Sunday, September 8, 2024

Latest Posts

‘ಚುನಾವಣಾ ಸಮಯದಲ್ಲಿ ಇನ್ನೂ ಏನೇನು ಆಗುತ್ತೆ ವೆಟ್ ಆ್ಯಂಡ್ ಸಿ’

- Advertisement -

Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿದ್ದು, ರಾಜ್ಯ ಸರ್ಕಾರ ಜಾತಿ ಗಣತಿ‌ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆಯಬೇಕು. ಅದರಲ್ಲಿ ಇರುವ ನ್ಯೂನತೆ ಹೊರಗಾಕುವ ಪ್ರಯತ್ನ ಮಾಡಬೇಕು. ಎಲ್ಲಾ ವರ್ಗದ ಪ್ರಮುಖರನ್ನು ಕರೆದು ಮಾತನಾಡುವ ಅವಶ್ಯಕತೆಯಿದೆ. ಡಿಸಿಎಂ ಡಿಕೆಶಿ ಅವರು ಸಹಿ ಮಾಡಿದ್ದು ದೊಡ್ಡ ಅಪರಾಧ ಅಲ್ಲ. ರಾಜ್ಯ ಬಿಜೆಪಿ ರಿಪೇರಿ ಮಾಡಲಾಗದಷ್ಟು ಪರಿಸ್ಥಿತಿ ದುಸ್ಥಿತಿ ತಲುಪಿದೆ. ಯಾರೇ ಅಧ್ಯಕ್ಷರಾದರು ಅದನ್ನು ರಿಪೇರಿ ಮಾಡಲಾಗದು. ಅರವಿಂದ್ ಲಿಂಬಾವಳಿ, ಸೋಮಣ್ಣ ಸೇರಿದಂತೆ ಹಲವರು ಅಸಮಾಧಾನ ಧ್ವನಿ ಎತ್ತಿದ್ದಾರೆ. ಧ್ವನಿ ಎತ್ತಿದವರ ಮನೆಗೆ ಹೋಗಿ ಬಂದ್ರೆ ಎಲ್ಲಾ‌ ಸರಿ ಆಗಲ್ಲ ಎಂದಿದ್ದಾರೆ.

ಅಲ್ಲದೇ, ಬಿಜೆಪಿ ಕಾರ್ಯಕರ್ತರು ನನ್ನ ಬಳಿ ನೋವು ಹೊರ ಹಾಕುತ್ತಿದ್ದಾರೆ. ನಮ್ಮದು ಲೀಡರ್ ಲೆಸ್ ಪಾರ್ಟಿ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ  ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಬಿಜೆಪಿ ಈಡಿ ಮತ್ತು ಐಟಿ ಮೂಲಕ ರಾಜಕೀಯ ಮಾಡುತ್ತಿದೆ. ವಿಪಕ್ಷಗಳು ಇರಲೇ ಬಾರದು ಎನ್ನುವುದು ಬಿಜೆಪಿ ಚಿಂತನೆ. ಈಗ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ಇದೆ ಎಂದಿದ್ದಾರೆ.

ಇನ್ನು ಶೆಟ್ಟರ್ ಮತ್ತೆ ಬಿಜೆಪಿ ಸೇರುತ್ತಾರೆ ಎಂಬುವು ಸುಳ್ಳು ಸುದ್ದಿ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ, ಪಕ್ಷ ಬಿಟ್ಟು ಹೋಗುತ್ತಿರುವವರನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿವೆ. ಚುನಾವಣಾ ಸಮಯದಲ್ಲಿ ಇನ್ನೂ ಏನೇನು ಆಗುತ್ತೆ ವೆಟ್ ಆ್ಯಂಡ್ ಸಿ ಎಂದು ಶೆಟ್ಟರ್ ಹೇಳಿದ್ದಾರೆ..

ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುತ್ತಿದೆ. ಎಲ್ಲರ ಮೇಲೆ ಸೂಕ್ತ ಕ್ರಮವಾಗಲಿ ಎಂದು ಶೆಟ್ಟರ್ ಹೇಳಿದ್ದಾರೆ..

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿದ ಬಗ್ಗೆ ನೋಟಿಸ್ ನೀಡಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೆಟ್ಟರ್, ಕಾಂಗ್ರೆಸ್ ತನ್ನ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಿದೆ. ಇದರಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಅಂತ ತೆಲಂಗಾಣ ರಾಜ್ಯ ಸರ್ಕಾರ ನೋಟಿಸ್ ನೀಡುವ ಅಗತ್ಯ ಇಲ್ಲ. ಇದನ್ನು ಚುನಾವಣಾ ಆಯೋಗ ಗಮನಿಸಬೇಕು ಎಂದಿದ್ದಾರೆ.

2028ಕ್ಕೂ ನೀನೇ ಈ ರಾಜ್ಯ ಆಳಬೇಕು ಕಣಪ್ಪ : ಸಿದ್ದರಾಮಯ್ಯಗೆ ಹಾರೈಸಿದ ನಿಂಗಯ್ಯ

ಜನತಾ ದರ್ಶನದ ವೇಳೆ ಅಧಿಕಾರಗಳ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ.. ಯಾಕೆ ಗೊತ್ತಾ..?

ಆಸ್ತಿ ಬರೆಯಿಸಿಕೊಂಡು ತಾಯಿಗೆ ಮೋಸ ಮಾಡಿದ ಮಗ: ಸಿಎಂಗೆ ದೂರು

- Advertisement -

Latest Posts

Don't Miss