Health Tips: ನಾವು ಪ್ರತಿದಿನ ಆರೋಗ್ಯಕರ ಆಹಾರಗಳನ್ನು ಸೇವಿಸಿದಾಗ, ನಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡೂ ಉತ್ತಮವಾಗಿರುತ್ತದೆ. ಆಹಾರ ಆರೋಗ್ಯಕರವಾಗಿರಬೇಕು ಅಂದ್ರೆ ನಾವು ಸೇವಿಸುವ ಆಹಾರ ಹಸಿಯಾಗಿರಬೇಕು ಇನ್ನು ಕೆಲವು ಸರಿಯಾಗಿ ಬೇಯಿಸಿರಬೇಕು.
ಹಸಿಯಾದ ಆಹಾರ ಅಂದ್ರೆ, ಹಣ್ಣು, ತರಕಾರಿ, ಮೊಳಕೆ ಕಾಳು, ಮಜ್ಜಿಗೆ, ಮೊಸರು, ತುಪ್ಪ, ಎಳನೀರು ಇತ್ಯಾದಿ. ಬೇಯಿಸಿದ ಆಹಾರವೆಂದರೆ, ದೋಸೆ, ಇಡ್ಲಿ, ಅನ್ನ, ಸಾರು ಇಂಥವುಗಳು. ಯಾವ ಆಹಾರವನ್ನು ಬೇಯಿಸಿ ತಿನ್ನಬೇಕೋ, ಆ ಆಹಾರವನ್ನು ಸರಿಯಾಗಿ ಬೇಯಿಸಿಯೇ ತಿನ್ನಬೇಕು. ಇಲ್ಲವಾದಲ್ಲಿ, ಅನಾರೋಗ್ಯಕ್ಕೀಡಾಗುತ್ತೇವೆ. ಈ ಬಗ್ಗೆ ಆಹಾರ ತಜ್ಞೆಯಾಗಿರುವ ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ.
ನಾವು ಆಹಾರವನ್ನು ಸರಿಯಾಗಿ ಬೇಯಿಸಿ ತಿನ್ನದಿದ್ದಲ್ಲಿ, ಗ್ಯಾಸ್ಟ್ರಿಕ್ ಸಮಸ್ಯೆಯಾಗುತ್ತದೆ. ಹಲವಾರು ರೀತಿಯಿಂದ ದೇಹದಲ್ಲಿ ಬ್ಯಾಕ್ಟಿರಿಯಾ ಉಂಟಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಉತ್ತಮ ಪರಿಹಾರ ಅಂದ್ರೆ, ನಾವು ಆಹಾರವನ್ನು ಸರಿಯಾಗಿ ಬೇಯಿಸಿ ತಿನ್ನಬೇಕು. ಚೆನ್ನಾಗಿ ನೀರು ಕುಡಿಯಬೇಕು. ಮಜ್ಜಿಗೆ, ಪುದೀನಾ ಸೊಪ್ಪಿನ ತಂಬುಳಿಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಇನ್ನು ನಾವು ಸುಮ್ಮನೆ ನೀರು ಕುಡಿಯು ಬದಲು, ನೀರಿಗೆ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ಇಡೀ ದಿನ ಪದೇ ಪದೇ ಕುಡಿಯುತ್ತಿದ್ದರೆ, ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ. ಜೀರಿಗೆ ದೇಹಕ್ಕೆ ತಂಪು ನೀಡುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..