Health Tips: ಮದ್ಯ ಸೇವನೆ ಮಾಡೋದೇ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೆ ಮದ್ಯ ಸೇವನೆ ಮಾಡುವುದಿದ್ದರೂ, ಅದು ಲಿಮಿಟಿನಲ್ಲಿ ಇರಬೇಕು ಅಂತಾ ಹೇಳಲಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಮದ್ಯ ಸೇವನೆ ಮಾಡಿದಾಗ, ಲಿವರ್ ಡ್ಯಾಮೇಜ್ ಆಗುತ್ತದೆ. ಇನ್ನು ಮದ್ಯ ಸೇವನೆಯ ಜೊತೆಗೆ ಆಹಾರವನ್ನು ಸೇವಿಸದಿದ್ದಲ್ಲಿ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾಾರ, ಮದ್ಯವನ್ನು ನಿಧಾನವಾಗಿ, ಲಿಮಿಟಿನಲ್ಲಿ ಸೇವಿಸಬೇಕು. ಮದ್ಯದ ಜೊತೆಗೆ ಹೆಚ್ಚು ನೀರು ಮಿಕ್ಸ್ ಮಾಡಬೇಕು. ಅಲ್ಲದೇ, ಮದ್ಯಸೇವನೆ ಮಾಡುವುದರ ಜೊತೆಗೆ, ಆಹಾರ ಸೇವನೆ ಕೂಡ ಮಾಡಬೇಕು. ಹೀಗೆ ಮಾಡುವುದರಿಂದ ಲಿವರ್‌ಗೆ ಡ್ಯಾಮೇಜ್ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ನೀವು ಮದ್ಯವನ್ನು ಲಿಮಿಟ್ ಮೀರಿ, ನೀರು ಬೆರೆಸದೇ, ಸೇವಿಸಿದರೆ ಮತ್ತು ಮದ್ಯದೊಂಗಿದೆ ಆಹಾರ ಸೇವಿಸದಿದ್ದಲ್ಲಿ, ಲಿವರ್ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬಗ್ಗೆ ವೈದ್ಯರು ಇನ್ನೂ ಏನೇನು ಹೇಳಿದ್ದಾರೆಂದು ತಿಳಿಯಲು ವೀಡಿಯೋ ನೋಡಿ..




