Health Tips: ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆದರೆ, ನಾವು ಆರೋಗ್ಯವಾಗಿರುತ್ತೇವೆ. ಅದೇ ದೇಹದಲ್ಲಿ ರಕ್‌ತ ಸಂಚಾರವಾಗುವ ವೇಳೆ ತೊಂದರೆಯಾದ್ರೆ, ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ರಕ್ತ ಸಂಚಾರವಾಗದೇ, ನಿಂತಲ್ಲೇ ನಿಂತರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇದ್ದರೆ, ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ನಮ್ಮ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರ, ನಾವು ಹೆಚ್ಚು ಹೊತ್ತು ಕೂತಲ್ಲೇ ಕೂರಬಾರದು. ನಿಂತಲ್ಲೇ ನಿಲ್ಲಬಾರದು. ಹೀಗಾದಾಗ ಮಾತ್ರ ದೇಹದಲ್ಲಿ ಒಂದು ಕಡೆ ರಕ್ತ ಸೇರಿ, ಸರಿಯಾಗಿ ರಕ್ತ ಸಂಚಾರವಾಗದೇ, ರಕ್ತನಾಳ ಉಬ್ಬಿಕೊಳ್ಳುತ್ತದೆ. ಆಗಲೇ ವೆರಿಕೋಸ್ ವೇನ್ಸ್ ಎಂಬ ರಕ್ತನಾಳದ ಸಮಸ್ಯೆ ಬರುತ್ತದೆ ಅಂತಾರೆ ವೈದ್ಯರು.
ಇನ್ನು ಉಗುರು ತೆಗಿಯುವಾಗಲೂ ಎಚ್ಚರಿಕೆಯಿಂದ ಇರಬೇಕು. ಮುಂದಿನ ಉಗುರು ಮಾತ್ರ ಕತ್ತರಿಸಬೇಕು. ಬದಿಯ ಚರ್ಮವನ್ನು ಸೇರಿ ಉಗುರು ಕತ್ತರಿಸಿದಲ್ಲಿ, ಅದರಿಂದ ನೋವು ಬರುವ ಸಾಧ್ಯತೆ ಇರುತ್ತದೆ. ಚರ್ಮದಲ್ಲಿ ಕೀವು ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಮುಂದಿನ ಭಾಗದ ಉಗುರನ್ನಷ್ಟೇ ಕತ್ತರಿಸಬೇಕೇ ಹೊರತು, ಬದಿಯ ಭಾಗದ ಉಗುರನ್ನು ಕತ್ತರಿಸಬೇಡಿ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..