Spiritual: ಹಿಂದೂ ಧರ್ಮದಲ್ಲಿ ಹುಟ್ಟಿದ ಪ್ರತೀ ಮನುಷ್ಯನಿಗೂ ಕುಲದೇವರು ಅಂತಾ ಇದ್ದೇ ಇರುತ್ತದೆ. ಆ ಕುಟುಂಬ ಪೂಜಿಸಿಕೊಂಡು ಬಂದ ದೇವರ ದೇವಸ್ಥಾನಕ್ಕೆ ಪ್ರತೀ ವರ್ಷ ಹೋಗಲೇಬೇಕು. ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಬರಲೇಬೇಕು ಅಂತಾ ಇರುತ್ತದೆ. ಹಾಗಾದರೆ ಯಾಕೆ ಕುಲದೇವರ ದರ್ಶನವನ್ನ ಪ್ರತೀ ವರ್ಷ ತಪ್ಪದೇ ಮಾಡಬೇಕು ಅಂತಾ ಹೇಳೋದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನಿಮ್ಮ ಮನೆಯ ದೇವರ ಕೋಣೆಯಲ್ಲಿ ನಿಮ್ಮ ಕುಲದೇವರ ಫೋಟೋವನ್ನಾದರೂ ನೀವು ಇರಿಸಿ, ಪ್ರತಿದಿನ ಅದ್ಕಕೆ ಪೂಜೆ ಮಾಡಬೇಕು. ಅಥವಾ ಫೋಟೋ ಇಡದೇ, ಆ ಕುಲದೇವರನ್ನು ನೆನೆದು ಪೂಜೆ ಮಾಡಬೇಕು. ವರ್ಷಕ್ಕೊಮ್ಮೆಯಾದರೂ ಕುಲದೇವರ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋಗಿ, ದರ್ಶನ ಪಡೆದು ಪೂಜೆ ಮಾಡಬೇಕು. ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ಕುಲದೇವತೆ ಬಗ್ಗೆ, ಕುಲದೇವರ ದರ್ಶನ, ಆರಾಧನೆ ಬಗ್ಗೆ ನೀವು ತಿಳಿಸಿ ಹೇಳಬೇಕು.
ಏಕೆಂದರೆ ಕುಲದೇವರನ್ನ ಪೂಜಿಸದಿದ್ದಲ್ಲಿ, ನಿಮ್ಮ ಸಂತತಿಯೇ ನಾಶವಾಗುವ ಸಾಧ್ಯತೆ ಇದೆ. ನೀವು ಕುಲದೇವರನ್ನು ಪೂಜಿಸದೇ, ಬೇರೆ ಯಾವ ದೇವರ ಪೂಜೆ ಮಾಡಿದರೂ, ಆರಾಧನೆ ಮಾಡಿದರೂ, ಅದರ ಫಲ ನಿಮಗೆ ದೊರಕುವುದಿಲ್ಲ ಎಂಬ ನಂಬಿಕೆ ಇದೆ. ಅದೇ ನೀವು ಕುಲದೇವರನ್ನು ಪೂಜಿಸುತ್ತ, ಬೇರೆ ದೇವರುಗಳನ್ನ ನಂಬಿದರೂ, ನಿಮಗೆಲ್ಲ ಒಳ್ಳೆಯದಾಗುತ್ತದೆ.
ಕುಲದೇವತೆಯನ್ನ ಮರೆತರೆ, ಮನೆಯಲ್ಲಿ ಪದೇ ಪದೇ ಜಗಳವಾಗುತ್ತದೆ. ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ. ಜಾತಕದಲ್ಲಿ ದೋಷ ಉಂಟಾಗುತ್ತದೆ. ನೀವು ಮಾಡುವ ಯಾವ ಕಾರ್ಯವೂ ಕೈಗೂಡುವುದಿಲ್ಲ. ನಿಮ್ಮ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಕುಲದೇವತೆಯ ಪೂಜೆ, ದರ್ಶನ ಮಾಡುವುದು ತುಂಬಾ ಮುಖ್ಯ.
ಇಷ್ಟೇ ಅಲ್ಲದೇ, ಮನೆಯಲ್ಲಿ ಗೃಹಪ್ರವೇಶ, ಮದುವೆ, ಮುಂಜಿಯಂಥ ಶುಭಕಾರ್ಯ ಇದ್ದಲ್ಲಿ, ಮೊದಲು ಕುಲದೇವತೆಯ ದರ್ಶನ ಮಾಡಿ, ಬಳಿಕ ಶುಭಕಾರ್ಯದ ದಿನ, ಕುಲದೇವತೆಯ ಪೂಜೆ ಮಾಡಿ, ನಿಮ್ಮ ಕೆಲಸ ಮುಂದುವರಿಸಬೇಕು. ಆಗ ಶುಭಕಾರ್ಯ ನಿರ್ವಿಘ್ನವಾಗಿ ನಡೆಯುತ್ತದೆ. ಒಟ್ಟಾರೆಯಾಗಿ, ಕುಲದೇವರನ್ನ ಮರೆಯದೇ, ಭಕ್ತಿಯಿಂದ ಪೂಜಿಸುತ್ತಾರೋ. ಅವರಿಗೆ ಸದಾ ಕಾಲ ಒಳ್ಳೆಯದಾಗುತ್ತದೆ.