Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಈ ಬಗ್ಗೆ ವೈದ್ಯರೇ ವಿವರಣೆ ನೀಡಿದ್ದಾರೆ ನೋಡಿ..
ಪಟಾಕಿ ಬಳಸಿದ ಸಂದರ್ಭದಲ್ಲಿ ಹೊಗೆ ಬರುತ್ತದೆ. ಈ ಹೊಗೆಯಿಂದಲೇ ಕಣ್ಣಿಗೆ ಮತ್ತು ಹೃದಯದ ಆರೋಗ್ಯಕ್ಕೆ, ಉಸಿರಾಟಕ್ಕೆ ತೊಂದರೆಯಾಗುತ್ತದೆ ಅಂತಾರೆ ವೈದ್ಯರು. ಹಾಗಾಗಿ ಸಾಮಾನ್ಯರ ಜೊತೆ, ಹೃದಯ ರೋಗ, ಅಸ್ತಮಾ ಇದ್ದವರು ಕೂಡ ಪಟಾಕಿ ಬಗ್ಗೆ ಎಚ್ಚರವಹಿಸಬೇಕಾಗುತ್ತದೆ. ಪಟಾಕಿ ಹೊಗೆ ಕಣ್ಣಿಗೆ ಹೋದರೆ, ಕಣ್ಣಿನ ಆರೋಗ್ಯ ಹಾಳಾಗುತ್ತದೆ. ಮೂಗಿಗೆ ಹೋದರೆ, ರಕ್ತನಾಳಗಳಿಗೆ ಈ ಹೊಗೆಯಿಂದ ತೊಂದರೆಯಾಗುತ್ತದೆ. ಹಾಗಾಗಿ ಹೃದಯದ ಸಮಸ್ಯೆ, ಉಸಿರಾಟದ ಸಮಸ್ಯೆ ಬರುತ್ತದೆ.
ಚಿಕ್ಕ ಮಕ್ಕಳು, ವಯಸ್ಸಾದವರು, ಆಸ್ತಮಾ ರೋಗಿಗಳು, ಹೃದಯದ ಖಾಯಿಲೆ ಇದ್ದವರು ಪಟಾಕಿಯಿಂದ ದೂರ ಉಳಿಯುವುದೇ ಉತ್ತಮ. ಯಾಕಂದ್ರೆ ಅಸ್ತಮಾ ರೋಗಿಗಳಿಗೆ ಪಟಾಕಿಯ ಹೊಗೆಯಿಂದ ತೊಂದರೆಯಾದ್ರೆ, ಹೃದಯದ ಸಮಸ್ಯೆ, ಚಿಕ್ಕ ಮಕ್ಕಳು ಮತ್ತು ಹಿರಿಯರಿಗೆ, ಪಟಾಕಿ ಶಬ್ಧದಿಂದಲೇ ತೊಂದರೆಯಾಗುತ್ತದೆ. ಪಟಾಕಿ ಶಬ್ದಕ್ಕೆ ಹಾರ್ಟ್ ಅಟ್ಯಾಕ್ ಆಗಿ, ಸಾವನ್ನಪ್ಪಿದ ಕೇಸ್‌ಗಳು ಇದೆ. ಹಾಗಾಗಿ ಇಂಥವರು ಪಟಾಕಿಯಿಂದ ದೂರವಿರುವುದೇ ಉತ್ತಮ.
ಇನ್ನು ಪಟಾಕಿ ಹೊಡೆದು ಗಾಯ ಆಗೋದು ಯಾವ ರೀತಿ ಎಂಬ ಬಗ್ಗೆ ವೈದ್ಯರು ವಿವರಿಸಿದ್ದು, ಮಳೆಗಾಲಕ್ಕೂ ಮುನ್ನವೇ ಸ್ಟೋರ್ ಮಾಡಿಟ್ಟಿದ್ದ ಪಟಾಕಿಗಳು, ಕೊಂಚ ಹೊತ್ತಿ ಆರಿಹೋಗುತ್ತದೆ. ಅದನ್ನು ಮತ್ತೆ ಹೊತ್ತಿಸಲು ಹೋದಾಗಲೇ, ಪಟಾಕಿ ಬ್ಲಾಸ್ಟ್ ಆಗಿ, ಹಲವು ಜನರಿಗೆ ತೊಂದರೆಯಾಗುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..