ಈ ಲೋಕದಲ್ಲಿ ಜೀವಜಂತುಗಳು ಹುಟ್ಟುವ ಮುನ್ನ, ಎಲ್ಲರಿಗಿಂತ ಮೊದಲು ಜನಿಸಿದ್ದು ಶಿವ ಎನ್ನಲಾಗತ್ತೆ. ಶಿವನಿಂದಲೇ ಈ ಲೋಕ ಸೃಷ್ಟಿಯಾಗಿದ್ದು ಎನ್ನುವ ನಂಬಿಕೆ ಇದೆ. ಸ್ಮಶಾನವಾಸಿಯಾದ ಶಿವ, ಡಮರುಗ, ವಿಭೂತಿ, ಸರ್ಪ, ಹುಲಿಯ ಚರ್ಮ, ಚಂದ್ರ, ಗಂಗೆ, ರುದ್ರಾಕ್ಷಿ ಮಾಲೆಯಿಂದಲೇ ತನ್ನನ್ನು ಸಿಂಗರಿಸಿಕೊಂಡಿದ್ದಾನೆ.
ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!
ದೇಹ ಮುಚ್ಚಲು ಹುಲಿಯ ಚರ್ಮವಿದ್ದರೆ, ಆಭರಣವಾಗಿ ರುದ್ರಾಕ್ಷಿಯಿದೆ. ಮುಡಿಯನ್ನ ಗಂಗೆಯಿಂದ ಸುತ್ತಿ, ಅದರಲ್ಲಿ ಚಂದ್ರ ಭೂಷಿತನಾಗಿದ್ದಾನೆ. ಕೊರಳಲ್ಲಿ, ಸರದಂತೆ ಸರ್ಪವಿದೆ. ಮೈತುಂಬ ವಿಭೂತಿ ಇದೆ. ಕೈಯಲ್ಲೊಂದು ತ್ರಿಶೂಲ ಹಿಡಿದು, ನಂದಿಯ ಮೇಲೆ ಆಸೀನನಾದರೆ, ಶಿವನಿಗಿಂತ ಸತ್ಯ, ಸುಂದರ ಇನ್ನೊಬ್ಬರಿಲ್ಲ. ಹಾಗಾಗಿಯೇ ಶಿವನನ್ನು ಸತ್ಯ, ಶಿವಂ, ಸುಂದರಂ ಎನ್ನಲಾಗಿದೆ.
ಇಂಥ ಸುಂದರ ಶಿವ, ಕೋಪ ಬಂದಾಗ, ಪ್ರಚಂಡ ರುದ್ರನಾಗುತ್ತಾನೆ. ಶಿವ ತಾಂಡವ ಮಾಡುತ್ತಾನೆ. ಮೂರನೇ ಕಣ್ಣನ್ನು ತೆರೆಯುತ್ತಾನೆ. ಒಮ್ಮೆ ಇದೇ ಕೋಪದಲ್ಲಿ ಶಿವ ತನ್ನ ತ್ರಿಶೂಲವನ್ನೇ ಮುರಿದಿದ್ದನಂತೆ. ರಜಸ್ಸು, ತಮಸ್ಸು ಮತ್ತು ಸಾತ್ವಿಕ ಗುಣವಿರುವ ಆಯುಧವೇ ತ್ರಿಶೂಲ. ಒಮ್ಮೆ ಪಾರ್ವತಿ ಶಿವನನ್ನು ಕುರಿತು ಪೂಜೆ ಮಾಡುತ್ತಿದ್ದಳು. ಪೂಜೆ ಮುಗಿಸಿ ಧ್ಯಾನಕ್ಕೆ ಕುಳಿತಿದ್ದಳು.
ಶಕ್ತಿ ದೇವತೆಗೆ ಇಷ್ಟವಾದ ದೀಪಾರಾಧನೆ ಮಾಡಿ…!
ಈಕೆಯ ಪೂಜೆಯನ್ನು ಕಂಡ ಶಿವನ ಪರಮ ಭಕ್ತನಾಗಿದ್ದ ಸುಧ ಎಂಬ ರಾಕ್ಷಸ, ಆಕೆಯ ಹಿಂದೆ ಬಂದು ನಿಂತ. ಅವನಿಗೂ ಶಿವನನ್ನು ಕಂಡರೆ ಅಪಾರ ಭಕ್ತಿ ಇದ್ದ ಕಾರಣ, ಅವನು ಪಾರ್ವತಿಯ ಪೂಜೆ ನೋಡಿ, ಆಕೆ ಧ್ಯಾನದಲ್ಲಿ ಮಗ್ನಳಾಗಿರುವುದನ್ನು ನೋಡುತ್ತ ನಿಂತಿದ್ದ. ಆದ್ರೆ ಧ್ಯಾನ ಮುಗಿದ ಬಳಿಕ, ರಾಕ್ಷಸನನ್ನು ನೋಡಿದ ಪಾರ್ವತಿ ಹೆದರಿ, ಶಿವನನ್ನು ಕೂಗಿ ಕರೆದಳು.
ಪಾರ್ವತಿ ಹೆದರಿಕೆಯಿಂದ ಕರೆಯುತ್ತಿದ್ದನ್ನು ಕೇಳಿದ ಶಿವ, ಆಕೆಗೆ ಯಾರೋ ಅಪಾಯ ಮಾಡಿರಬೇಕೆಂದು ತಿಳಿದು, ನಿಂತಲ್ಲಿಂದಲೇ ತನ್ನ ತ್ರಿಶೂಲವನ್ನು ಎಸೆದ. ಅದು ಸುಧನ ರುಂಡ ಮುಂಡ ಕತ್ತರಿಸಿತು. ಸ್ಥಳಕ್ಕೆ ಶಿವ ಬಂದಾಗ, ಅಯ್ಯೋ ನಾನು ನನ್ನ ಭಕ್ತನನ್ನೇ ಕೊಂದೆನಲ್ಲ ಎಂದು ಮನನೊಂದು, ತನ್ನ ತ್ರಿಶೂಲವನ್ನೇ ಮುರಿಯುತ್ತಾನೆ.
ನಂತರ ಸುಧನಿಗೆ ಮರುಜೀವ ನೀಡಲು ಹೋದಾಗ, ಅದನ್ನು ತಿರಸ್ಕರಿಸಿದ ಸುಧ, ನನಗೆ ನಿಮ್ಮಿಂದ ಸಾವು ಬಂದಿದ್ದು, ನನ್ನ ಪುಣ್ಯ. ನನಗೆ ಮರುಜೀವ ಬೇಡವೆಂದು ಸಾವನ್ನಪ್ಪುತ್ತಾನೆ. ಆಗ ಶಿವ, ನಿನ್ನ ಹೆಸರಲ್ಲಿ ನನ್ನ ದೇವಸ್ಥಾನ ನಿರ್ಮಾಣವಾಗಲಿ, ನನ್ನ ಜೊತೆ ನಿನ್ನನ್ನೂ ಭಕ್ತರು ಪೂಜಿಸುವಂತಾಗಲಿ ಎಂದು ಶಿವ ವರ ನೀಡುತ್ತಾನೆ. ಜಮ್ಮು ಕಾಶ್ಮೀರದಲ್ಲಿ ಸುಧ ಮಹಾದೇವ ದೇವಸ್ಥಾನವಿದ್ದು, ಮುರಿದು ತ್ರಿಶೂಲ ಇಲ್ಲೇ ಇದೆ ಎಂದು ಹೇಳಲಾಗಿದೆ.