Health Tips: ಹಿಂದಿನ ಕಾಲದಲ್ಲಿ ಮೊಬೈಲ್ ಇರಲಿಲ್ಲ. ಆದರೂ, ಜನ ಆರೋಗ್ಯವಾಗಿ, ನೆಮ್ಮದಿಯಾಗಿ ಇದ್ದರು. ಕೆಮ್ಮು, ನೆಗಡಿ, ಕೈ ಕಾಲು ನೋವು ಬಿಟ್ಟರೆ, ಬಿಪಿ, ಶುಗರ್ ಹೆಚ್ಚಿನವರಿಗೆ ಬರುತ್ತಿರಲಿಲ್ಲ. ಅದು ಶ್ರೀಮಂತರ ಖಾಯಿಲೆ ಅಂತಾನೇ ಫೇಮಸ್ ಇತ್ತು. ಆದರೆ ಈಗ ಮನೆಗೊಬ್ಬರಿಗೆ ಶುಗರ್, ಬಿಪಿ ಇದೆ. ಇತ್ತೀಚೆಗೆ ಶುರುವಾಗಿರುವ ಹೊಸ ಖಾಯಿಲೆ ಅಂದ್ರೆ ಡಿಪ್ರೆಶನ್. ಯಾರಾದರೂ ವ್ಯಕ್ತಿ, ವಸ್ತು ನಮ್ಮಿಂದ ದೂರವಾದಾಗ, ಈ ರೀತಿ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಹಾಗಾದ್ರೆ ಡಿಪ್ರೆಶನ್ ಬರುವಾಗ ಯಾವ ಸೂಚನೆ ಸಿಗತ್ತೆ ಅನ್ನೋ ಬಗ್ಗೆ ನಾವಿವತ್ತು ನಿಮಗೆ ವಿವರಿಸಲಿದ್ದೇವೆ.
ನಿಮ್ಮ ಮಕ್ಕಳು ಯಾವಾಗಲೂ ಚೈತನ್ಯದಾಯಕರಾಗಿದ್ದು, ಸಡೆನ್ ಆಗಿ ಸೈಲೆಂಟ್ ಆಗಿದ್ದರೆ, ಅಥವಾ ಮಾತು ಮಾತಿಗೂ ಸಿಟ್ಟಾಗುವುದು, ಅಳುವುದು, ಬೇಜಾರಾಗುವುದೆಲ್ಲ ಆಗುತ್ತಿದ್ದಲ್ಲಿ, ಅವರು ಡಿಪ್ರೆಶನ್‌ಗೆ ಜಾರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರನ್ನ ಕೂರಿಸಿಕೊಂಡು, ಸಮಾಧಾನವಾಗಿ ಮಾತನಾಡಿ, ಅವರ ಈ ಬಿಹೇವಿಯರ್‌ಗೆ ಕಾರಣವೇನು ಅಂತಾ ಕೇಳಿ.
ಯಾವಾಗಲೂ ನಿಮ್ಮೊಂದಿಗೆ, ಹೊರಗಡೆ ಹೋಗಲು, ಸಂಬಂಧಿಕರ ಮನೆಗೆ ಹೋಗಲು ಉತ್ಸುಕರಾಗಿರುತ್ತಿದ್ದ ಮಕ್ಕಳು, ಇಂದು ಎಲ್ಲಿ ಕರೆದರೂ ಬರಲು ಮನಸ್ಸಿಲ್ಲವೆಂದಲ್ಲಿ, ಇದು ಕೂಡ ಡಿಪ್ರೆಶನ್ ಲಕ್ಷಣವಾಗಿದೆ. ಇಂಥ ಮಕ್ಕಳನ್ನು ಮನೆಯಲ್ಲಿ ಒಬ್ಬರನ್ನೇ ಬಿಟ್ಟು ಹೋಗುವುದು ಉತ್ತಮವಲ್ಲ. ಹಾಗಾಗಿ ಅವರ ಬೇಸರಕ್ಕೆ, ಕಾರಣವೇನೆಂದು ವಿಚಾರಿಸಿ.
