ಹೆಣ್ಣು ಮಕ್ಕಳು ಎತ್ತರಕ್ಕೆ ತಕ್ಕ ತೂಕ ಹೊಂದಿರದೇ ಇದ್ದಲ್ಲಿ ಏನಾಗುತ್ತದೆ..?

Health Tips: ಓರ್ವ ಆರೋಗ್ಯಕರ ಮನುಷ್ಯ, ಅವನ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕಾಗಿರುತ್ತದೆ. ಎತತ್ತರಕ್ಕೆ ತಕ್ಕ ತೂಕವಿರದೇ ಇದ್ದಲ್ಲಿ, ಅಥವಾ ಅಗತ್ಯಕ್ಕಿಂತ ಹೆಚ್ಚು ತೂಕವಿದ್ದಲ್ಲಿ, ಅದು ಅನಾರೋಗ್ಯದ ಸಂಕೇತವಾಗಿರುತ್ತದೆ. ಅದೇ ರೀತಿ ಹೆಣ್ಣು ಮಕ್ಕಳು ಕೂಡ ತಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕು. ಈ ಬಗ್ಗೆ ವೈದ್ಯರಾದ ಚಂದ್ರಿಕಾ ಅವರು ವಿವರಿಸಿದ್ದಾರೆ ನೋಡಿ..

ಪಿಸಿಓಎಸ್, ಪಿಸಿಓಡಿ ಇರುವವರು ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕು. ಹಾಗಾಗಿ ಅವರು ಡಯಟ್ ಮಾಡುವುದು ಅತೀ ಮುಖ್ಯವಾಗಿರುತ್ತದೆ. ಪಿಸಿಓಡಿ ಇದ್ದವರು ಬೀದಿ ಬದಿ ತಿನಿಸು, ಜಂಕ್‌ಫುಡ್, ಮೈದಾ ಸಕ್ಕರೆಯಿಂದ ಮಾಡಿದ ತಿಂಡಿ, ಸಿಹಿ ತಿಂಡಿ ಸೇವನೆ ತ್ಯಜಿಸಬೇಕು. ಹೀಗೆಲ್ಲ ಮಾಡಿ, ಡಯಟ್ ಮಾಡಿದಾಗಲೇ, ನೀವು ಪಿಸಿಓಡಿಯನ್ನು ಕಂಟ್ರೋಲಿಗೆ ತರಬಹುದು.

ಇನ್ನು ಪಿಸಿಓಎಸ್ ಇರುವವರಿಗೆ ದಪ್ಪ ಹೊಟ್ಟೆ, ದಪ್ಪ ತೊಡೆ, ಮುಖದಲ್ಲಿ ಕೂದಲು ಬೆಳೆಯುವುದು. ಸರಿಯಾಗಿ ಮುಟ್ಟಾಗದಿರುವುದು. ಈ ತೊಂದರೆಗಳೆಲ್ಲ ಆಗುತ್ತದೆ. ಇಂಥ ಸಂದರ್ಭದಲ್ಲಿ ವೈದ್ಯರು ಹಲವು ಡಯಟ್ ಮಾಡಲು ಹೇಳುತ್ತಾರೆ. ಗೋಬಿ, ಪಾನೀಪುರಿ ಸೇರಿ, ಬೀದಿ ಬದಿ ಸಿಗುವ, ಹೊಟೇಲ್‌ನಲ್ಲಿ ಸಿಗುವ ತಿಂಡಿಗಳನ್ನು ಸೇವಿಸಬಾರದು ಎನ್ನುತ್ತಾರೆ.

ಪಿಸಿಓಎಸ್ ಇದ್ದವರು ಸಕ್ಕರೆ, ಜಂಕ್‌ಫುಡ್, ಬೇಕರಿ ಫುಡ್ ಸೇರಿ ತೂಕ ಹೆಚ್ಚಿಸುವ ಆಹಾರ ಸೇವನೆ ಕಡಿಮೆ ಮಾಡಿದ್ದಲ್ಲಿ, ಸಮಯಕ್ಕೆ ಸರಿಯಾಗಿ ಋತುಚಕ್ರವಾಗುತ್ತದೆ. ಮುಖದಲ್ಲಿ ಮೊಡವೆ, ಕೂದಲು ಹೋಗುತ್ತದೆ. ಸೌಂದರ್ಯ , ಆರೋಗ್ಯ ಎರಡೂ ಮರಳಿ ಬರುತ್ತದೆ. ಆದರೆ ನೀವು ಜೀವಮಾನ ಪೂರ್ತಿ ಇದೇ ರೀತಿ ಡಯಟ್ ಫಾಲೋ ಮಾಡ್ಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author