Health Tips: ನಾವು ಕೂದಲು ಉದುರುವಿಕೆ ಸಮಸ್ಯೆ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದೇವೆ. ಅದೇ ರೀತಿ ಇಂದು ಪುರುಷರ ಹೇರ್ ಲಾಸ್ ಆಗಲು ಕಾರಣವೇನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರಾದ ಡಾ.ದೀಪಿಕಾ ಈಗಾಗಲೇ ಸೌಂದರ್ಯ ಸಮಸ್ಯೆಗೆ ಹಲವು ಪರಿಹಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಪುರುಷರಲ್ಲಿ ಹೆಚ್ಚು ಹೇರ್ ಲಾಸ್ ಆಗಲು ಕಾರಣವೇನು ಅಂತಾ ವಿವರಿಸಿದ್ದಾರೆ. ಪುರುಷರು ಹೆಚ್ಚಾಗಿ ಹೆಲ್ಮೆಟ್ ಬಳಸುತ್ತಾರೆ. ಹಾಗಾಗಿ ಡ್ಯಾಂಡ್ರಫ್ ಸಮಸ್ಯೆ ಉಂಟಾಗುತ್ತದೆ. ಬಳಿಕ ಕೂದಲು ಉದುರಲು ಶುರುವಾಗುತ್ತದೆ. ಈ ಕಾರಣಕ್ಕೆ ಪುರುಷರಲ್ಲಿ ಬೇಗ ಕೂದಲು ಉದುರುತ್ತದೆ.
ಅಲ್ಲದೇ, ಮಹಿಳೆಯರಿಗಿಂತ, ಪುರುಷರಿಗೆ ಬೇಗ ಮತ್ತು ಹೆಚ್ಚು ಕೂದಲು ಉದುರುವ ಸಮಸ್ಯೆ ಇರುತ್ತದೆ ಅಂತಾರೆ ವೈದ್ಯರು. ಇದಕ್ಕೆ ಕಾರಣವೇನೆಂದರೆ, ಪ್ರತಿದಿನದ ಜಂಜಾಟ, ಓಡಾಟ, ಕೆಲಸದ ಒತ್ತಡ, ಕುಟುಂಬದ ಸಮಸ್ಯೆ, ಇತ್ಯಾದಿ ಕಾರಣಗಳಿಂದಾಗಿ ಪುರುಷರಲ್ಲಿ ಬಹುಬೇಗ ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.

