ಮುಕ್ಕಣ್ಣು ಹೊಂದಿರುವ ಶಿವ, ಮೂರನೇ ಕಣ್ಣು ತೆರೆದಾಗ ಲೋಕವೇ ನಾಶವಾಗಿದೆ ಎಂದು ನಾವು ಪುರಾಣ ಕಥೆಗಳಲ್ಲಿ ಓದಿದ್ದೇವೆ. ಈ ಬಗ್ಗೆ ಹಲವಾರು ರೀತಿಯ ಕಥೆಗಳಿದೆ. ಇಂದು ನಾವು ಆ ಕಥೆಯಲ್ಲಿ ಒಂದು ಕಥೆಯನ್ನ ಹೇಳಲಿದ್ದೇವೆ. ಹಾಗಾದ್ರೆ ಶಿವನ ಮೂರನೇಯ ಕಣ್ಣು ತೆರೆದಾಗ ಏನೇನಾಯಿತು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕಥೆ ಶಿವ ಮತ್ತು ಕಾಮದೇವನ ಕಥೆ. ಪಾರ್ವತಿಯ ತಂದೆ ದಕ್ಷ, ಯಜ್ಞ ಮಾಡಲು ನಿರ್ಧರಿಸಿದ್ದ. ಆದರೆ ಆ ಯಜ್ಞಕ್ಕೆ ಎಲ್ಲರನ್ನು ಕರೆದು ತನ್ನ ಪುತ್ರಿ ಸತಿ ಮತ್ತು ಶಿವನನ್ನು ಕರೆದಿರಲಿಲ್ಲ. ಇದರಿಂದ ಅವಮಾನಿತಳಾದ ಸತಿ, ತಂದೆ ಯಜ್ಞ ಮಾಡುತ್ತಿರುವ ಯಜ್ಞ ಕುಂಡಕ್ಕೆ ಹೋಗಿ, ತನ್ನನ್ನು ತಾನು ಆಹುತಿ ಕೊಡುತ್ತಾಳೆ. ಇದಾದ ಬಳಿಕ ಶಿವ ಕ್ರೋಧಗೊಳ್ಳುತ್ತಾನೆ. ಸತಿಯ ದೇಹವನ್ನು ಹಿಡಿದು ಶಿವ ತಾಂಡವ ಮಾಡುತ್ತಾನೆ.
ವಿಷ್ಣು ಸತಿಯನ್ನ ಛಿದ್ರ ಮಾಡಿ, ಶಿವನ ತಾಂಡವವನ್ನ ನಿಲ್ಲಿಸುತ್ತಾನೆ. ಇದಾದ ಬಳಿಕ ಶಿವ ಹಲವು ವರ್ಷಗಳವರೆಗೆ ತಪಸ್ಸಿಗೆ ಕೂರುತ್ತಾನೆ. ಶಿವನ ಧ್ಯಾನ ಭಂಗ ಮಾಡುವ ಧೈರ್ಯ ಯಾರಲ್ಲಿಯೂ ಇರುವುದಿಲ್ಲ. ಆಗ ನಾರದರು, ಕಾಮ ದೇವನಲ್ಲಿ ಈ ಬಗ್ಗೆ ಕೇಳಿಕೊಳ್ಳುತ್ತಾರೆ. ಆಗ ಕಾಮದೇವ, ತನ್ನ ಬಾಣವನ್ನ ಶಿವನೆಡೆಗೆ ಬಿಡುತ್ತಾನೆ. ಬಾಣ ತಾಕುತ್ತಿದ್ದಂತೆ, ತನ್ನ ಧ್ಯಾನವನ್ನು ಭಂಗ ಮಾಡಿದವರು ಯಾರು ಎಂದು ಶಿವ ಕ್ರೋಧಿತನಾಗುತ್ತಾನೆ. ಈ ವೇಳೆ ಶಿವ ಮೂರನೇ ಕಣ್ಣು ಬಿಟ್ಟು ಕಾಮದೇವನನ್ನು ಸುಡುತ್ತಾನೆ.
ಇದೇ ದಿನವನ್ನ ನಾವು ಹೋಲಿ ಹುಣ್ಣಿಮೆ ಎಂದು ಆಚರಿಸುತ್ತೇವೆ. ಈ ದಿನ ಮನೆ ಮನೆಯಿಂದ ಕಟ್ಟಿಗೆ ಸಂಗ್ರಹಿಸಿ, ಕಾಮದೇವನನ್ನು ಸುಡಲಾಗತ್ತೆ. ಇದನ್ನೇ ಕಾಮದಹನ ಅಂತ ಹೇಳೋದು. ಶಿವ ಮೂರನೇಯ ಕಣ್ಣು ತೆರೆದ ಬಗ್ಗೆ ಇನ್ನೂ ಹಲವು ಕಥೆಗಳಿದೆ. ಆ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..
ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1