Thursday, September 19, 2024

Latest Posts

ಮುಟ್ಟಾಗುವ ಮುನ್ನ ಕಿಬ್ಬೊಟ್ಟೆ ನೋವಾಗಲು ಕಾರಣವೇನು..?

- Advertisement -

Health tips: ಮುಟ್ಟಿನ ಸಂದರ್ಭದಲ್ಲಿ ಹಲವು ಹೆಣ್ಣು ಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಹೊಟ್ಟೆ ನೋವು, ಸೊಂಟ ನೋವು, ಕೈ ಕಾಲು ನೋವು, ವಾಂತಿ, ಸರಿಯಾಗಿ ಮಲವಿಸರ್ಜನೆಯಾಗದಿರುವುದು, ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇದೊರಂದಿಗೆ ಕೆಲವರಿಗೆ ಮುಟ್ಟಾಗುವ ಮುನ್ನ ಕಿಬ್ಬೊಟ್ಟೆ ನೋವಾಗುತ್ತದೆ. ಅದಕ್ಕೆ ಕಾರಣವೇನೆಂದು ಡಾ.ಕಿಶೋರ್ ವಿವರಿಸಿದ್ದಾರೆ.

ಮುಟ್ಟಿನ ನೋವು ಅಂದ್ರೆ, ಹೇಳಿಕೊಳ್ಳಲಾಗದ, ವಿವರಿಸಲಾಗದ, ವಿವರಿಸಿದರೂ ಗಂಡಸರಿಗೆ ಎಂದಿಗೂ ಅರ್ಥವಾಗದ ಹಿಂಸೆ. ಇಂಥ ಹಿಂಸೆ ಅನುಭವಿಸಿದವರಿಗೆ ಮಾತ್ರ ಗೊತ್ತು. ಇಂಥ ಸಮಸ್ಯೆಗಳಿಗೆ ಹಲವು ಪರಿಹಾರ ಮಾಡಿದರೂ ಕೂಡ ಏನೂ ಉಪಯೋಗವಾಗುವುದಿಲ್ಲ. ಅಂಥವರಿಗಾಗಿ ಇಂದು ಡಾ.ಕಿಶೋರ್ ಒಂದು ಮನೆಮದ್ದನ್ನು ಹೇಳಿದ್ದಾರೆ. ನಾಲ್ಕೈದು ಔಡಲ ಎಲೆ ಅಥವಾ ಹರಳೆಲೆ, ಅಥವಾ ಕ್ಯಾಸ್ಟರ್ ಲೀಫ್, ಇದನ್ನು ತೆಗೆದುಕೊಂಡು ತವ್ವಾದ ಮೇಲೆ ಒಂದು ಸ್ಪೂನ್ ಹರಳೆಣ್ಣೆ ಹಾಕಿ, ಈ ಎಲೆಗಳನ್ನು ಕೊಂಚ ಬೆಚ್ಚಗೆ ಮಾಡಿಕೊಳ್ಳಬೇಕು. ಬಳಿಕ ಹೊಟ್ಟೆಗೆ ತೆಳ್ಳಗಿನ ಬಟ್ಟೆ ಸುತ್ತಿ. ಅದರ ಮೇಲೆ ಈ ಎಲೆ ಇಟ್ಟು ಇಲ್ಲೊಂದು ದಪ್ಪಗಿನ ಬಟ್ಟೆ ಸುತ್ತಿ 15 ನಿಮಿಷವಾದರೂ ಇಟ್ಟುಕೊಳ್ಳಬೇಕು. ಆ ಎಲೆ ಮತ್ತು ಎಣ್ಣೆ ಎರಡರ ಬಿಸಿ ನಿಮ್ಮ ಹೊಟ್ಟೆಗೆ ತಾಕಬೇಕು. ಹೀಗೆ ಮಾಡಿದಾಗ, ಕಿಬ್ಬೊಟ್ಟೆ ನೋವು ಹೋಗುತ್ತದೆ.

ಎರಡನೇಯ ರೆಮಿಡಿ ಅಂದ್ರೆ, ಜೀರಿಗೆ, ಧನಿಯಾ ಮತ್ತು ಓಮಕಾಳು ಈ ಮೂರನ್ನು ಹುರಿದುಕೊಳ್ಳಬೇಕು. ಬಳಿಕ ಇದಕ್ಕೆ ನೀರು ಹಾಕಿ, ಕುದಿಸಬೇಕು. ನೀವು ಎಷ್ಟು ನೀರು ಹಾಕಿರುತ್ತೀರೋ, ಅಷ್ಟರಲ್ಲಿ ಅರ್ಧ ಭಾಗ ನೀರು ಇಂಗಬೇಕು. ಆಗ ಕಶಾಯ ರೆಡಿ ಎಂದರ್ಥ. ಇದನ್ನು ಯಾವುದೇ ಕಾರಣಕ್ಕೂ ಫಿಲ್ಟರ್ ಮಾಡದೇ, ಮೂರು ಗಂಟೆಗೊಮ್ಮೆ ಸೇವಿಸಬೇಕು. ಅಂದ್ರೆ ಈ ಕಶಾಯದೊಂದಿಗೆ ನೀವು ಅದರಲ್ಲಿ ಮಿಶ್ರಿತವಾದ ಜೀರಿಗೆ, ಧನಿಯಾ, ಓಮಕಾಳನ್ನು ಸಹ ಅಗಿದು ತಿನ್ನಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಈ ವೀಡಿಯೋ ನೋಡಿ..

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

- Advertisement -

Latest Posts

Don't Miss