Sunday, June 1, 2025

Latest Posts

ತೂಕ ಕಡಿಮೆ ಮಾಡಲು ಯಾವ ಆಹಾರವನ್ನು ಸೇವಿಸಬೇಕು..?

- Advertisement -

ನಾವು ಈ ಮೊದಲೇ ನಿಮಗೆ ತೂಕ ಕಡಿಮೆ ಮಾಡಲು ಕೆಲವರು ಸರ್ಜರಿ ಮಾಡಿಸಿಕೊಳ್ತಾರೆ. ಆದ್ರೆ ಅದರ ಅಡ್ಡ ಪರಿಣಾಮವೇನಾಗತ್ತೆ ಅನ್ನೋ ಬಗ್ಗೆ ಹೇಳಿದ್ದೆವು. ಈ ಬಗ್ಗೆ ವೇಯ್ಟ್ ಲಾಸ್ ಕೋಚ್ ಭೂಮಿಕಾ ಮಂಜುನಾಥ್ ವಿವರಣೆ ನೀಡಿದ್ದರು. ಇದೀಗ ಅವರೇ ನ್ಯಾಚುರಲ್ ಆಗಿ ವೇಯ್ಟ್ ಲಾಸ್ ಮಾಡೋಕ್ಕೆ ಏನು ತಿನ್ನಬೇಕು ಅನ್ನೋ ಬಗ್ಗೆ ಹೇಳಿದ್ದಾರೆ.

ನನ್ನ ಬಳಿ ಹಲವಾರು ಜನ ಬರ್ತಾರೆ. ಬಂದು ನಾನು ಸಿಕ್ಕಾಪಟ್ಟೆ ಸಣ್ಣಾ ಆಗ್ಬೇಕು. ಆದ್ರೆ ನನಗೆ ಜಂಕ್ ಫುಡ್ ತಿನ್ನೋದು ಬಿಡೋಕ್ಕಾಗಲ್ಲ. ನಾನ್‌ವೆಜ್ ತಿನ್ನೋದು ಬಿಡಕ್ಕಾಗಲ್ಲ. ಆದ್ರೆ ನಾನು ಹೆಲ್ದಿಯಾಗಿರಬೇಕು ಅಂತಾರೆ. ಹೀಗೆಂದ ಮೇಲೆ ಸಣ್ಣ ಆಗೋದು ಹೇಗೆ. ನಾನು ಎಷ್ಟೊಂದು ದಪ್ಪ ಇದ್ದೆ. ಡಯಟ್ ಮಾಡಿ, ಎಕ್ಸಸೈಜ್ ಮಾಡಿ, ಸಣ್ಣ ಆದೆ. ಹಾಗಂತ ನಾನು ಜಂಕ್‌ ಫುಡ್ ತಿನ್ನೋದು ಬಿಟ್ಟಿಲ್ಲ. ಆದ್ರೆ ಹೆಲ್ದಿ ಫುಡ್ ಹೆಚ್ಚು ತಿಂದು, ಅನ್‌ಹೆಲ್ದಿ ಫುಡ್ ತಿನ್ನೋದು ಕಡಿಮೆ ಮಾಡಿದ್ದೇನೆ ಅಂತಾರೆ ವೇಯ್ಟ್ ಲಾಸ್ ಕೋಚ್ ಭೂಮಿಕಾ.

ನೀವು ಯಾವ ಆಹಾರವನ್ನೂ ತ್ಯಾಗ ಮಾಡದೇ ಸಣ್ಣ ಆಗಬಹುದು. ಆದ್ರೆ ಆ ಆಹಾರದಲ್ಲಿ ಸಕ್ಕರೆ ಇರಬಾರದು. ಆ ಆಹಾರದಲ್ಲಿ ಸಕ್ಕರೆ ಇದ್ದರೆ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್  ಹೆಚ್ಚಾಗುತ್ತದೆ. ಇದರಿಂದಲೇ ದೇಹದ ತೂಕ ಹೆಚ್ಚುವುದು. ರೋಗ ರುಜಿನಗಳು ಬರುವುದು ಶುರುವಾಗುತ್ತದೆ. ಹೀಗಾಗಿ ನೀವು ತಿನ್ನುವ ಆಹಾರದಲ್ಲಿ ಸಕ್ಕರೆ ಇಲ್ಲದಂತೆ ನೋಡಿಕೊಳ್ಳಿ. ಸಕ್ಕರೆಯಷ್ಟೇ ಅಲ್ಲ. ಸಕ್ಕರೆ ಅಂಶವುಳ್ಳ ಯಾವ ಪದಾರ್ಥವನ್ನೂ ನೀವು ತಿನ್ನಬಾರದು. ಅದು ರೈಸ್ ಆಗಿರಬಹುದು, ವೈಟ್ ಪಾಯ್ಸನ್ ಅಂತಾನೇ ಹೇಳೋ ಮೈದಾ ಆಗಿರಬಹುದು.

ಸೊಪ್ಪು, ಮೊಳಕೆ ಕಾಳು, ತುಪ್ಪ, ಡ್ರೈಫ್ರೂಟ್ಸ್ ಇವನ್ನೆಲ್ಲ ನಿಯಮಿತವಾಗಿ ತಿಂದರೆ, ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಹಣ್ಣು, ತರಕಾರಿ, ಫ್ಯಾಟ್ ಇಲ್ಲದ ನಾನ್‌ ವೆಜ್ ಕೂಡ ತಿನ್ನಬಹುದು. ಆದ್ರೆ ಈ ಹೆಲ್ದಿ ಆಹಾರಗಳು ಕೂಡ ಲಿಮಿಟ್‌ನಲ್ಲೇ ತಿನ್ನಬೇಕು. ನಿಮಗೆ ಡಯಟ್‌ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ನೀವು ಭೂಮಿಕಾ ಅವರನ್ನೇ ಭೇಟಿ ಮಾಡಬಹುದು. ಅವರು ಯಾವ ಫುಡ್ ತಿಂದ್ರೆ ಒಳ್ಳೆದು. ಮನೆಯಲ್ಲೇ ಜಂಕ್‌ಫುಡ್‌ಗಳನ್ನ ಹೆಲ್ದಿ ಮಾಡಿ ತಿನ್ನೋದು ಹೇಗೆ ಅಂತಾ ಹೇಳಿಕೊಡ್ತಾರೆ.

ಭೂಮಿಕಾ ಮಂಜುನಾಥ್: 9686638440..

- Advertisement -

Latest Posts

Don't Miss