Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಋತುಮತಿಯಾದಾಗ, ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಬಟ್ಟೆ ಬಳಸಿದರೆ, ಅದನ್ನು ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ, ಇಸ್ತ್ರೀ ಮಾಡಬೇಕು. ಅದೇ ರೀತಿ ಪ್ಯಾಡ್ ಬಳಸುವಾಗಲೂ, ಸಮಯಕ್ಕೆ ತಕ್ಕಂತೆ ಅದನ್ನು ಬದಲಿಸಬೇಕು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ಈ ಬಗ್ಗೆ ಡಾ. ಚಂದ್ರಿಕಾ ಆನಂದ್ ಮಾತನಾಡಿದ್ದು, ಋತುಸ್ರಾವದ ವೇಳೆ ಪ್ಯಾಡ್ ಬಳಸುವವರಿಗೆ ವೈದ್ಯರು ಹೇಳುವುದೇನೆಂದರೆ, ಈ ಸಮಯದಲ್ಲಿ ದಿನಕ್ಕೆ 3ರಿಂದ 4 ಪ್ಯಾಡ್ ಬಳಸಬೇಕಾಗುತ್ತದೆ. 6 ಗಂಟೆಗೆ ಒಂದು ಪ್ಯಾಡ್ ಬದಲಾವಣೆ ಮಾಡುವುದು ಮುಖ್ಯವಾಗಿರುತ್ತದೆ. ನೀವು ಪ್ಯಾಡ್ ಬದಲಾಯಿಸದೇ, ಹೆಚ್ಚು ಹೊತ್ತು ಇರಿಸಿದರೆ, ಅದು ಲೀಕ್ ಆಗುವುದಲ್ಲದೇ, ಆರೋಗ್ಯವೂ ಹಾಳಾಗುತ್ತದೆ.
ಇನ್ನು ನಿಮಗೆ ಹೆಚ್ಚು ಬ್ಲೀಡಿಂಗ್ ಆಗುತ್ತಿದ್ದರೆ, ವೈದ್ಯರ ಬಳಿ ಹೋಗಿ ಈ ಬಗ್ಗೆ ಪರೀಕ್ಷಿಸಿಕೊಳ್ಳಿ. ಕೆಲವರಿಗೆ ಒಂದು ತಿಂಗಳು ಕಡಿಮೆ ಬ್ಲೀಡಿಂಗ್ ಆದರೆ, ಇನ್ನೊಂದು ತಿಂಗಳು ಹೆಚ್ಚು ಬ್ಲೀಡಿಂಗ್ ಆಗುತ್ತದೆ. ಹೀಗಾದಾಗ ಆರೋಗ್ಯ ಚೆನ್ನಾಗಿದ್ದರೆ ಉತ್ತಮ. ಆದರೆ ಪ್ರತೀ ತಿಂಗಳು ಹೆಚ್ಚು ಬ್ಲೀಡಿಂಗ್ ಆಗುತ್ತಿದ್ದರೆ, ಅದು ಅನಾರೋಗ್ಯದ ಸಂಕೇತವಾಗಿರುತ್ತದೆ. ಹಾಗಾಗಿ ಈ ಬಗ್ಗೆ ಖಂಡಿತವಾಗಿಯೂ ವೈದ್ಯರ ಬಳಿ ವಿಚಾರಿಸಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ…




