Thursday, September 19, 2024

Latest Posts

ಗ್ಯಾಜೇಟ್ಸ್ನಿಂದ ಬರುವ ವಿಕಿರಣಗಳಿಂದ ತಪ್ಪಿಸಿಕೊಳ್ಳಲು ನಾವೇನು ಮಾಡಬಹುದು..?

- Advertisement -

Healthy tips: ಇಂದಿನ ಕಾಲದಲ್ಲಿ ಆರೋಗ್ಯವನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೆವೋ, ಅಷ್ಟು ಕಡಿಮೆ. ಏಕೆಂದರೆ, ಇಂದಿನ ಆಹಾರ ಪದ್ಧತಿ ಅನಾರೋಗ್ಯಕರವಾಗಿದೆ. ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಇತ್ಯಾದಿ ಬಂದು, ಮನುಷ್ಯ ಅದರಲ್ಲೇ ಮುಳುಗಿ ಹೋಗುತ್ತಿದ್ದಾನೆ. ಮತ್ತು ಇದು ಹೊರಸೂಸುವ ವಿಕಿರಣಗಳು, ನಮಗೆ ಗೊತ್ತಿಲ್ಲದೇ, ನಮ್ಮ ಆರೋಗ್ಯವನ್ನು ಹಾಳು ಗೆಡವುತ್ತಿದೆ. ಹಾಗಾದ್ರೆ ಗ್ಯಾಜೇಟ್ಸ್‌ನಿಂದ ಬರುವ ವಿಕಿರಣಗಳಿಂದ ತಪ್ಪಿಸಿಕೊಳ್ಳಲು ನಾವೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಮೊಬೈಲನ್ನು ನಿಮ್ಮ ಪ್ಯಾಂಟ್ ಕಿಸೆ, ಅಥವಾ ಶರ್ಟ್ ಕಿಸೆಯಲ್ಲಿ ಇಡಬೇಡಿ. ಅದನ್ನು ಬ್ಯಾಗ್‌ನಲ್ಲಿ ಇರಿಸಿಕೊಳ್ಳಿ. ಮತ್ತು ಬ್ಯಾಗನ್ನು ಜಾಗೃತೆಯಿಂದ ಇಟ್ಟುಕೊಳ್ಳಿ. ಏಕೆಂದರೆ, ಮೊಬೈಲ್‌ನಿಂದ ಬರುವ ವಿಕಿರಣಗಳು, ನಿಮ್ಮ ಹೃದಯ ಮತ್ತು ಕಿಡ್ನಿಯ ಆರೋಗ್ಯವನ್ನು ಹಾಳು ಮಾಡಬಹುದು. ಹಾಗಾಗಿ ಕಿಸೆಯಲ್ಲಿ ಮೊಬೈಲ್ ಇಡುವ ಅಭ್ಯಾಸವನ್ನು ಬಿಡಿ.

ಎರಡನೇಯದಾಗಿ ಮೊಬೈಲನ್ನು ರಾತ್ರಿ ಮಲಗುವಾಗ, ನಿಮ್ಮ ತಲೆಯ ಬಳಿ ಇಡಬೇಡಿ. ಅದನ್ನು ನಿಮ್ಮಿಂದ ದೂರವಿರಿಸಿ ಮಲಗಿ. ಮತ್ತು ಬೆಳಿಗ್ಗೆ ಬೇಗ ಎಳಲು ಅಲಾಂ ಇಡಿ. ಇದರಿಂದ ನಿಮಗೆ ಎರಡು ಲಾಭವಾಗುತ್ತದೆ. ಒಂದು ವಿಕಿರಣದಿಂದ ನಿಮಗೆ ತೊಂದರೆಯಾಗುವುದಿಲ್ಲ. ಮತ್ತೊಂದು ನೀವು ಬೆಳಿಗ್ಗೆ ಅಲಾಂ ಬಾರಿಸಿದಾಗ, ಎದ್ದು ಹೋಗಿ ಮೊಬೈಲ್ ಬಂದ್ ಮಾಡಬೇಕಾಗುತ್ತದೆ. ಹಾಗಾಗಿ ನಿಮಗೆ ಪೂರ್ಣವಾಗಿ ಎಚ್ಚರವಾಗಿ, ನೀವು ಏಳಲು ಅನುಕೂಲವಾಗುತ್ತದೆ.

ಮೂರನೇಯದಾಗಿ ಕೆಲಸ ಮಾಡುವಾಗ, ಲ್ಯಾಪ್‌ಟಾಪ್ ನಿಮ್ಮ ತೊಡೆಯ ಮೇಲೆ ಇರಿಸಿಕೊಳ್ಳಬೇಡಿ. ಟೇಬಲ್ ಬಳಸಿ. ಕೆಲವರು ಕಾಲಿನ ಮೇಲೆ ದಿಂಬು ಇಟ್ಟು, ಅದರ ಮೇಲೆ ಲ್ಯಾಪ್‌ಟಾಪ್ ಇಡುತ್ತಾರೆ. ಇದು ಕೂಡ ತಪ್ಪು. ಹೀಗೆ ಮಾಡುವುದರಿಂದ ಲ್ಯಾಪ್‌ಟಾಪ್ ಹೊರಸೂಸುವ ವಿಕಿರಣ ನಿಮ್ಮ ದೇಹ ಸೇರಿ, ನಿಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಲ್ಯಾಪ್‌ಟ್ಯಾಪ್ ಬಳಸುವಾಗ, ಟೇಬಲ್ ಮೇಲೆ ಇಟ್ಟು ಬಳಸಿ.

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

- Advertisement -

Latest Posts

Don't Miss