರಾಮ್‌ಬುಟನ್ ಹಣ್ಣು. ಲಿಚಿಯಂತೆ ಕಾಣುವ ರಾಮ್‌ಬುಟನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಂದು ನಾವು ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ರಾಮ್‌ಬುಟನ್ ಬೆಲೆ ಕೊಂಚ ಹೆಚ್ಚಿದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಕಾರಣಕ್ಕೆ ಇದರ ಸೇವನೆ ಮಾಡಲಾಗುತ್ತದೆ. ನಿಮಗೆ ನಂಜಾಗಿದ್ದರೆ, ಅಥವಾ ಗಾಯವಾಗಿ ಅದು ಹುಣ್ಣಾಗುವ ಹಾಗಿದ್ದರೆ, ನೀವು ರಾಮಬುಟನ್ ಸೇವನೆ ಮಾಡಿ. ಇದರಿಂದ ಆ ಗಾಯ ವಾಸಿಯಾಗುತ್ತದೆ. ನಂಜು ನಿರೋಧಕ ಶಕ್ತಿಯನ್ನು ಈ ಹಣ್ಣು ಹೊಂದಿರುವ ಕಾರಣಕ್ಕೆ, ಇದನ್ನು ತಿಂದಾಗ, ಗಾಯ ಮಾಸುತ್ತದೆ.
ಹೊಟ್ಟೆ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ ರಾಮ್‌ಬುಟನ್ ಸೇವಿಸಿದರೆ, ಆ ಎಲ್ಲಾ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ. ತಿಂದ ಊಟ ಸರಿಯಾಗಿ ಜೀರ್ಣವಾಗುತ್ತಿಲ್ಲವೆಂದಲ್ಲಿ, ಮಲಬದ್ಧತೆ ಸರಿಯಾಗದಿದ್ದಲ್ಲಿ, ಅತಿಸಾರ ಸಮಸ್ಯೆ ಇದ್ದಲ್ಲಿ ರಾಮಬುಟನ್ ಸೇವನೆ ಮಾಡಿ. ಇಷ್ಟೇ ಅಲ್ಲದೇ, ತೂಕ ಇಳಿಸಲು ಕೂಡ ರಾಮ್‌ಬುಟನ್ ಸಹಾಯ ಮಾಡುತ್ತದೆ. ಈ ಹಣ್ಣಿನ ಜ್ಯೂಸ್ ಮಾಡಿಯೂ ಕುಡಿಯಬಹುದು.
ಇದು ಗಾಯ ವಾಸಿ ಮಾಡಿದಂತೆ, ಕೂದಲ ಸಮಸ್ಯೆಯನ್ನೂ ಸರಿದೂಗಿಸುತ್ತದೆ. ಹೊಟ್ಟಿನ ಸಮಸ್ಯೆ, ತುರಿಕೆ ಸಮಸ್ಯೆಗಳನ್ನ ರಾಮ್‌ಬುಟನ್ ತಿನ್ನುವ ಮೂಲಕ ಸರಿ ಮಾಡಬಹುದು. ಏಕೆಂದರೆ ಇದರಲ್ಲಿ ವಿಟಾಮಿನ್ ಸಿ ಇದ್ದು, ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಮತ್ತು ಮೂಳೆಯನ್ನು ಗಟ್ಟಿಗೊಳಿಸುತ್ತದೆ. ಅಷ್ಟೇ ಅಲ್ಲದೇ, ಕೊಲೆಸ್ಟ್ರಾಲ್ ಮಟ್ಟವನ್ನ ಕಂಟ್ರೋಲ್ ಮಾಡಿ, ಹೃದಯದ ಆರೋಗ್ಯ ಕಾಪಾಡುತ್ತದೆ.
ಕ್ಯಾನ್ಸರ್ ಬರುವುದನ್ನು ತಡೆಗಟ್ಟುವ ಶಕ್ತಿ ರಾಮಬುಟನ್‌ಗಿದೆ. ಇದರಲ್ಲಿ ರೋಗನಿರೋಧಕ ಶಕ್ತಿ ಇದ್ದು, ಜ್ವರ, ಶೀತ, ಕೆಮ್ಮುಗಳಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ.




