ಇದರ ಮೊದಲ ಭಾಗದಲ್ಲಿ ನಾವು ಶಿವ ಧ್ಯಾನದಲ್ಲಿರುವಾಗ, ಕಾಮದೇವ ಅವನ ಧ್ಯಾನ ಭಂಗ ಮಾಡಿದ್ದಕ್ಕಾಗಿ, ಶಿವ ತನ್ನ ಮೂರನೇಯ ಕಣ್ಣು ಬಿಟ್ಟು, ಕಾಮ ದೇವನನ್ನು ಸುಟ್ಟು ಹಾಕಿದ ಬಗ್ಗೆ ಕಥೆ ಹೇಳಿದ್ದೆವು. ಈಗ ಶಿವ ಮತ್ತು ಪಾರ್ವತಿಯ ಮಧ್ಯೆ ನಡೆದ ಘಟನೆಯಿಂದ ಶಿವ ಮೂರನೇಯ ಕಣ್ಣು ಬಿಟ್ಟ ಬಗ್ಗೆ ಕಥೆಯನ್ನು ಹೇಳಲಿದ್ದೇವೆ..
ಒಮ್ಮೆ ಶಿವ ಎಲ್ಲ ದೇವತೆಗಳೊಂದಿಗೆ ಸಭೆಯಲ್ಲಿ ಭಾಗಿಯಾಗಿದ್ದ. ಆಗ ಬಂದ ಪಾರ್ವತಿ, ಶಿವನೊಂದಿಗೆ ತಮಾಷೆ ಮಾಡೋಣವೆಂದು ಹೇಳಿ, ಹಿಂದಿನಿಂದ ಬಂದು ಶಿವನ ಕಣ್ಣುಗಳನ್ನ ಮುಚ್ಚಿದಳು. ಶಿವನ ಕಣ್ಣು ಮುಚ್ಚಿದ್ದೇ ತಡ, ಇಡೀ ಲೋಕದಲ್ಲಿ ಕತ್ತಲೆ ಸಂಭವಿಸಿತು. ಪ್ರಾಣಿ, ಪಕ್ಷಿಗಳು, ಜೀವ ಜಂತುಗಳು ಒದ್ದಾಡಲು ಪ್ರಾರಂಭಿಸಿದವು. ಶಿವ ಎಷ್ಟೇ ಕೇಳಿಕೊಂಡರೂ ಪಾರ್ವತಿ, ಕೈ ತೆಗಿಯಲಿಲ್ಲ. ಭಕ್ತರ, ಜೀವ ಜಂತುಗಳ ಹಾಹಾಕಾರವನ್ನು ಕೇಳಲಾಗದೇ, ಶಿವ ತನ್ನ ಮೂರನೇ ಕಣ್ಣನ್ನ ಬಿಟ್ಟ.
ಇನ್ನೊಂದು ಬಾರಿ ಇಂದ್ರದೇವ ಮತ್ತು ದೇವತೆಗಳ ಗುರುಗಳಾದ ಬ್ರಹಸ್ಪತಿ ಶಿವನನ್ನು ನೋಡಲು ಕೈಲಾಸಕ್ಕೆ ಬರುತ್ತಾರೆ. ಆದ್ರೆ ಅವರೊಂದಿಗೆ ತಮಾಷೆ ಮಾಡಬೇಕು ಎಂದು ಶಿವ, ಕೈಲಾಸದಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ಕೈಲಾಸದಲ್ಲಿ ಶಿವ ಕಾಣದಿದ್ದಾಗ, ಇಂದ್ರನಿಗೆ ಶಿವ ತಮ್ಮನ್ನು ಆಟವಾಡಿಸಲು ಹೀಗೆ ಮಾಡುತ್ತಿದ್ದಾನೆಂದು ಇಂದ್ರನ ಗರ್ವ ಹೆಚ್ಚಾಗುತ್ತದೆ. ಇಂದ್ರ ತನ್ನ ವಜ್ರಾಯುಧವನ್ನು ಶಿವನೆಡೆಗೆ ಬಿಡುತ್ತಾನೆ.
ಈ ವೇಳೆ ಶಿವನಿಗೂ ಕ್ರೋಧ ಬರುತ್ತದೆ. ಆಗ ಶಿವ ಮೂರನೇ ಕಣ್ಣು ತೆರೆಯುತ್ತಾನೆ. ಅಲ್ಲಿ ಬ್ರಹಸ್ಪತಿ ಗುರುಗಳು ಇಲ್ಲದಿದ್ದರೆ, ಇಂದ್ರನ ದೇವನ ಪ್ರಾಣ ಅಲ್ಲೇ ಹೊರಟು ಹೋಗುತ್ತಿತ್ತು. ಬ್ರಹಸ್ಪತಿಗಳು ಅಲ್ಲಿದ್ದ ಕಾರಣ, ಅವರು ಶಿವನನ್ನು ಸಮಾಧಾನ ಪಡಿಸಿ, ಇಂದ್ರನನ್ನು ಉಳಿಸಿದರು ಎಂದು ಪುರಾಣ ಕಥೆಯಲ್ಲಿದೆ.