Wednesday, February 5, 2025

Latest Posts

HIV ಯಾವ ಕಾರಣಗಳಿಂದ ಬರುತ್ತದೆ..?

- Advertisement -

Health Tips: ಯಾವ ರೋಗ ಬಂದರೂ, ಲಕ್ಷಣ ಕಂಡುಬಂದಾಗ, ನಾವು ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದರೆ ಹೆಚ್‌ಐವಿ ಬಂದಾಗ ಮಾತ್ರ, ಮುನ್ನೆಚ್ಚರಿಕೆ ಅತ್ಯಗತ್ಯ ಏಕೆಂದರೆ, ಇದು ನಮ್ಮ ಸುತ್ತಮುತ್ತಲು ಇರುವವರಿಗೂ ಹರಡಬಹುದು. ಪತ್ನಿ, ಮಕ್ಕಳಿಗೂ ಹರಡಬಹುದು. ಹಾಗಾಗಿ ಇಂಥ ಲಕ್ಷಣಗಳು ಕಂಡುಬಂದಾಗ, ವೈದ್ಯರ ಬಳಿ ಬೇಗ ಚಿಕಿತ್ಸೆ ಪಡೆಯುವುದು ಉತ್ತಮ. ಹಾಗಾದ್ರೆ HIV ಯಾವ ಕಾರಣಗಳಿಂದ ಬರುತ್ತದೆ ಎಂಬ ಬಗ್ಗೆ ವೈದ್ಯರಾದ ಡಾ.ಕೆ.ಜೆ.ಇರ್ಫಾನ್ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯ ಕಾರಣ ಅಂದ್ರೆ, ಓರ್ವ ವ್ಯಕ್ತಿಗಿಂತ ಹೆಚ್ಚಿನವರ ಜೊತೆ, ಲೈಂಗಿಕ ಕ್ರಿಯೆ ಮಾಡಿದಾಗ, HIV ಬರುತ್ತದೆ. ಹಾಗಾಗಿ ಯಾವುದೇ ವ್ಯಕ್ತಿಗೆ ವಿವಾಹಕ್ಕೂ ಮೊದಲೇ ಹೆಚ್‌ಐವಿ ಬಂದಿದ್ದರೆ, ಅಂಥವರು ವಿವಾಹವಾಗದಿರುವುದೇ ಉತ್ತಮ. ಅಲ್ಲದೇ, ಗರ್ಭಿಣಿಗೆ ಹೆಚ್‌ಐವಿ ಇದ್ದಲ್ಲಿ, ಅದು ಆಕೆಯ ಮಗುವಿಗೂ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೆಚ್‌ಐವಿ ಇರುವವರು, ಆ ಖಾಯಿಲೆ ಬೇರೆಯವರಿಗೆ ಹರಡದಂತೆ ನೋಡಿಕೊಳ್ಳಬೇಕು.

ಇನ್ನೊಂದು ವಿಷಯವೆಂದರೆ, ಬೇರೆಯವರಿಗೆ ನಾವು ರಕ್ತ ತೆಗೆದುಕೊಳ್ಳುವಾಗಲೂ, ಎಚ್ಚರದಿಂದಿರಬೇಕು. ಅಂಥ ವೇಳೆಯಲ್ಲಿ ರಕ್ತ ಕೊಟ್ಟವಿರಿಗೆ ಹೆಚ್‌ಐವಿ ಇದ್ದರೆ, ರಕ್ತ ಪಡೆಯದವರಿಗೂ ಅದು ಹರಡುತ್ತದೆ. ಎಷ್ಟೋ ಕಡೆ ದತ್ತು ತೆಗೆದುಕೊಂಡ ಮಕ್ಕಳಲ್ಲಿ ಹೆಚ್‌ಐವಿ ಇರುವುದು ಕಂಡುಬಂದಿದೆ. ಏಕೆಂದರೆ, ಆ ಮಕ್ಕಳ ಪೋಷಕರಿಗೂ ಹೆಚ್ಐವಿ ಇದ್ದಿರುತ್ತದೆ.

ಇನ್ನು ಇದರ ಚಿಕಿತ್ಸೆ ಬಗ್ಗೆ ಮಾತನಾಡುವುದಾದರೆ, ಹೆಚ್‌ಐವಿ ಬಂದಾಗ, ಮೊದಲ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಇದರಿಂದ ಏಡ್ಸ್ ರೋಗವನ್ನು ನಾಶಪಡಿಸಬಹುದು. ಆದರೆ ನೀವು ಅದನ್ನು ನಿರ್ಲಕ್ಷಿಸಿದ್ದಲ್ಲಿ, ಅದು ನಿಮ್ಮ ಕೈ ತಪ್ಪಿ ಹೋಗಬಹುದು. ನಿಮ್ಮ ಜೀವಕ್ಕೂ ಹಾನಿ ಖಚಿತ. ಹಾಗಾಗಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss