Friday, April 4, 2025

Latest Posts

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

ತುಳಸಿ ಎಂದರೆ ಹಿಂದೂಗಳಲ್ಲಿ ಉಚ್ಛ ಸ್ಥಾನವನ್ನು ನೀಡಿದ ಗಿಡವಾಗಿದೆ. ತುಳಸಿ ಎಂದರೆ, ಶ್ರೀವಿಷ್ಣುವಿನ ಪರಮ ಭಕ್ತೆ ಎಂದು ಹೇಳಲಾಗಿದ್ದು, ತುಳಸಿ ಹಬ್ಬದಂದು ಪೂಜೆಯೂ ಮಾಡಲಾಗುತ್ತದೆ. ಅಲ್ಲದೇ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪದ್ಧತಿ ಪ್ರಕಾರವಾಗಿ, ತುಳಸಿಗೆ ದೀಪ ಇಡಲಾಗುತ್ತದೆ. ಈ ತುಳಸಿ ಬರೀ ದೈವಿಕ ಮಹತ್ವವನ್ನಷ್ಟೇ ಅಲ್ಲದೇ, ಆರೋಗ್ಯಕರ ಗುಣಗಳನ್ನು ಹೊಂದಿದೆ. ತುಳಸಿ ಸೇವನೆಯಿಂದ ಎಷ್ಟೋ ರೋಗಗಳನ್ನ ಬರದಂತೆ ತಡೆಯಬಹುದು. ಹಾಗಾಗಿ ನಾವಿಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸಿದರೆ, ಆರೋಗ್ಯಕ್ಕಾಗುವ ಲಾಭವೇನು ಅಂತಾ ಹೇಳಲಿದ್ದೇವೆ.

ಮನುಷ್ಯನಿಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಉತ್ತಮ ಜೀರ್ಣಕ್ರಿಯೆ ಶಕ್ತಿ. ಯಾರ ಜೀರ್ಣಕ್ರಿಯೆ ಸರಿಯಾಗಿ ಇರುತ್ತದೆಯೋ, ಅಂಥವರು ಎಂದಿಗೂ ಆರೋಗ್ಯವಂತರಾಗಿರುತ್ತಾರೆ. ನಿಮ್ಮ ಜೀರ್ಣಕ್ರಿಯೆಯೂ ಸರಿಯಾಗಿ ಇರಬೇಕು ಅಂದ್ರೆ ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡೇ ಎರಡು ತುಳಸಿ ಎಲೆಯನ್ನು ತೊಳೆದು ತಿಂದರೆ ಸಾಕು.

ಇನ್ನು ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ, ತುಳಸಿ ಎಲೆ ತಿನ್ನಬೇಕು. ಕೆಲವರು ತುಳಸಿ ಎಲೆ ಬಳಸಿ, ಕಶಾಯ ಮಾಡಿ, ಕುಡಿಯುತ್ತಾರೆ. ಇದರಿಂದಲೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ತುಳಸಿ ತಿನ್ನುವುದು ಕೂಡ ಆರೋಗ್ಯಕ್ಕೆ ಉತ್ತಮವಲ್ಲ. ಏಕೆಂದರೆ ತುಳಸಿ ಸೇವನೆಯಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಹಾಗಾಗಿ ಪ್ರತಿದಿನ ಎರಡೇ ಎರಡು ತುಳಸಿ ಎಲೆ ತಿಂದರೆ ಸಾಕು. ರವಿವಾರದ ದಿನ ತುಳಸಿ ತಿನ್ನದಿದ್ದರೂ ಆದೀತು. ಯಾಕಂದ್ರೆ ರವಿವಾರದ ದಿನ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ತುಳಸಿ ತಿನ್ನುವ ಅಗತ್ಯವಿರುವುದಿಲ್ಲ.

ನಿಮಗೆ ಬಿಪಿ, ಶುಗರ್ ಇದ್ದಲ್ಲಿ, ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ತಿಂದರೆ, ಬಿಪಿ, ಶುಗರ್ ನಿಯಂತ್ರಣದಲ್ಲಿರುತ್ತದೆ. ನಿಮ್ಮ ಸೌಂದರ್ಯ ವೃದ್ಧಿಸಲು ಇದು ಸಹಾಯ ಮಾಡುತ್ತದೆ.

ಮೈಲಾರಿ ಹೋಟೇಲ್‌ನಲ್ಲಿ ದೋಸೆ ರೆಡಿ ಮಾಡಿದ ಪ್ರಿಯಾಂಕಾ ಗಾಂಧಿ..

 

ಈ ಮೂರು ವಿಚಾರಗಳಿಂದ ದೂರವಿದ್ದರೆ ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ..

ಪತಿ ತನ್ನ ಪತ್ನಿಯ ಬಳಿ ಈ ವಿಚಾರಗಳನ್ನ ಹೇಳದಿರುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯರು..

- Advertisement -

Latest Posts

Don't Miss