Health Tips: ಹಲ್ಲಿನ ಸಮಸ್ಯೆ ಬಗ್ಗೆ, ಟೂತ್ ಪೇಸ್ಟ್, ಟೂತ್ ಬ್ರಶ್ ಬಳಕೆ ಬಗ್ಗೆ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ಇಂದು ವೈದ್ಯರು ಪ್ರತಿದಿನ ಎರಡು ಬಾರಿ ಬ್ರಶ್ ಮಾಡದೇ ಇದ್ದಲ್ಲಿ ಏನಾಗುತ್ತದೆ ಅಂತಾ ವಿವರಿಸಿದ್ದಾರೆ ನೋಡಿ..
ಯಾರು ಹೆಚ್ಚು ಸಕ್ಕರೆ ಅಂಶವಿರುವ ತಿಂಡಿ, ಸಿಹಿ ತಿಂಡಿ ತಿನ್ನುತ್ತಾರೋ, ಅಂಥವರಿಗೆ ಕ್ಯಾವಿಟಿ ಬರುತ್ತದೆ. ಸಲೈವಾ ಕಡಿಮೆ ಇರುವ ಜನರಲ್ಲಿ ಕ್ಯಾವಿಟಿ ಬರುತ್ತದೆ. ಮೂರನೇಯ ಕಾರಣವೇನೆಂದರೆ, ಯಾರು ಸರಿಯಾಗಿ ಬ್ರಶ್ ಮಾಡುವುದಿಲ್ಲವೋ, ಅಂಥವರಲ್ಲಿ ಕ್ಯಾವಿಟಿ ಕಂಡು ಬರುತ್ತದೆ. ಹಾಗಾಗಿಯೇ ದಿನಕ್ಕೆ ಎರಡು ಬಾರಿ ಬ್ರಶ್ ಮಾಡಬೇಕು ಅಂತಾ ಹೇಳುವುದು.
ಕೆಲವರು ಮೂರ್ನಾಲ್ಕು ದಿನಗಳವರೆಗೂ ಬ್ರಶ್ ಮಾಡುವುದಿಲ್ಲ. ಬರೀ ಬಾಯಿ ಮುಕ್ಕಳಿಸಿ, ಸುಮ್ಮನಾಗಿ ಬಿಡುತ್ತಾರೆ. ಇಂಥವರಲ್ಲಿ ಬೇಗ ಹಲ್ಲು ನೋವಿನ ಸಮಸ್ಯೆ ಕಂಡುಬರುತ್ತದೆ. ಹಾಗಾಗಿ ಯಾರಿಗೆ ಹಲ್ಲು ಹಾಳಾಗುತ್ತಿದೆ ಎಂಬ ಅನುಮಾನ ಬರುತ್ತದೆಯೋ ಅಂಥವರು ಬೇಗ ಬಂದು ಚಿಕಿತ್ಸೆ ಪಡೆದು ಹೋಗಬೇಕು ಅಂತಾರೆ ವೈದ್ಯರು. ಕ್ಯಾವಿಟಿ ಹೆಚ್ಚಾದಾಗ ಬಂದರೆ, ರೂಟ್ ಕೆನಲ್ ಚಿಕಿತ್ಸೆ ಅತ್ಯಾವಶ್ಯಕವಾಗಿರುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..