Monday, April 21, 2025

Latest Posts

ಅಂಜೂರದಿಂದ ಆಗುವ ಆರೋಗ್ಯ ಲಾಭವೇನು..? ಇದನ್ನು ಹೇಗೆ ಸೇವಿಸಬೇಕು..?

- Advertisement -

Health: ಡ್ರೈಫ್ರೂಟ್ಸ್‌ಗಳಲ್ಲಿ ಆರೋಗ್ಯಕಾರಿಯಾಗಿರುವ ಒಣಹಣ್ಣು ಅಂದ್ರೆ ಅಂಜೂರ. ಅಂಜೂರದಿಂದ ಹಲವು ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ ಇದನ್ನು ಲಿಮಿಟಿನಲ್ಲಿ ತಿಂದ್ರೆ, ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾದರೆ ಅಂಜೂರದಿಂದ ಆಗುವ ಆರೋಗ್ಯ ಲಾಭಗಳೇನು..? ಇದನ್ನು ಹೇಗೆ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..

ಹಣ್ಣಾದ ಅಂಜೂರ ದೇಹಕ್ಕೆ ತಂಪು ನೀಡುತ್ತದೆ. ಮತ್ತು ನೆನೆಸಿಟ್ಟ ಅಂಜೂರವೂ ದೇಹಕ್ಕೆ ತಂಪು ನೀಡುತ್ತದೆ. ಆದರೆ ಒಣ ಅಂಜೂರ ದೇಹಕ್ಕೆ ಉಷ್ಣತೆ ನೀಡುತ್ತದೆ. ಹಾಗಾಗಿ ಅಂಜೂರವನ್ನು ದಿನಕ್ಕೆ ಒಂದು ತಿಂದರೆ ಸಾಕು. ಅದರಲ್ಲೂ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರ ತಿನ್ನುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವಾರು ಆರೋಗ್ಯ ಲಾಭಗಳಿದೆ.

ಅಂಜೂರವನ್ನು ಹಾಲಿಗೆ ಹಾಕಿ ಕುದಿಸಿ, ತಿನ್ನುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ನಿಮಗೆ ಹೆಚ್ಚು ಉಷ್ಣವೂ ಆಗಬಾರದು, ತಂಪೂ ಆಗಬಾರದು ಅನ್ನೋ ಹಾಗಿದ್ರೆ, ನೀವು ಈ ರೀತಿ ಹಾಲಿನಲ್ಲಿ ಕುದಿಸಿದ, ಅಂಜೂರ ತಿನ್ನಬಹುದು. ಇನ್ನು ನಿಮ್ಮ ದೇಹದಲ್ಲಿ ಕಲ್ಲು ಆಗಬಾರದು ಅಂದ್ರೆ, ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರ ಸೇವಿಸಿ.

ಕೂದಲು ಉದುರುವ ಸಮಸ್ಯೆ, ಶುಗರ್, ಬಿಪಿ, ಹೃದಯದ ಸಮಸ್ಯೆ ಇದ್ದವರು, ಮುಖದಲ್ಲಿ ಕಾಂತಿ ಬರಬೇಕು ಎಂದಾಗ, ಹೀಗೆ ಅನೇಕ ಸಮಸ್ಯೆಗಳಿಗೆ ನೆನೆಸಿಟ್ಟ ಅಂಜೂರ ರಾಮಬಾಣವಾಗಿದೆ. ಲಕ್ವಾ ಸಮಸ್ಯೆ ಇದ್ದಲ್ಲಿ, ಅಂಥವರಿಗೆ ಹಾಲಿನಲ್ಲಿ ಅಂಜೂರವನ್ನು ಕುದಿಸಿ ಕೊಡಬೇಕು. ಆದರೆ ಲಿವರ್ ಸಮಸ್ಯೆ ಇದ್ದವರು, ಹೊಟ್ಟೆ ಹಸಿವು ಕಡಿಮೆ ಇದ್ದವರು ಅಂಜೂರ ಸೇವನೆ ಮಾಡಬಾರದು.

ವಿಶೇಷ ಸೂಚನೆ ಏನಂದ್ರೆ, ನೀವು ದಿನಕ್ಕೆ ಒಂದರಿಂದ ಎರಡು ಅಂಜೂರ ತಿನ್ನಬಹದಷ್ಟೇ. ಅದಕ್ಕಿಂತ ಹೆಚ್ಚು ಅಂಜೂರ ತಿಂದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿ, ಮಲವಿಸರ್ಜನೆಗೆ ತೊಂದರೆಯಾಗುತ್ತದೆ. ಹೊಟ್ಟೆ ನೋವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದಿನಕ್ಕೆ ಒಂದರಿಂದ ಎರಡು ಅಂಜೂರವನ್ನು ತಿನ್ನಬಹುದು.

ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

Latest Posts

Don't Miss