Health Tips: ಪಕ್ಕದ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಟ ಹೆಚ್ಚಾಗಿದ್ದು, ಇದೀಕ ಕರ್ನಾಟಕಕ್ಕೂ ನಿಫಾ ವೈರಸ್ ಲಗ್ಗೆ ಇಟ್ಟಿದೆ. ಈ ಬಗ್ಗೆ ವೈದ್ಯರಾದ ಡಾ. ಆಂಜೀನಪ್ಪ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಿಫಾ ವೈರಸ್ ಹೇಗೆ ಹರಡುತ್ತದೆ..? ಇದರ ಲಕ್ಷಣಗಳೇನು..? ಇದಕ್ಕೆ ಹೇಗೆ ಮದ್ದು ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ಬಾವಲಿಯಿಂದ ಈ ನಿಫಾ ವೈರಸ್ ಹರಡುತ್ತದೆ. ಹೀಗೆ ಪ್ರಾಣಿ, ಪಕ್ಷಿಯಿಂದ ಮನುಷ್ಯನಿಗೆ ಹರಡುವ ಖಾಯಿಲೆಯನ್ನು ವೈದ್ಯಕೀಯ ಭಾಷೆಯಲ್ಲಿ, ಜೂನೋಟಿಕ್ ಡಿಸೀಸ್ ಎಂದು ಕರೆಯುತ್ತಾರೆ. ಪ್ರಾಣಿ, ಪಕ್ಷಿಗಳು ತಿಂದು ಬಿಟ್ಟು ಹಣ್ಣುಗಳ ಸೇವನೆಯಿಂದ, ಇಂಥ ರೋಗಗಳು ಬರುತ್ತದೆ. ಆದರೆ ಇದು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಅನ್ನೋ ಬಗ್ಗೆ ಯಾವುದೇ ಕ್ಲ್ಯಾರಿಟಿ ಇಲ್ಲಾ.
ಇನ್ನು ಇದರ ಗುಣಲಕ್ಷಣಗಳ ಬಗ್ಗೆ ಹೇಳುವುದಾದರೆ, ಯಾವುದೇ ವೈರಸ್ ಅಟ್ಯಾಕ್ ಆದಾಗ, ಜ್ವರ, ನೆಗಡಿ, ಕೆಮ್ಮು ಬರುತ್ತದೆ. ಕೈ ಕಾಲು ನೋವು, ರಕ್ತಕಣದಲ್ಲಿ ಏರುಪೇರಾಗುತ್ತದೆ. ರಕ್ತಸ್ರಾವವಾಗುವ ಸಾಧ್ಯತೆ ಇದೆ. ಇನ್ನು ಸರಿಯಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ, ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಮದ್ದಿಗಾಗಿ ಕಾಯದೇ, ವೈದ್ಯರ ಬಳಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..
ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?