Tuesday, March 11, 2025

Latest Posts

Cancer ಎಚ್ಚರಿಕೆ ನೀಡುವ ಸೂಚನೆಗಳು ಯಾವುವು!?

- Advertisement -

Health Tips: ಕ್ಯಾನ್ಸರ್ ಬರುವ ಮುನ್ನ ಎಂಥ ಸೂಚನೆಗಳು ಸಿಗುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇಂದು ಕ್ಯಾನ್ಸರ್ ಎಚ್ಚರಿಕೆ ನೀಡುವ ಸೂಚನೆಗಳು ಯಾವವು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ವೈದ್ಯರಾದ ಡಾ.ವಿ.ಬಿ ಗೌಡ ಅವರು ಕ್ಯಾನ್ಸರ್ ಬರುವುದಕ್ಕೂ ಮುನ್ನ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ರೀಸ್ಟ್‌ ಕ್ಯಾನ್ಸರ್ ಬರುವ ಮುನ್ನ, ಆ ಸ್ಥಳದಲ್ಲಿ ಸಣ್ಣ ಗಡ್ಡೆಯುಂಟಾಗುತ್ತದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು, ತಮ್ಮ ಪ್ರೈವೇಟ್ ಪಾರ್ಟ್ ತೋರಿಸಿ, ಚಿಕಿತ್ಸೆ ಪಡೆಯಲು ಇಚ್ಛಿಸುವುದಿಲ್ಲ. ಆದರೆ ನಿಮಗೆ ಇಂಥ ಸೂಚನೆ ಸಿಕ್ಕಲ್ಲಿ, ನೀವು ಅದಕ್ಕೆಲ್ಲ ಮುಜುಗರ ಪಡದೇ, ಚಿಕಿತ್ಸೆ ಪಡೆಯಬೇಕು. ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಗ ಆ ಕ್ಯಾನ್ಸರ್ ಗಡ್ಡೆ ದೊಡ್ಡದಾಗಿ, ನಿಮ್ಮ ಪ್ರಾಣಕ್ಕೆ ಸಂಚಕಾರ ತರುವುದನ್ನು ತಪ್ಪಿಸಬಹುದು.

ಇನ್ನು ಗಂಟಲ ಕ್ಯಾನ್ಸರ್ ಬಂದಾಗ, ಕೆಮ್ಮು ಶುರುವಾಗಿ, ಅದು ನಿಲ್ಲುವ ಸೂಚನೆ ಕೊಡುವುದಿಲ್ಲ. ಏನೇ ಮನೆ ಮದ್ದು ಮಾಡಿದರೂ ನಿಮಗೆ ಕೆಮ್‌ಮು ನಿಲ್ಲುತ್ತಿಲ್ಲವೆಂದಲ್ಲಿ, ಕೆಮ್ಮುವಾಗ ರಕ್ತ ಬರುತ್ತಿದೆ ಎಂದಲ್ಲಿ, ನಿಮ್ಮ ಧ್ವನಿ ಚೇಂಜ್ ಆಗುತ್ತ ಹೋಗುತ್ತಿದೆ ಎಂದಲ್ಲಿ, ಖಂಡಿತವಾಗಿಯೂ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ಅಲ್ಲದೇ, ಕ್ಯಾನ್ಸರ್ ನಿಮ್ಮ ದೇಹಕ್ಕೆ ಲಗ್ಗೆ ಇಟ್ಟಾಗ, ನಿಮ್ಮ ದೇಹದ ತೂಕವೂ ಸಡೆನ್ ಆಗಿ ಇಳಿಯುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದ್ದಲ್ಲಿ, ಈ ವೀಡಿಯೋ ನೋಡಿ..

ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?

ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?

ಸಲಿಂಗ ಅನ್ನೋದು ಮನುಷ್ಯ ಸಹಜ ಗುಣವೇ..?

- Advertisement -

Latest Posts

Don't Miss