ಈ ಭೂಮಿಯ ಮೇಲೆ ಜನಿಸುವ ಪ್ರತೀ ಜೀವಿಗೂ ಸಾವು ಕಟ್ಟಿಟ್ಟ ಬುತ್ತಿ. ಹುಟ್ಟಿದವನು ಸಾಯಲೇಬೇಕು. ಹಾಗಾಗಿ ಜೀವನ ನಶ್ವರ ಅಂತಾ ಹೇಳಲಾಗುತ್ತದೆ. ಆದರೂ ಕೂಡ ನಾವು, ಹಲವು ಆಸೆ ಆಕಾಂಕ್ಷೆಗಳನ್ನ ಇರಿಸಿಕೊಂಡು ಬದುಕುವುದೇನು ಬಿಡೋದಿಲ್ಲಾ. ಆದ್ರೆ ಮನುಷ್ಯ ಸತ್ತ ಬಳಿಕ, ಅವನ ಆತ್ಮ 24 ಗಂಟೆಯಾದ ಮೇಲೆ ವಾಪಸ್ ತಮ್ಮವರ ಬಳಿ ಬರುತ್ತದೆಯಂತೆ. ಹೀಗ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗರುಡ ಪುರಾಣದ ಪ್ರಕಾರ ಓರ್ವ ವ್ಯಕ್ತಿ ಮೃತಪಟ್ಟ 24 ಗಂಟೆ ಬಳಿಕ ಅವನ ಆತ್ಮ ಮತ್ತೆ ಅವನ ಮನೆಗೇ ಬರುತ್ತದೆಯಂತೆ. ಹೀಗೆ ಬಂದ ಆತ್ಮ 13 ದಿನಗಳ ಕಾಲ ಅದೇ ಮನೆಯಲ್ಲಿ ವಾಸ ಮಾಡುತ್ತದೆ ಅಂತಾ ಹೇಳಲಾಗಿದೆ. ತನ್ನ ಶವವನ್ನು ಮುಂದಿಟ್ಟುಕೊಟ್ಟು, ತನ್ನ ಸಂಬಂಧಿಕರು ಕಮ್ಣೀರು ಸುರಿಸುತ್ತಿರುವುದನ್ನು ಕಂಡು, ಆ ಆತ್ಮವೂ ಕೂಡ ದುಃಖ ಪಡುತ್ತದೆ. ಕಣ್ಣೀರು ಸುರಿಸುತ್ತದೆ ಅಂತಾ ಹೇಳಲಾಗಿದೆ.
ಅಲ್ಲದೇ, ತನ್ನ ದೇಹವನ್ನು ಪ್ರವೇಶಿಸಲು ಆ ಆತ್ಮವು ಪ್ರಯತ್ನ ಪಡುತ್ತದೆ. ಆದ್ರೆ ಅದು ಯಮನ ಪಾಶದಲ್ಲಿರುವ ಕಾರಣಕ್ಕೆ, ಅದಕ್ಕೆ ಪುನಃ ದೇಹ ಸೇರಲಾಗುವುದಿಲ್ಲ. ಹೀಗಾಗಿ ಏನು ಮಾಡಬೇಕೆಂದು ಅರಿಯದೇ, ಆತ್ಮ ಒದ್ದಾಡುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದಾದ ಬಳಿಕ ಆತ್ಮಕ್ಕೆ ಯಮಲೋಕಕ್ಕೆ ಹೋಗುವಷ್ಟು ಬಲವಿರುವುದಿಲ್ಲ.
ಇದೇ ಕಾರಣಕ್ಕೆ ಮೃತರ ಸಂಬಂಧಿಕರು, 13 ದಿನಗಳ ಕಾಲ, ಶೋಕವನ್ನಾಚರಿಸುತ್ತಾರೆ. 12ನೇ ದಿನಕ್ಕೆ ಪಿಂಡ ಪ್ರಧಾನ ಮಾಡಿ, ಶ್ರಾದ್ಧ ಕಾರ್ಯಗಳನ್ನು ಮಾಡುತ್ತಾರೆ. 13ನೇ ದಿನ ಕೊನೆಯದಾಗಿ ಪಿಂಡ ಪ್ರಧಾನ ಮಾಡಿ, ಆತ್ಮಕ್ಕೆ ಮುಕ್ತಿ ಕೊಡಿಸುತ್ತಾರೆ. ಈ ವೇಳೆ ಆ ಆತ್ಮಕ್ಕೆ ಯಮಲೋಕಕ್ಕೆ ಹೋಗುವ ಬಲ ಬರುತ್ತದೆ. ತದನಂತರ ಆ ಆತ್ಮ ತಮ್ಮವರನ್ನು ಬಿಟ್ಟು, ಪರಲೋಕಕ್ಕೆ ಹೋಗುತ್ತದೆ.