Health Tips: ನಾವು ಈ ಮೊದಲೇ ನಿಮಗೆ ತಾಯಿಯ ಎದೆ ಹಾಲಿನ ಸೇವನೆಯಿಂದ, ಮಗುವಿಗೆ ಏನೆಲ್ಲಾ ಲಾಭವಾಗುತ್ತದೆ ಅಂತಾ ಹೇಳಿದ್ದೇವೆ. ಆದರೆ ತಾಯಿಯ ಎದೆಹಾಲನ್ನು ಅಮೃತವೆಂದು ಯಾಕೆ ಹೇಳುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಸ್ತನಪಾನ ಮಾಡಿಸಲು ಯಾಕೆ ತೊಂದರೆಯಾಗತ್ತೆ ಎಂದರೆ, ದೈಹಿಕ ಮತ್ತು ಮಾನಸಿಕವಾಗಿ ತೊಂದರೆ ಇರುವ ಕಾರಣಕ್ಕೆ, ತಾಯಂದಿರಿಗೆ ಮಕ್ಕಳಿಗೆ ಹಾಲುಣಿಸಲು ತೊಂದರೆಯಾಗುತ್ತದೆ. ಈ ಮೂಲಕ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಮಕ್ಕಳ ಭವಿಷ್ಯವನ್ನು ನೀವು ಮನಸ್ಸಿನಲ್ಲಿಟ್ಟುಕೊಂಡು, ಸದಾ ನೆಮ್ಮದಿ, ಖುಷಿ ಖುಷಿಯಾಗಿ ಇರಲು ಪ್ರಯತ್ನಿಸಬೇಕು. ಉತ್ತಮ ನಿದ್ದೆ, ಆಹಾರ, ಬಿಸಿ ನೀರಿನ ಸೇವನೆಯಿಂದ ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ.
ಹಾಲಿನ ಉತ್ಪತ್ತಿ ಕಡಿಮೆಯಾದಾಗ, ಮಕ್ಕಳಿಗಂತಲೇ ಸಿಗುವ ಹಾಲಿನ ಪುಡಿಗೆ ಬಿಸಿ ನೀರನ್ನು ಮಿಕ್ಸ್ ಮಾಡಿ ಕುಡಿಸಲಾಗುತ್ತದೆ. ಆದರೆ ನೀವು ಆದಷ್ಟು ಎದೆಹಾಲು ಕುಡಿಸುವುದೇ ಉತ್ತಮ. ಏಕೆಂದರೆ, ತಾಯಿಯ ಎದೆಹಾಲಿನ ಮುಂದೆ, ಬೇರೆ ಯಾವುದನ್ನೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿಯೇ ಅದನ್ನು ಅಮೃತವೆಂದು ಹೇಳಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕಾದಲ್ಲಿ, ಈ ವೀಡಿಯೋ ನೋಡಿ..
ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..
ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

