Friday, November 22, 2024

Latest Posts

ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ಲಾಭ..?

- Advertisement -

Health Tips: ಹಿಂದಿನ ಕಾಲದಲ್ಲಿ ಒಂದೊಂದು ದೇವರ ದಿನಕ್ಕಾಗಿ, ಆ ದಿನ ಉಪವಾಸ ಆಚರಿಸುತ್ತಿದ್ದರು. ನಾನು ರಾಯರನ್ನು ಆರಾಧಿಸುತ್ತೇನೆ ಅದಕ್ಕೆ ಗುರುವಾರ ಉಪವಾಸ ಮಾಡುತ್ತೇನೆ. ನಾನು ಹನುಮನನ್ನು ಆರಾಧಿಸುತ್ತೇನೆ ಅದಕ್ಕೆ ಶನಿವಾರ ಉಪವಾಸ ಮಾಡುತ್ತೇನೆ. ನಾನು ಶಿವನನ್ನು ಆರಾಧಿಸುತ್ತೇನೆ ಅದಕ್ಕಾಗಿ ನಾನು ಸೋಮವಾರ ಉಪವಾಸ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಇಂದು ಕೂಡ ಹಲವರು ಉಪವಾಸ ಮಾಡುತ್ತಾರೆ.

ಈ ಉಪವಾಸ ಎಂಬ ಪದ್ಧತಿಯನ್ನು ನಮ್ಮ ಪೂರ್ವಜರು ಅನುಸರಿಸಲು ಕಾರಣ, ಇದು ಆರೋಗ್ಯವನ್ನು ಉತ್ತಮವಾಗಿ ಇರಿಸುವಲ್ಲಿ ಸಹಾಯ ಮಾಡುತ್ತದೆ. ನಿಮಗೆ ವೃದ್ಧಾಪ್ಯ ಬಂದರೂ ಕೂಡ, ನೀವು ಶಕ್ತಿವಂತರಾಗಿರಲು, ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಉಪವಾಸ ಮಾಡುತ್ತಿದ್ದರು. ಆದರೆ ಎಲ್ಲರೂ ಉಪವಾಸ ಮಾಡುವ ಹಾಗಿಲ್ಲ. ಆರೋಗ್ಯ ಹೇಗಿದೆ ಎಂಬುದನ್ನು ತಿಳಿದು ಉಪವಾಸ ಮಾಡಬೇಕು. ಈ ಬಗ್ಗೆ ವೈದ್ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಯಾರು ಉಪವಾಸ ಮಾಡಬೇಕು ಮತ್ತು ಯಾರು ಉಪವಾಸ ಮಾಡಬಾರದು ಅನ್ನೋ ಬಗ್ಗೆ ವೈದ್ಯ ಕಿಶೋರ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕೆಲವರು ಸಂಜೆ 6 ಗಂಟೆಯ ಬಳಿಕ ಏನನ್ನು ಸೇವಿಸುವುದಿಲ್ಲ. ಮತ್ತೆ ಕೆಲವರು ಹಬ್ಬದ ಸಮಯದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಉಪವಾಸವಿರುತ್ತಾರೆ. ಆದರೆ ವೃದ್ಧರು, ಪುಟ್ಟ ಮಕ್ಕಳು, ಗರ್ಭಿಣಿಯರು, ಬಿಪಿ, ಶುಗರ್ ಸೇರಿ ಇನ್ನು ಕೆಲವು ರೋಗಗಳಿರುವ ಜನರು ಉಪವಾಸ ಮಾಡುವುದು ಅಷ್ಟು ಉತ್ತಮವಲ್ಲ ಅಂತಾರೆ ವೈದ್ಯರು.

ಇನ್ನು ಯಾಕೆ ಉಪವಾಸ ಮಾಡಬೇಕು ಅಂತಾ ಹೇಳಿದ್ರೆ, ನಾವು ಬೆಳಿಗ್ಗೆ 8 ಗಂಟೆಗೆ ತಿಂಡಿ ಮಾಡಿದರೆ, ಮಧ್ಯಾಹ್ನ 1 ಗಂಟೆಯವರೆಗೆ ನಮಗೆ ಹಸಿವಾಗುವುದಿಲ್ಲ. ಆದರೂ ನಾವು 11 ಗಂಟೆಗೆ ಏನಾದರೂ ಜಂಕ್ ಫುಡ್ ಸೇವನೆ ಮಾಡುತ್ತೇವೆ. ಮತ್ತೆ 1 ಗಂಟೆಗೆ ಹೊಟ್ಟೆ ತುಂಬ ಊಟ ಮಾಡುತ್ತೇವೆ. ಮತ್ತೆ 4 ಗಂಟೆಗೆ ಟೀ- ಕಾಫಿ ತಿಂಡಿ ಸೇವನೆ. ಬಳಿಕ ಸಂಜೆ ಚಾಟ್ಸ್. ಮತ್ತೆ ರಾತ್ರಿ ಊಟ. ಹೀಗೆ ಪ್ರತಿದಿನ ನಮ್ಮ ಹೊಟ್ಟೆಯನ್ನು ಚೆನ್ನಾಗಿ ತುಂಬಿಸುವ ನಾವು ವಾರದಲ್ಲಿ ಒಮ್ಮೆಯಾದರೂ, ಸರಿಯಾದ ಕ್ರಮದಲ್ಲಿ ಉಪವಾಸ ಮಾಡಬೇಕು.

ಆ ಉಪವಾಸ ಹೇಗಿರಬೇಕು ಅಂದ್ರೆ, ಏನೂ ತಿನ್ನದೇ ಕುಡಿಯದೇ ಉಪವಾಸ ಮಾಡಬೇಕು. ನಿಮಗೆ ನೀರು ಕುಡಿಯದೇ ಇರಲು ಸಾಧ್ಯವಾಗುವುದಿಲ್ಲ ಎಂದಲ್ಲಿ ನೀವು ನೀರಿನ ಸೇವನೆ ಮಾಡಬಹುದು. ಈ ರೀತಿ ಉಪವಾಸ ಮಾಡಿದಾಗಲಷ್ಟೇ ಅದನ್ನು ಉಪವಾಸವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಉಪವಾಸ ಮಾಡುವುದರಿಂದ ದೇಹ ಶುದ್ಧವಾಗುತ್ತದೆ. ಮರುದಿನ ಸರಿಯಾದ ರೀತಿಯಲ್ಲಿ ನೀವು ಆಹಾರ ಸೇವಿಸಿದಾಗ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ಸ್ಟಾರ್ ಫ್ರೂಟ್ಸ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಲೂಸ್ ಮೋಷನ್ ಶುರುವಾದಾಗ ಎಂಥ ಆಹಾರವನ್ನು ಸೇವಿಸಬೇಕು..?

ದೇಹದಿಂದ ಬರುವ ದುರ್ಗಂಧದಿಂದ ಮುಕ್ತಿ ಪಡೆಯುವುದು ಹೇಗೆ..?

- Advertisement -

Latest Posts

Don't Miss