ನಾವು ಮಲಗಿದ ಮೇಲೆ ಕಾಣುವ ಕನಸು ನಮ್ಮ ಕೈಯಲ್ಲಿಲ್ಲ. ಕೆಲವೊಮ್ಮೆ ನಮ್ಮ ಪರಿಚಯಸ್ಥರು ಕನಸ್ಸಿನಲ್ಲಿ ಬರ್ತಾರೆ. ಕೆಲವೊಮ್ಮೆ ತೀರಿಹೋದವರು ಕನಸ್ಸಿನಲ್ಲಿ ಬರ್ತಾರೆ. ಕೆಲವೊಮ್ಮೆ, ಪ್ರಾಣಿ, ಪಕ್ಷಿ, ಗಿಡ ಮರ, ದೇವರು, ಯಾವುದೇ ಜಾಗ ಅಥವಾ ದೇವಸ್ಥಾನ, ಶಾಲೆ ಇತ್ಯಾದಿ ಕನಸ್ಸಿನಲ್ಲಿ ಬರುತ್ತದೆ. ಕನಸು ಕೂಡ ಚಿತ್ರ ವಿಚಿತ್ರವಾಗಿರುತ್ತದೆ. ಅದಕ್ಕೆ ಅರ್ಥಾನೇ ಇರೋದಿಲ್ಲಾ. ಆದ್ರೆ ಕೆಲವು ಕನಸು ನಮ್ಮ ಜೀವನವನ್ನೇ ಬದಲಾಯಿಸುವಂತೆ ಇರುತ್ತದೆ. ಹಾಗಾಗಿ ಇಂದು ನಾವು ಕನಸ್ಸಿನಲ್ಲಿ ಮಂಗಳಮುಖಿಯರು ಬಂದ್ರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಂಗಳಮುಖಿಯರು ಶಿವ ಪಾರ್ವತಿಯರ ಸ್ವರೂಪ. ಅರ್ಧನಾರೇಶ್ವರನ ಅಂಶ ಅಂತಾ ಹೇಳಲಾಗುತ್ತದೆ. ಹಾಗಾಗಿ ಅವರನ್ನು ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮವಿದ್ದಾಗ, ಆಶೀರ್ವಾದ ಪಡೆಯುವುದಕ್ಕೆ ಕರೆಯಲಾಗುತ್ತದೆ. ಅದೇ ರೀತಿ ದಾರಿಯಲ್ಲಿ ಮಂಗಳಮುಖಿಯರು ದುಡ್ಡು ಕೇಳಲು ಬಂದರೆ, ಅವರಿಗೆ ದುಡ್ಡು ನೀಡಿ. ವಾಪಸ್ ಅವರಿಂದ ಒಂದು ರೂಪಾಯಿ ಪಡೆಯಬೇಕು. ಆ ಒಂದು ರೂಪಾಯಿಯನ್ನು ಜೋಪಾನವಾಗಿ ಇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಮಗೆ ದುಡ್ಡಿನ ಕೊರತೆ ಆಗುವುದಿಲ್ಲ ಅನ್ನೋ ನಂಬಿಕೆ ಇದೆ.
ಅದೇ ರೀತಿ ಮಂಗಳಮುಖಿ ಕನಸ್ಸಿನಲ್ಲಿ ಬಂದರೆ, ನೀವು ಅವಳಿಗೆ ದುಡ್ಡು ಕೊಡುತ್ತಿದ್ದರೆ, ನಿಮ್ಮ ಜಾತಕದಲ್ಲಿ ಬುಧನಿಂದಾಗಿ ನಿಮಗೇನಾದರೂ ತೊಂದರೆ ಇದ್ದರೆ, ಅದು ನಿವಾರಣೆಯಾಗುತ್ತದೆ ಎಂದರ್ಥ. ಅಲ್ಲದೇ ನಿಮ್ಮ ಅದೃಷ್ಟ ಖುಲಾಯಿಸಲಿದೆ. ನಿಮಗೆ ಧನಲಾಭವಾಗಲಿದೆ ಎಂದರ್ಥ. ಹಾಗಾಗಿ ಆ ದಿನ ನಿಮಗೆ ನಿಜವಾಗ್ಲೂ ಮಂಗಳಮುಖಿ ಎದುರಾದರೆ, ಆಕೆಗೆ ಕೊಂಚ ದಾನ ನೀಡಿ.
ಆದ್ರೆ ನಿಮ್ಮ ಕನಸ್ಸಿನಲ್ಲಿ ನಿಮ್ಮ ಬಳಿ ದುಡ್ಡು ಕೇಳಲು ಮಂಗಳಮುಖಿ ಬಂದು, ಆಕೆ ಖಾಲಿ ಕೈಯಲ್ಲಿ ಮನೆಯಿಂದ ಹೋದರೆ, ನಿಮಗೆ ಏನೋ ತೊಂದರೆಯಾಗುವುದಿದೆ ಎಂದರ್ಥ. ಅಥವಾ ದುಡ್ಡಿನ ಕೊರತೆ ಉಂಟಾಗಲಿದೆ ಎಂದರ್ಥ. ಇದರಿಂದ ಮುಕ್ತಿ ಪಡೆಯಲು ನಿಮಗೆ ಮಂಗಳಮುಖಿ ಸಿಕ್ಕಾಗ, ದಾನ ನೀಡಿ.