Goa Trip: ಭಾರತದಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಗೋವಾ ರಾಜ್ಯ ಕೂಡ ಒಂದು. ಇಲ್ಲಿ ಬರೀ ಬೀಚ್, ಬಾರ್‌ಗಳಷ್ಟೇ ಅಲ್ಲ, ಬದಲಾಗಿ ನೋಡಿ ಕಂಣ್ತುಂಬಿಕೊಳ್ಳಬಹುದಾದ ಚರ್ಚ, ದೇವಸ್ಥಾನ ಹೀಗೆ ಹಲವು ಸ್ಥಳಗಳಿದೆ. ಹಾಗಾದ್ರೆ ಗೋವಾಕ್ಕೆ ಹೋದ್ರೆ ನೀವು ಯಾವ ಯಾವ ಸ್ಥಳಗಳಿಗೆ ಹೋಗಬಹುದು ಅಂತಾ ನೋಡೋಣ ಬನ್ನಿ..
ನಾವಿಂದು ಗೋವಾಕ್ಕೆ ಹೋದಾಗ, ನೀವು ಹೋಗಬಹುದಾದ ಒಂದು ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅದೇ ಓಲ್ಡ್ ಗೋವಾ ಚರ್ಚ್. ಈ ಚರ್ಚ್‌ಗೆ ಹೋಗುವಾಗ ಯಾವುದೇ ದುಡ್ಡು ಕೊಡಬೇಕು ಅಂತಿಲ್ಲ. ನಿಮಗೆ ಇಲ್ಲಿ ಫ್ರೀ ಎಂಟ್ರಿ ಇರುತ್ತದೆ. ಅಲ್ಲದೇ, ಸೆಕ್ಯೂರಿಟಿ ಚೆಕ್ ಕೂಡ ಇರುತ್ತದೆ. ನೀವು ಇಲ್ಲಿ ದೇವರಿಗೆ ಅರ್ಪಿಸಲು ಹೂವು, ಕ್ಯಾಂಡಲ್ ಖರೀದಿಸಬಹುದು.
ಹಿಂದೂ ದೇವಸ್ಥಾನಗಳಲ್ಲಿ ಹೇಗೆ ಅರ್ದಂಬರ್ಧ ಬಟ್ಟೆ ಹಾಕಿ ಪ್ರವೇಶ ಮಾಡುವುದನ್ನು ನಿರ್ಭಂದಿಸಲಾಗಿದೆಯೋ, ಅದೇ ರೀತಿ ಇಲ್ಲಿ ತೀರಾ ಮೈ ಕಾಣುವಂತೆ ಬಟ್ಟೆ ಹಾಕಿ, ಪ್ರವೇಶ ಮಾಡುವುದನ್ನು ನಿರ್ಭಂದಿಸಲಾಗಿದೆ. ಇನ್ನು ಈ ಚರ್ಚ್ ಯಾಕೆ ಇಷ್ಟು ಫೇಮಸ್ ಅಂದ್ರೆ, ಇಲ್ಲಿನ ಶಿಲ್ಪಕಲೆಗೆ ಪ್ರಸಿದ್ಧಿಯಾಗಿದೆ. ಈ ಚರ್ಚ್ ನೋಡಲು ಸುಂದರವಾಗಿದ್ದು, ಕೆತ್ತನೆಯೂ ಸುಂದರವಾಗಿದೆ.
ಅಲ್ಲದೇ ಸೆಂಟ್ ಫ್ರಾನ್ಸಿಸ್ ಎವಿಯರ್ ಎಂಬ ಕ್ರಿಶ್ಚಿಯನ್ ಧರ್ಮಗುರುಗಳ ಮೃತದೇಹ ಇಲ್ಲಿದೆ. ಇದು ಹಳೆಯ ಮೃತದೇಹವಾಗಿದ್ದರೂ ಕೂಡ, ಇದರ ಕೂದಲು ಮತ್ತು ಉಗುರು ಹಾಗೇ ಬೆಳೆಯುತ್ತಿದೆ. ಹಾಗಾಗಿ ಇದನ್ನು ಗಾಜಿನ ಬಾಕ್ಸ್‌ನಲ್ಲಿ ಇರಿಸಲಾಗಿದ್ದು, ಕ್ರಿಶ್ಚಿಯನ್‌ರು ಇದರ ದರ್ಶನ ಮಾಡಲು ಈ ಚರ್ಚ್‌ಗೆ ಬರುತ್ತಾರೆ. ಆದರೆ ಇವರ ಮೃತದೇಹವನ್ನು ಹತ್ತಿರದಿಂದ ನೋಡಲು ವಿಶೇಷ ದಿನದಂದು ನೀವು ಬರಬೇಕಾಗುತ್ತದೆ. ಪ್ರತೀ ಹತ್ತು ವರ್ಷಕ್ಕೊಮ್ಮೆ ಇಲ್ಲಿ ಸೆಂಟ್ ಫ್ರಾನ್ಸಿಸ್ ಅವರ ಮೃತ ದೇಹವನ್ನು ಹೊರಗಿಡುತ್ತಾರೆ. ಆಗ ಅವರ ದೇಹವನ್ನು ಹತ್ತಿರದಿಂದ ಕಾಣಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?