ಶಿಕ್ಷಣ ಅನ್ನೋದು ತುಂಬಾನೇ ಮುಖ್ಯ. ಆದರೆ ನಿಮ್ಮ ಮಗು ಕಲಿಯುವುದರಲ್ಲಿ ಜಾಣನಿಲ್ಲದಿದ್ದಾಗ, ಆ ಮಗುವಿಗೆ ಹೆಚ್ಚು ಬಯ್ಯಬೇಡಿ. ಹೊಡೆಯಬೇಡಿ. ಅದರಲ್ಲೂ ಮಗು ಹೆಚ್ಚು ಮಾತನಾಡುವುದು, ತುಂಬಾ ಮುಗ್ಧ ಮಗುವಾಗಿದ್ದಲ್ಲಿ, ನೀವು ಅದಕ್ಕೆ ಹೆಚ್ಚು ಶಿಕ್ಷೆ ಕೊಟ್ಟಷ್ಟು ಅದು ಕುಗ್ಗಿ ಹೋಗುತ್ತದೆ. ಬಳಿಕ ಡಿಪ್ರೆಶನ್‌ಗೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಅಥವಾ, ನಿಮ್ಮ ಮಗ ಜಾಣನಾಗಿದ್ದು, ಇತ್ತೀಚೆಗೆ ಅವನು ಓದಿನಲ್ಲಿ, ಇತರ ಶಾಲಾ ಚಟುವಟಿಕೆಗಳಲ್ಲಿ ಗಮನ ಕೊಡುತ್ತಿಲ್ಲ ಎಂದಾದರೆ, ಅದಕ್ಕೆ ಕಾರಣವೇನೆಂದು ಸಮಾಧಾನದಿಂದ ತಿಳಿದುಕೊಳ್ಳಲು ಪ್ರಯತ್ನಿಸಿ..
ಇನ್ನು ನಿಮ್ಮ ಮಗು ಪದೇ ಪದೇ ಆರೋಗ್ಯ ಸಮಸ್ಯೆ ಹೇಳಿಕೊಳ್ಳುತ್ತಿದೆ ಎಂದಲ್ಲಿ. ಇದಕ್ಕೂ ಡಿಪ್ರೆಶನ್ ಕಾರಣವಾಗಿರಬಹುದು. ಯಾವುದೋ ಒಂದು ವಿಚಾರವನ್ನು ಮಗು ಹೇಗೆ ಹೇಳಿಕೊಳ್ಳಬೇಕೆಂದು ತಿಳಿಯದೇ, ಈ ರೀತಿ ಆರೋಗ್ಯ ಸಮಸ್ಯೆಯ ಬಗ್‌ಗೆ ನಿಮ್ಮಲ್ಲಿ ಹೇಳಬಹುದು. ನೀವು ಉತ್ತಮ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿ. ಆರೋಗ್ಯಕರ ಆಹಾರಗಳನ್ನ ಕೊಡಿ. ಜೊತೆಗೆ ಮಗುವಿಗೆ ಶಾಲೆಯಲ್ಲಿ, ಅಥವಾ ಯಾರಾದರೂ ತೊಂದರೆ ನೀಡುತ್ತಿದ್ದಾರಾ ಅನ್ನೋ ಬಗ್ಗೆಯೂ ವಿಚಾರಿಸಿ.
ನಿಮ್ಮ ಮಗು ಸರಿಯಾಗಿ ಊಟ ಮಾಡುತ್ತಿದೆಯಾ..? ಖುಷಿಯಾಗಿದೆಯಾ..? ಅನ್ನುವುದನ್ನೂ ನೀವು ಗಮನಿಸಬೇಕು. ಮಗು ಸರಿಯಾಗಿ ಊಟ ಮಾಡುತ್ತಿಲ್ಲ, ನಿದ್ದೆಗಣ್ಣಲ್ಲಿ ಕನವರಿಸುತ್ತಿದೆ. ಯಾರೊಂದಿಗೂ ಹೆಚ್ಚು ಮಾತನಾಡದೇ ಸುಮ್ಮನೆ ಕುಳಿತುಕೊಳ್ಳುತ್ತದೆ. ಇಂಥ ಲಕ್ಷಣಗಳೆಲ್ಲ ಡಿಪ್ರೆಶನ್ ಲಕ್ಷಣಗಳಾಗಿದೆ. ಒಟ್ಟಿನಲ್ಲಿ ಮಕ್ಕಳಷ್ಟೇ ಅಲ್ಲ. ನಿಮ್ಮ ಪ್ರೀತಿ ಪಾತ್ರರು ಯಾರಲ್ಲಾದರೂ ಈ ರೀತಿ ಲಕ್ಷಣ ಕಂಡು ಬಂದರೂ, ನೀವು ಅವರನ್ನ ಗಮನಿಸಬೇಕು.
ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..