Thursday, December 12, 2024

Latest Posts

ಕನಸಿನಲ್ಲಿ ಹಂದಿ ಕಾಣಿಸಿಕೊಳ್ಳುವುದರ ಅರ್ಥವೇನು..?

- Advertisement -

Spiritual: ನಾವು ನಿಮಗೆ ಈಗಾಗಲೇ ಕನಸಿನ ಬಗ್ಗೆ ಹಲವು ಮಾಹಿತಿಗಳನ್ನು ಹೇಳಿದ್ದೇವೆ. ಕನಸಿನಲ್ಲಿ ಹಾವು, ಹಸು, ನಾಯಿ, ಬೆಕ್ಕು ಇವೆಲ್ಲ ಸೇರಿ ಇನ್ನೂ ಹಲವು ಜೀವಗಳು ಬಂದರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಇಂದು ನಾವು ಕನಸಿನಲ್ಲಿ ಹಂದಿ ಕಾಣಿಸಿಕೊಂಡರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.

ನಮ್ಮ ಸಮಾಜದಲ್ಲಿ ಹಂದಿಗೆ ಕೆಳ ಸ್ಥಾನವನ್ನೇ ಕೊಡಲಾಗಿದೆ. ಯಾರಾದರೂ ಗಲೀಜಾಗಿದ್ದರೆ, ಅವರನ್ನು ಹಂದಿಗೆ ಹೋಲಿಸಲಾಗುತ್ತದೆ. ಆದರೆ ನಿಜವಾದ ಸಂಗತಿ ಏನೆಂದರೆ, ಹಂದಿ ಎಂದರೆ, ನಾವು ಹಾಕುವ ಕಸವನ್ನು ತಿನ್ನುವ ಮೂಲಕ, ಸಮಾಜವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ. ಇನ್ನು ಕೆಲ ಧರ್ಮದಲ್ಲಿ ಹಂದಿಯನ್ನ ದ್ವೇಷ ಮಾಡಲಾಗುತ್ತದೆ. ಆದರೆ ಹಿಂದೂ ಧರ್ಮದಲ್ಲಿ ಹಂದಿ ಎಂದರೆ, ಲಕ್ಷ್ಮೀಯ ರೂಪ ಎಂದು ಹೇಳುತ್ತಾರೆ.

ಆದರೆ ಕನಸಿನಲ್ಲಿ ಹಂದಿ ಕಾಣಿಸಿಕೊಂಡರೆ, ನೀವು ದುರ್ಜನರ ಸಂಗ ಮಾಡಲಿದ್ದೀರಿ ಎಂದರ್ಥ. ಸಮಾಜದಲ್ಲಿ ನೀವು ಕೆಟ್ಟ ಹೆಸರು ಗಳಿಸಲಿದ್ದೀರಿ ಎಂದರ್ಥ. ಇನ್ನು ಕನಸಿನಲ್ಲಿ ಕಾಡು ಹಂದಿ ಕಂಡರೂ, ಅದು ಕೂಡ ಅಶಭವೇ ಆಗಿದೆ. ಕಾಡು ಹಂದಿಯನ್ನು ಹಲವರು ದೇವರ ರೂಪದಲ್ಲಿ ಕಾಣುತ್‌ತಾರೆ. ಅದನ್ನು ಪೂಜಿಸುತ್ತಾರೆ. ಅದರ ಮುಳ್ಳು, ಸೀಮಂತ ಶಾಸ್ತ್ರದಲ್ಲಿ ಬಳಸಲಾಗುತ್ತದೆ. ಆದರೆ ಕಾಡುಹಂದಿ ಕನಸಿನಲ್ಲಿ ಬಂದರೆ, ಮುಂದಾಗುವ ಅಪಘಾತದ ಬಗ್ಗೆ, ಅನಾರೋಗ್ಯದ ಬಗ್ಗೆ ಇದು ಸೂಚನೆ ಎನ್ನಲಾಗಿದೆ.

ಇನ್ನು ಹಂದಿಯ ಮೇಲೆ ಕುಳಿತು ಸವಾರಿ ಮಾಡುವ ಕನಸನ್ನು ನೀವು ಕಂಡಿದ್ದರೆ, ಅದರಿಂದ ನಿಮ್ಮ ಪದವಿ ಮತ್ತು ಪ್ರತಿಷ್ಠೆಗೆ ಧಕ್ಕೆ ಬರಲಿದೆ ಎಂದರ್ಥ. ಇನ್ನು ಹಂದಿಗಳ ಹಿಂಡನ್ನ ನೀವು ಕಂಡರೆ, ಕೆಟ್ಟ ಸಹವಾಸಗಳಾಗಿ, ಅದರಿಂದ ಮುಂದೆ ರಾಶಿ ರಾಶಿ ತೊಂದರೆ ಅನುಭವಿಸಲಿದ್ದೀರಿ ಎಂಬ ಸೂಚನೆ ಸಿಕ್ಕಂತೆ. ಕನಸಿನಲ್ಲಿ ಪುಟ್ಟ ಹಂದಿಮರಿ ಕಾಣುವುದರ ಅರ್ಥವೇನೆಂದರೆ, ನಿಮಗೆ ಸಣ್ಣ ಮಟ್ಟದ ಲಾಭವಾಗಿದೆ. ಆದರೆ ಕೆಲ ದಿನಗಳಲ್ಲಿ ಆ ಲಾಭವೂ ಕೈ ತಪ್ಪಿ ಹೋಗುತ್ತದೆ ಎಂಬುದೇ ಇದರ ಅರ್ಥ. ಇಂಥ ಕನಸುಗಳು ನಿಮಗೂ ಬಿದ್ದಿದ್ದರೂ, ನೀವು ದೇವರ ನಾಮಸ್ಮರಣೆ ಮಾಡಿ, ಹೊರಗೆ ಹೋಗುವುದು ಉತ್ತಮ.

ಮಗಳನ್ನೇ ವೇಶ್ಯೆಯನ್ನಾಗಿ ಮಾಡಿದ ಅಪ್ಪ- ಪೌರಾಣಿಕ ಕಥೆ

ಭಾಗ್ಯಶಾಲಿ ಮನುಷ್ಯರ ಈ 4 ಅಂಗದ ಮೇಲೆ ಇರುತ್ತದೆ ಮಚ್ಛೆ..

52 ಶಕ್ತಿಪೀಠ ಉದ್ಭವವಾಗಿದ್ದು ಹೇಗೆ..? ಸತಿ-ಶಿವನ ಕಥೆ..

- Advertisement -

Latest Posts

Don't Miss