Monday, November 25, 2024

Latest Posts

ಚಳಿಗಾಲದಲ್ಲಿ ದೇಹವನ್ನ ಬೆಚ್ಚಗಿರಿಸದಿದ್ದಲ್ಲಿ ಏನಾಗುತ್ತೆ?

- Advertisement -

Health Tips: ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸಬೇಕು. ಬಿಸಿ ಬಿಸಿಯಾಗಿರುವ ತಿಂಡಿಯನ್ನೇ ತಿನ್ನಬೇಕು. ಬಿಸಿ ನೀರು ಕುಡಿಯಬೇಕು ಅಂತಾ ಹೇಳಲಾಗುತ್ತದೆ. ಏಕೆಂದರೆ, ಚಳಿಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ತುಂಬಾ ಮುಖ್ಯವಾಗಿರುತ್ತದೆ. ಈ ಕಾರಣಕ್ಕೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಬೇಕು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸದಿದ್ದಲ್ಲಿ, ಏನಾಗುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ ನೋಡಿ…

ವೈದ್ಯರಾದ ಡಾ.ಹರೀಶ್ ಪುರಾಣಿಕ್ ಈ ಬಗ್ಗೆ ವಿವರಿಸಿದ್ದು, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸದಿದ್ದಲ್ಲಿ, ಕೈ ಕಾಲು, ಮೂಳೆ ನೋವು ಬರುತ್ತದೆ. ಹಾಗಾಗಿ ದೇಹವನ್ನು ಆದಷ್ಟು ಬೆಚ್ಚಗೆ ಇರಿಸಬೇಕು ಅಂತಾರೆ ವೈದ್ಯರು. ಇನ್ನು ಚಳಿಗಾಲದಲ್ಲಿ ಕೈ ಕಾಲು ನೋವು ಹೆಚ್ಚಾದಾಗ, ಆ ಸ್ಥಳಕ್ಕೆ ಶಾಕ ಕೊಡಬೇಕು. ಎಣ್ಣೆ ಮಸಸಾಜ್ ಮಾಡಬೇಕು. ಬಿಸಿ ಬಿಸಿ ನೀರು ಹಾಕಬೇಕು. ಇನ್ನು ನೀವು ಏನೇ ಮಾಡಿದರೂ 2 ವಾರವಾದರೂ ಆ ಸ್ಥಳದಲ್ಲಿ ನೋವು ಕಡಿಮೆಯಾಗದಿದ್ದಲ್ಲಿ, ನೀವು ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಹೋಗಲೇಬೇಕು.

ಇನ್ನು ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕೈ ಕಾಲು ನೋವು, ಸೊಂಟ ನೋವು, ಬೆನ್ನು ನೋವು ಉಂಟಾಗುತ್ತದೆ. ಈ ನೋವಾಗಲು ಕಾರಣವೇನು ಅಂದ್ರೆ, ನಾವು ದೈಹಿಕವಾಗಿ ಕೆಲಸ ಮಾಡುವುದನ್ನು ಕಡಿಮೆ ಮಾಡಿದಾಗ, ಈ ರೀತಿಯ ನೋವು ಉಂಟಾಗುತ್ತದೆ. ನೀವು ಮನೆಯಲ್ಲಿ ಪ್ರತಿದಿನ ಚೆನ್ನಾಗಿ ಮನೆಕೆಲಸಗಳನ್ನು ಮಾಡಿಕೊಂಡಿದ್ದು, ನಾಲ್ಕು ದಿನ ರೆಸ್ಟ್ ತೆಗೆದುಕೊಳ್ಳಲು ಎಲ್ಲಾದರೂ ಹೋದರೆ, ಅಲ್ಲಿ ನಿಮಗೆ ಈ ರೀತಿಯ ದೇಹದ ನೋವುಂಟಾಗುತ್ತದೆ. ಏಕೆಂದರೆ, ನೀವು ಆ ನಾಲ್ಕು ದಿನ ಕೆಲಸ ಮಾಡುವುದನ್ನು ನಿಲ್ಲಿಸಿರುತ್ತೀರಿ. ಫಿಸಿಕಲ್ ಆ್ಯಕ್ಟಿವಿಟಿ ಕಡಿಮೆಯಾದಾಗ, ಈ ರೀತಿ ನೋವು ಶುರುವಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss