Health Tips: ನಿಮ್ಮ ಮುಖ ನಾರ್ಮಲ್ ಆಗಿದ್ದು, ಸಡನ್ನಾಗಿ ಚರ್ಮ ಕೆಂಪಗಾದರೆ, ಒಂದು ದಿನದ ಮಟ್ಟಿಗೆ ನೀವು ಮನೆ ಮದ್ದು ಮಾಡಿ ನೋಡಬಹುದು. ಕೆಲವೊಮ್ಮೆ ದೇಹದಲ್ಲಿ ಪಿತ್ತ ಹೆಚ್ಚಾಗಿ, ಇಡೀ ಮುಖದಲ್ಲಿ ಗುಳ್ಳೆಯಾಗುತ್ತದೆ. ತುರಿಕೆಯಾಗುತ್ತದೆ. ಆಗ ಹೆಚ್ಚು ತುರಿಸಿಕೊಳ್ಳದೇ, ಮನೆ ಮದ್ದು ಮಾಡುವುದರಿಂದ ಒಂದೇ ದಿನದಲ್ಲಿ ಆ ತುರಿಕೆ ಮತ್ತು ಗುಳ್ಳೆ ಮಾಯವಾಗುತ್ತದೆ. ಆದರೆ ನಿಮ್ಮ ಚರ್ಮ ದಿನದಿಂದ ದಿನಕ್ಕೆ ಹೆಚ್ಚು ಕೆಂಪಗಾಗುತ್ತಿದ್ದರೆ, ನೀವು ಖಂಡಿತ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯುವುದು ಉತ್ತಮ. ಯಾಕೆ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ವೈದ್ಯರಾದ ದೀಪಿಕಾ ಈ ಬಗ್ಗೆ ವಿವರಿಸಿದ್ದು, ಚರ್ಮ ಹೀಗೆ ಕೆಂಪಗಾಗುವುದನ್ನು ಅರ್ಟಿಕೇರಿಯಾ ಅಲರ್ಜಿ ಎಂದು ಕರೆಯುತ್ತೇವೆ. ವೈದ್ಯರ ಬಳಿ ತೋರಿಸಿದರೆ, ಇದಕ್ಕೆ ಮದ್ದು ನೀಡಿ, ಆದಷ್ಟು ಬೇಗ ಈ ಅಲರ್ಜಿ ಮಾಯವಾಗುವಂತೆ ಮಾಡುತ್ತಾರೆ. ಕೆಲವೊಮ್ಮೆ ವಯಸ್ಸಾಗುವಾಗ ಇಂಥ ಗುಳ್ಳೆಗಳು, ಚರ್ಮ ಒಣಗುವುದೆಲ್ಲ ನೋಡುತ್ತೇವೆ. ಇದೆಲ್ಲ ಕಾಮನ್ ಸಮಸ್ಯೆಗಳು.
ಆದರೆ ಕೆಲವೊಮ್ಮೆ ಕ್ಯಾನ್ಸರ್ ಬರುವ ಲಕ್ಷಣಗಳಲ್ಲಿ ಚರ್ಮ ಕೆಂಪಗಾಗುವುದು ಕೂಡ ಒಂದಾಗಿದೆ. ಏನೇ ಮನೆ ಮದ್ದು ಮಾಡಿದರೂ, ಚರ್ಮ ಕೆಂಪಗಾಗುವುದು ನಿಂತಿಲ್ಲವಾದಲ್ಲಿ, ವೈದ್ಯರ ಬಳಿ ಒಮ್ಮೆ ಪರೀಕ್ಷಿಸಿಕೊಳ್ಳಬೇಕು. ಕ್ಯಾನ್ಸರ್ ಲಕ್ಷಣ ಇದಾಗಿದ್ದಲ್ಲಿ, ಆದಷ್ಟು ಬೇಗ ಚಿಕಿತ್ಸೆ ಪಡೆದು ಅದನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಚರ್ಮ ಕೆಂಪಗಾಗುವುದರ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..