Wednesday, February 5, 2025

Latest Posts

ಚಳಿಗಾಲದಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಏನೇನು..?

- Advertisement -

Health Tips: ವೈದ್ಯೆಯಾದ ಡಾ.ದೀಪಿಕಾ ಚರ್ಮದ ಆರೈಕೆ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಚರ್ಮದ ಖಾಯಿಲೆ ಹೇಗೆ ಬರುತ್ತದೆ. ನಮ್ಮ ಚರ್ಮ ನುಣುಪಾಗಿರಲು ನಾವು ದೇಹಕ್ಕೆ ಏನು ಬಳಸಬೇಕು..? ಹೇಗೆ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು, ಚಳಿಗಾಲದಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಏನೇನು ಅಂತಲೂ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..

ಈ ಮೊದಲೇ ಹೇಳಿದಂತೆ, ಚಳಿಗಾಲದಲ್ಲಿ ಹೆಚ್ಚು ಬಿಸಿಯಾದ ನೀರಿನಿಂದ, ಹೆಚ್ಚು ಹೊತ್ತು ಸ್ನಾನ ಮಾಡಬಾರದು. ಇದರಿಂದ ನಮ್ಮ ಚರ್ಮದಲ್ಲಿ ಬಿರುಕು ಮೂಡುತ್ತದೆ. ಇನ್ನು ಹೆಚ್ಚಿನವರಿಗೆ ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದು ಹೆಚ್ಚು. ಹಾಗಾಗಿ ಅದಕ್ಕಾಗಿ ನೀವು ಮನೆಮದ್ದು ಅಥವಾ ವೈದ್ಯರ ಬಳಿ ಸಲಹೆ ಪಡೆದು, ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

ಇನ್ನು ಚಳಿಗಾಲದಲ್ಲಿ ಹೆಚ್ಚು ಕೆಮಿಕಲ್ ಇರುವ ಸೋಪ್‌ಗಳನ್ನು ಬಳಸಬಾರದು. ಇದರಿಂದ ಚರ್ಮ ಒಣಗುತ್ತದೆ. ಅಲ್ಲದೇ ಸ್ಕ್ರಬರ್‌ ಕೂಡ ಬಳಸದಿದ್ದಲ್ಲಿ ತುಂಬಾ ಉತ್ತಮ. ಮುಖಕ್ಕೆ ಹೆಚ್ಚು ಸೋಪ್ ಬಳಸಕೂಡದು. ಮುಖ ತೊಳೆದ ಬಳಿಕ, ಮಾಯ್ಶರೈಸಿಂಗ್ ಕ್ರೀಮ್ ಬಳಸಿದರೆ, ನಿಮ್ಮ ಮುಖದ ನುಣುಪು ಹಾಗೆೇ ಇರುತ್ತದೆ. ಮುಖ ಒಣಗಿದ ಬಳಿಕ ನೀವು ಮಾಸಿಶ್ಚರೈಸಿಂಗ್ ಕ್ರೀಮ್ ಹಚ್ಚಿದರೆ, ಅದರ ಎಫೆಕ್ಟ್ ಅಷ್ಟು ಚೆನ್ನಾಗಿರುವುದಿಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss