Health: ಗೋಧಿಯನ್ನು ನೆನೆಸಿ, ರುಬ್ಬಿ ಅದರ ದೋಸೆ ಮಾಡುತ್ತಾರೆ. ಗೋಧಿ ನುಚ್ಚಿನ ಪಾಯಸ ಮಾಡುತ್ತಾರೆ. ಅಥವಾ ಗೋಧಿ ಹಿಟ್ಟಿನ ಚಪಾತಿ ಮಾಡುತ್ತಾರೆ. ಏಕೆಂದರೆ, ಗೋಧಿ ಸೇವನೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಾಗಾದರೆ ಗೋಧಿ ಬಳಕೆಯಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಗೋಧಿ ಸೇವನೆಯಿಂದ, ಆರೋಗ್ಯ ಉತ್ತಮವಾಗಿರುತ್ತದೆ. ದೇಹದ ತೂಕ ಸರಿಯಾಗಿ ಇರುತ್ತದೆ. ಮಲವಿಸರ್ಜನೆ ಸರಿಯಾಗಿ ಆಗುತ್ತದೆ. ಹೊಟ್ಟೆಯ ಸಮಸ್ಯೆಯನ್ನು ತೊಡೆದು ಹಾಕುವುದರಲ್ಲಿ ಗೋಧಿ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಾಯಾಮ ಮಾಡುವವರಿಗೆ, ಮೈ ಬಗ್ಗಿಸಿ ದುಡಿಯುವ, ಕಷ್ಟದ ಕೆಲಸ ಮಾಡುವವರಿಗೆ ಚಪಾತಿ ಅತ್ಯುತ್ತಮ ಆಹಾರವಾಗಿದೆ. ಇದರೊಂದಿಗೆ ಹಲವು ಆರೋಗ್ಯ ಲಾಭವನ್ನು ಗೋಧಿ ತಂದುಕೊಡುತ್ತದೆ.
ಆದರೆ ಅಗತ್ಯಕ್ಕಿಂತ ಹೆಚ್ಚು ಗೋಧಿ ಬಳಕೆ ಮಾಡಿದರೆ, ಅತಿಯಾಗಿ ಮಲವಿಸರ್ಜನೆಯಾಗುತ್ತದೆ. ಒಬ್ಬ ಮನುಷ್ಯನಿಗೆ ದಿನಕ್ಕೆ ಒಂದರಿಂದ ಎರಡು ಬಾರಿ ಮಲ ವಿಸರ್ಜನೆಯಾಗುವುದು ಸಾಮಾನ್ಯ. ಆದರೆ, ಎರಡು ಬಾರಿಗಿಂತ ಹೆಚ್ಚಾದರೆ, ನಿಮ್ಮ ದೇಹದಲ್ಲಿ ಉಷ್ಣ ಹೆಚ್ಚಾಗಿದೆ ಎಂದರ್ಥ. ಈ ಉಷ್ಣತೆ, ಗೋಧಿ ಸೇವನೆಯಿಂದಲೂ ಬರುತ್ತದೆ. ಗೋಧಿ ಲಿಮಿಟಿನಲ್ಲಿ ತಿಂದರೆ, ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಗೋಧಿ ಸೇವನೆ, ಚಪಾತಿ ಸೇವನೆ ಮಾಡಿದರೆ, ಉಷ್ಣ ಹೆಚ್ಚಾಗಿ, ಮಲವಿಸರ್ಜನೆ ಅತಿಯಾಗಿ ಆಗುತ್ತದೆ.
ನಿಮಗೆ ಪ್ರತಿದಿನ ಚಪಾತಿ ತಿನ್ನಬೇಕು ಎನ್ನಿಸಿದರೆ, 2 ಚಪಾತಿ ಸೇವನೆ ಸಾಕು. ನೀವು ಅನ್ನ, ಕುಚಲಕ್ಕಿ ಅನ್ನ, ಬೇರೆ ಹಿಟ್ಟಿನಿಂದ ಮಾಡಿದ ದೋಸೆ, ಸೂಪ್, ಗಂಜಿಗಳ ಸೇವನೆ ಮಾಡಬಹುದು. ಆದರೆ ಅಗತ್ಯಕ್ಕಿಂತ ಹೆಚ್ಚು ಚಪಾತಿ ಸೇವನೆ ಉತ್ತಮವಲ್ಲ.
ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?
ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?